ಚಿಕ್ಕಮಗಳೂರುನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅತ್ಯಂತ ಸಂಭ್ರಮ, ಸಡಗರ. ವಿದ್ಯಾರ್ಥಿಗಳೆಲ್ಲರೂ ಸಾಂಪ್ರದಾಯಿಕ ಉಡುಗೆ, ತೊಡುಗೆಯಲ್ಲಿ ಅತ್ಯಂತ ಸ್ಫೂರ್ತಿಯಿಂದ ಪಾಲ್ಗೊಂಡಿದ್ದು ಕಂಡು ಬಂದಿತು.

ವರ್ಷದ ಮೊದಲ ಹಬ್ಬವಾಗಿರುವ ಮಕರ ಸಂಕ್ರಾಂತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅತ್ಯಂತ ಸಂಭ್ರಮ, ಸಡಗರ. ವಿದ್ಯಾರ್ಥಿಗಳೆಲ್ಲರೂ ಸಾಂಪ್ರದಾಯಿಕ ಉಡುಗೆ, ತೊಡುಗೆಯಲ್ಲಿ ಅತ್ಯಂತ ಸ್ಫೂರ್ತಿಯಿಂದ ಪಾಲ್ಗೊಂಡಿದ್ದು ಕಂಡು ಬಂದಿತು. ವರ್ಷದ ಮೊದಲ ಹಬ್ಬವಾಗಿರುವ ಮಕರ ಸಂಕ್ರಾಂತಿ ಆಚರಣೆಗೆ ಇಡೀ ವಿದ್ಯಾಸಂಸ್ಥೆ ಮುಂಜಾನೆಯೇ ಅಲಂಕೃತಗೊಂಡು ಅಣಿಯಾಗಿತ್ತು. ವಿಶಿಷ್ಟಪೂರ್ಣ ಆಚರಣೆಗೆ ಸಿದ್ಧವಾಗಿದ್ದ ಶಾಲಾಡಳಿತ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ್ದು, ಪೋಷಕರು ಸಹ ಮಕ್ಕಳಿಗೆ ಸಾಥ್ ನೀಡಿದ್ದರು. ಈ ಉತ್ಸಾಹದಲ್ಲಿ ವಿದ್ಯಾರ್ಥಿಗಳೇ ವಿವಿಧ ಧಾನ್ಯಗಳನ್ನು ಶಾಲೆಗೆ ತಂದು ವೈಶಿಷ್ಟ್ಯಪೂರ್ಣ ಆಚರಣೆಗೆ ಮುನ್ನುಡಿ ಬರೆದರು. ಪ್ರಮುಖವಾಗಿ ಎಳ್ಳು, ರಾಗಿ, ಅಕ್ಕಿ, ತೊಗರಿಬೇಳೆ. ಕಡ್ಲೇಬೇಳೆ, ಹೆಸರುಬೇಳೆ ಮಾತ್ರ ವಲ್ಲದೆ, ತರಕಾರಿಗಳನ್ನು ಸಹ ತಂದಿದ್ದು, ಧಾನ್ಯಗಳನ್ನು ಒಟ್ಟುಗೂಡಿಸಿ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಸುಗ್ಗಿ ಹಬ್ಬದ ವಿಶೇಷ ವಾತಾವರಣ ನಿರ್ಮಾಣವಾಯಿತು. ಇದೇ ವೇಳೆ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷೆ ಎಸ್.ಶಾಂತಕುಮಾರಿ ಮಾತನಾಡಿ, ದಕ್ಷಿಣಾಯನದಿಂದ ಉತ್ತರಾಯಣ ಪುಣ್ಯಕಾಲಕ್ಕೆ ನಾವು ಕಾಲಿರಿ ಸಿದ್ದು, ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ಈ ಪರ್ವ ಕಾಲವನ್ನು ನಾವು ಅತ್ಯುತ್ತಮ ಕಾರ್ಯ ಗಳಿಗೆ ವಿನಿಯೋಗಿಸೋಣ. ಸಂಕ್ರಾಂತಿ ನಮ್ಮ ಕ್ಯಾಲೆಂಡರ್ ವರ್ಷದ ಮೊದಲನೇ ಹಬ್ಬವಾಗಿದ್ದು, ಅತ್ಯಂತ ಸ್ಫೂರ್ತಿಯುತ ದಿನ ಎಂದು ಶುಭ ಕೋರಿದರು. ವಿದ್ಯಾಸಂಸ್ಥೆ ಬೆಳವಣಿಗೆ ಕುರಿತಂತೆ ಪ್ರಸ್ತಾಪಿಸಿದ ಅವರು, ನಮ್ಮ ಸಂಸ್ಥೆ ಇದೀಗ ರಾಷ್ಟ್ರವ್ಯಾಪಿ ಮಾನ್ಯತೆ ಪಡೆದ ಸಿಬಿಎಸ್‌ಇ ಶೈಕ್ಷಣಿಕ ಪದ್ಧತಿ ಅಳವಡಿಸಿಕೊಳ್ಳುವ ಸಲುವಾಗಿ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಸಂಬಂಧಿಸಿದ ಸಮಿತಿಯಿಂದ ಪರಿಶೀಲನೆ ಕಾರ್ಯವೂ ಮುಗಿದಿದೆ. ಇನ್ನು 8 - 10 ದಿನಗಳಲ್ಲಿ ಈ ಪಠ್ಯ ಕ್ರಮಕ್ಕೆ ಅನುಮತಿ ದೊರೆಯಲಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಶೈಕ್ಷಣಿಕ ಮಟ್ಟವನ್ನು ಇನ್ನಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಸರ್ವರೂ ಕೈಜೋಡಿಸುವುದು ಅಗತ್ಯವಾಗಿದೆ ಎಂದರು. ಇದೇ ಸಂದರ್ಭ ಸಂಕ್ರಾಂತಿ ವಿಶೇಷದ ಬಗ್ಗೆ ಆಡಳಿತ ಮಂಡಳಿ ನಿರ್ದೇಶಕ ಎಂ.ಎನ್.ರಂಗನಾಥನ್ ಮಾತನಾಡಿದರು. ದಿನದ ವಿಶೇಷ ತಿನಿಸಾದ ಪೊಂಗಲ್ ಅನ್ನು ಸ್ಥಳದಲ್ಲೇ ತಯಾರಿಸಿ ಹಂಚಲಾಯಿತು. ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಪ್ರೇಕ್ಷಕರಿಗೆ ರಂಜನೆ ನೀಡಿದವು. ಸಂಸ್ಥೆ ಪ್ರಾಚಾರ್ಯರಾದ ಎಸ್.ಆರ್.ಹೇಮಾ, ಬೋಧಕ ವೃಂದ ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು. ವಿದ್ಯಾರ್ಥಿಗಳಿಂದ ಒಟ್ಟುಗೂಡಿಸಿದ ದವಸ ಧಾನ್ಯಗಳನ್ನು ಕಾರ್ಯಕ್ರಮದ ಬಳಿಕ ಅನ್ನದಾನ ಕಾರ್ಯಕ್ರಮ ನಡೆಯುವ ದೇವಸ್ಥಾನಗಳಿಗೆ ಸಮರ್ಪಿಸಲಾಯಿತು. 21 ಕೆಸಿಕೆಎಂ 3

ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಧಾನ್ಯದ ರಾಶಿಗೆ ಸಂಸ್ಥೆ ಅಧ್ಯಕ್ಷೆ ಶಾಂತಕುಮಾರಿ ಪೂಜೆ ಸಲ್ಲಿಸಿದರು.