2022ರಲ್ಲಿಯೇ ಮಜ್ಜನಹಳ್ಳಿ ಗ್ರಾಮದ ಸರಕಾರಿ ಜಾಗವನ್ನು ಸಾರ್ವಜನಿಕ ಸ್ಮಶಾನಕ್ಕೆ ಜಿಲ್ಲಾಧಿಕಾರಿ ಆದೇಶ ಮೂಲಕ ಮೀಸಲಿಡಲಾಗಿದೆ. ಆದರೆ ಅದು ಬಳಕೆಗೆ ಬಂದಿರಲಿಲ್ಲ.ಮಜ್ಜನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಶವ ಸಂಸ್ಕಾರಕ್ಕೆ ಜಾಗವಿಲ್ಲದೇ ಕೆರೆ ಅಂಗಳದಲ್ಲಿ ಅಂತ್ಯಸಂಸ್ಕಾರಗಳನ್ನು ಮಾಡುತ್ತಿದ್ದರು. ಈ ಸಮಸ್ಯೆ ನಿವಾರಣೆಗೆಂದು ಅಧಿಕಾರಿಗಳು ಸ್ಥಳಕ್ಕೆ ತೆರಳಿದ ವೇಳೆ ಕೆಲವರು ಅಡ್ಡಿಪಡಿಸಿದ್ದರು. ಅಲ್ಲದೆ ಸ್ಮಶಾನ ಜಾಗದಲ್ಲಿ ಕಾನೂನು ಬಾಹಿರವಾಗಿ ಮಣ್ಣನ್ನು ತೆಗೆದು ಅಡ್ಡಿಪಡಿಸಲಾಗಿತ್ತು.

ಅರಕಲಗೂಡು: ತಾಲೂಕಿನ ಕೊಣನೂರು ಹೋಬಳಿಯ ತರಿಗಳಲೆ ಗ್ರಾಪಂ ವ್ಯಾಪ್ತಿಯ ಮಜ್ಜನಹಳ್ಳಿ ಗ್ರಾಮದ ಸರ್ವೆ ನಂಬರ್ 28ರಲ್ಲಿ ಒಂದು ಎಕರೆ ಸರಕಾರಿ ಜಾಗವನ್ನು ಸ್ಮಶಾನಕ್ಕೆ ಮೀಸಲಿಡಲಾಗಿದೆ. ಈ ಜಾಗವನ್ನು ಅಭಿವೃದ್ಧಿ ಮಾಡುವ ವೇಳೆ ಸ್ಥಳೀಯ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಲಾಗಿದೆ ಎಂದು ತಹಸೀಲ್ದಾರ್‌ ಕೆ.ಸಿ.ಸೌಮ್ಯ ತಿಳಿಸಿದರು.

2022ರಲ್ಲಿಯೇ ಮಜ್ಜನಹಳ್ಳಿ ಗ್ರಾಮದ ಸರಕಾರಿ ಜಾಗವನ್ನು ಸಾರ್ವಜನಿಕ ಸ್ಮಶಾನಕ್ಕೆ ಜಿಲ್ಲಾಧಿಕಾರಿ ಆದೇಶ ಮೂಲಕ ಮೀಸಲಿಡಲಾಗಿದೆ. ಆದರೆ ಅದು ಬಳಕೆಗೆ ಬಂದಿರಲಿಲ್ಲ.ಮಜ್ಜನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಶವ ಸಂಸ್ಕಾರಕ್ಕೆ ಜಾಗವಿಲ್ಲದೇ ಕೆರೆ ಅಂಗಳದಲ್ಲಿ ಅಂತ್ಯಸಂಸ್ಕಾರಗಳನ್ನು ಮಾಡುತ್ತಿದ್ದರು. ಈ ಸಮಸ್ಯೆ ನಿವಾರಣೆಗೆಂದು ಅಧಿಕಾರಿಗಳು ಸ್ಥಳಕ್ಕೆ ತೆರಳಿದ ವೇಳೆ ಕೆಲವರು ಅಡ್ಡಿಪಡಿಸಿದ್ದರು. ಅಲ್ಲದೆ ಸ್ಮಶಾನ ಜಾಗದಲ್ಲಿ ಕಾನೂನು ಬಾಹಿರವಾಗಿ ಮಣ್ಣನ್ನು ತೆಗೆದು ಅಡ್ಡಿಪಡಿಸಲಾಗಿತ್ತು. ಇಂದು ಪೊಲೀಸರು, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಸಮಸ್ಯೆ ತಿಳಿಗೊಳಿಸಲಾಗಿದೆ. ಅಲ್ಲದೆ ಜಾಗವನ್ನು ಜೆಸಿಬಿ ಮೂಲಕ ಟ್ರಂಚ್ ಹೊಡೆದು ಗ್ರಾಪಂಗೆ ನೀಡಲಾಗಿದೆ.ಮುಂದೆ ಅಭಿವೃದ್ಧಿಯನ್ನು ಅವರು ನಿರ್ವಹಿಸಲಿದ್ದಾರೆ ಎಂದು ಹೇಳಿದರು.ತಾಲೂಕಿನಲ್ಲಿ ಈಗಾಗಲೇ ಸ್ಮಶಾನಕ್ಕೆ ಮೀಸಲಿಟ್ಟಿರುವ ಜಾಗವನ್ನು ಯಾರೂ ಕೂಡ ಅತಿಕ್ರಮಣ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸಬಾರದು. ಸ್ಮಶಾನ ಆಯಾ ಗ್ರಾಮಸ್ಥರ ಶವ ಸಂಸ್ಕಾರಕ್ಕೆ ನಿಗದಿಯಾಗಿದ್ದು, ಜತೆಯಲ್ಲಿ ನಿಂತ್ತು ಅಭಿವೃದ್ಧಿಗೊಳಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.