ಸಾರಾಂಶ
ತಾಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಕದಿರಯ್ಯ ಅವರ ಜಮೀನಿನಲ್ಲಿ ಮುಸುಕಿನ ಜೋಳದ ಫಸಲನ್ನು ಹಾಕಲಾಗಿದ್ದು, ಜಮೀನಿನ ಸುತ್ತಲೂ ಕಲ್ಲು ಕಂಬ ಮತ್ತು ಮೆಸ್ ಅಳವಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಹನೂರು ಕಾಡಾನೆಗಳ ದಾಳಿಗೆ ಮುಸುಕಿನ ಜೋಳದ ಫಸಲು ನೆಲಸಮವಾಗಿದ್ದು, ಅರಣ್ಯ ಅಧಿಕಾರಿಗಳು ಪರಿಹಾರ ನೀಡಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.
ತಾಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಕದಿರಯ್ಯ ಅವರ ಜಮೀನಿನಲ್ಲಿ ಮುಸುಕಿನ ಜೋಳದ ಫಸಲನ್ನು ಹಾಕಲಾಗಿದ್ದು, ಜಮೀನಿನ ಸುತ್ತಲೂ ಕಲ್ಲು ಕಂಬ ಮತ್ತು ಮೆಸ್ ಅಳವಡಿಸಲಾಗಿದೆ. ಕಾಡಾನೆಗಳು ರಾತ್ರಿ ವೇಳೆ ಅರಣ್ಯ ಪ್ರದೇಶದಿಂದ ಬಂದಿರುವ ಕಾಡಾನೆಗಳು ಕಲ್ಲು ಕಂಬ ಮತ್ತು ತಂತಿ ಬೇಲಿಯನ್ನು ತುಳಿದು ಹಾಳು ಮಾಡಿದ್ದು ಲಕ್ಷಾಂತರ ರುಪಾಯಿ ನಷ್ಟ ಉಂಟು ಮಾಡಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.ಸಾಲ ಮಾಡಿ ಹಾಕಲಾಗಿರುವ ಬೆಳೆ ಮತ್ತು ತಂತಿಬೇಲಿ ನಾಶ:
ಇರುವ ಅಲ್ಪ ಸ್ವಲ್ಪ ನೀರು, ಜಮೀನಿನಲ್ಲಿ ಮುಸುಕಿನ ಜೋಳವನ್ನು ಹಾಕಲಾಗಿದ್ದು, ತೆನೆ ಕಟ್ಟಿ ಕಾಳ ಕಟ್ಟುವ ಸಮಯವಾಗಿದೆ. ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳು ತಂತಿ ಬೇಲಿ ಕಲ್ಲು ಕಂಬಗಳನ್ನು ಮುರಿದು ಹಾಕಿದ್ದು, ಬೆಳೆ ಸಹ ತಿಂದು ತುಳಿದು ಹಾಳು ಮಾಡಿವೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸೂಕ್ತ ಪರಿಹಾರಕ್ಕೆ ಒತ್ತಾಯ:
ದಿನದಿಂದ ದಿನಕ್ಕೆ ಅರಣ್ಯದಂಚಿನ ಭಾಗದಲ್ಲಿ ರೈತರ ಜಮೀನುಗಳಲ್ಲಿ ಬೆಳೆ ಹಾನಿ ಉಂಟಾಗುತ್ತಿದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತನಿಗೆ ಫಸಲು ತೆಗೆಯುವುದೇ ದೊಡ್ಡ ತಲೆನೊವಾಗಿ ಪರಿಣಮಿಸಿದೆ. ಬೆಳೆ ಬೆಳೆದು ಕುಟುಂಬದ ನಿರ್ವಹಣೆಗಾಗಿ ಮಾಡಲಾಗಿರುವ ಬೆಳೆ ಕೈ ಸೇರದೆ ನಷ್ಟ ಉಂಟಾಗಿರುವುದರಿಂದ ಅರಣ್ಯ ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಅರಣ್ಯದಂಚಿನಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಿ:
ಅರಣ್ಯಾಧಿಕಾರಿಗಳ ನಿರ್ಲಕ್ಷತನದಿಂದ ರೈತರ ಜಮೀನುಗಳಲ್ಲಿ ಬೆಳೆಯಲಾಗಿರುವ ಫಸಲು ರೈತರ ಕೈ ಸೇರದೆ ಕಾಡುಪ್ರಾಣಿಗಳ ಹಾವಳಿಗೆ ತುತ್ತಾಗಿ ಲಕ್ಷಾಂತರ ರುಪಾಯಿ ನಷ್ಟ ಉಂಟಾಗುತ್ತಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ನಷ್ಟ ಉಂಟಾಗಿರುವ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ರೈತ ಕದಿರಯ್ಯ ಒತ್ತಾಯಿಸಿದ್ದಾರೆ.ಅರಣ್ಯದಂಚಿನ ಜಮೀನುಗಳಲ್ಲಿ ರೈತರು ಬೆಳೆ ತೆಗೆಯಲು ಕಾಡುಪ್ರಾಣಿಗಳು ಬಂದು ಫಸಲು ತಿಂದು ನಷ್ಟ ಉಂಟು ಮಾಡುತ್ತಿದೆ. ಈ ಬಗ್ಗೆ ಹಲವಾರು ವರ್ಷಗಳಿಂದ ಶಾಶ್ವತ ಪರಿಹಾರ ನೀಡಲು ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ನಿರ್ಲಕ್ಷತನದಿಂದ ರೈತರ ಬೆಳೆ ಹಾನಿ ಉಂಟಾಗುತ್ತಿದೆ. ಹೀಗಾಗಿ ಜನಪ್ರತಿನಿಧಿಗಳು ಅಧಿಕಾರಿಗಳು ಇತ್ತ ಗಮನ ಹರಿಸಿ ಕಾಡುಪ್ರಾಣಿಗಳು ರೈತರ ಜಮೀನಿಗೆ ಬರದಂತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಅರಣ್ಯ ಇಲಾಖೆ ಕಚೇರಿ ಮುಂಭಾಗ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ.
ಶ್ರೀನಿವಾಸ್, ಕೆವಿಎನ್ ದೊಡ್ಡಿ ರೈತ ಮುಖಂಡHnr 1news, 1
ಹನೂರು ತಾಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಕದಿರಯ್ಯ ಜಮೀನಿನಲ್ಲಿ ಕಾಡಾನೆಗಳು ಮುಸ್ಕಿನ ಜೋಳದ ಫಸಲನ್ನು ತಿಂದು ಹಾಳು ಮಾಡಿದೆ ಈ ಬಗ್ಗೆ ರೈತ ಸಂಘಟನೆ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ;Resize=(128,128))
;Resize=(128,128))
;Resize=(128,128))