ವಿಜಯಪುರ: ಪಟ್ಟಣದ ಕೋಟೆ ಬೀದಿಯಲ್ಲಿರುವ ಶ್ರೀ ಸೋಮೇಶ್ವರಸ್ವಾಮಿಗೆ ಮಕರ ಸಂಕ್ರಾಂತಿ ಪ್ರಯುಕ್ತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ವಿಜಯಪುರ: ಪಟ್ಟಣದ ಕೋಟೆ ಬೀದಿಯಲ್ಲಿರುವ ಶ್ರೀ ಸೋಮೇಶ್ವರಸ್ವಾಮಿಗೆ ಮಕರ ಸಂಕ್ರಾಂತಿ ಪ್ರಯುಕ್ತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುರಸಭೆ ಸದಸ್ಯರಾದ ಎಂ.ಸತೀಶ್ ಕುಮಾರ್ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು ರೈತರಿಗೆ ಸಂಕ್ರಾಂತಿ ಸುಗ್ಗಿ ಕಾಲವಾಗಿದೆ. ಇದು ಕೇವಲ ಹಬ್ಬವಲ್ಲ, ಕೃಷಿಕರ ಪರಿಶ್ರಮಕ್ಕೆ ಫಲ ದೊರಕುವ ಸಂತಸದ ಹಬ್ಬ. ನಮ್ಮ ಪೂರ್ವಿಕರು ಹಬ್ಬ ಹರಿದಿನಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸಲು ಮಾಡಿದ್ದಾರೆ. ಅವುಗಳನ್ನು ಮುಂದಿನ ಪೀಳಿಗೆಯೂ ಮಾಡಬೇಕಿದೆ ಎಂದರು.ಯೋಗಗುರು ವಿ.ರವೀಂದ್ರ ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಜನಾಂಗದವರು ಆಚರಿಸುವ ಪ್ರತಿಯೊಂದು ಹಬ್ಬ ಹಾಗೂ ಸಂಪ್ರದಾಯಗಳಲ್ಲಿಯೂ ವೈಜ್ಞಾನಿಕ ಅಂಶಗಳು ಅಡಕವಾಗಿವೆ. ಅವುಗಳ ಅರ್ಥವನ್ನು ತಿಳಿದು ಆಚರಿಸಿದರೆ ಯಾವ ಆಚರಣೆಯೂ ಮೂಢನಂಬಿಕೆ ಅಲ್ಲ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಉತ್ತರಾಯಣ ಕಾಲದ ಸಂಕ್ರಾಂತಿಯಾಗಿದ್ದು, ಇನ್ನು ಮುಂದೆ ಹಗಲು ಹೆಚ್ಚಾಗಿ ರಾತ್ರಿ ಕಡಿಮೆಯಾಗುತ್ತದೆ. ಇದು ಪ್ರಕೃತಿಯ ಸಮತೋಲನ ಹಾಗೂ ಮಾನವನ ಆರೋಗ್ಯದ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಎಂ.ಶಂಕರ್, ಸುಧಾ, ಶಾಂತಲಾ, ಭಾವನ, ಸೋಮೇಶ್ವರ ಸ್ವಾಮಿ ಭಕ್ತ ಮಂಡಳಿಯ ವ್ಯವಸ್ಥಾಪಕರಾದ ಜಗದೀಶ್, ಭಜನಾ ಮಂಡಳಿಯ ಅನಿಲ್ ಕುಮಾರ್, ಸೋಮಣ್ಣ, ಮಂಜುನಾಥ್, ಬೆಸ್ಕಾಂ ಎಇಇ ವಿಶ್ವಾಸ್, ಬೇಕರಿ ಆನಂದಪ್ಪ, ಚಂದ್ರಕಾಂತ್, ವಿಶ್ವನಾಥ್ ಮಾಮ, ಚಂದ್ರರಾಜು, ನಗರ್ತ ಯುವಕ ಸಂಘದ ಮಾಜಿ ಅಧ್ಯಕ್ಷ ಸಿ.ಭಾಸ್ಕರ್, ಮಂಜುನಾಥ್, ಅಕ್ಕನ ಬಳಗದ ದ್ರಾಕ್ಷಾಯಣಮ್ಮ, ಅನ್ನಪೂರ್ಣ, ರತ್ನಮ್ಮ, ಚಂದ್ರಪ್ಪ ಹಾಗೂ ಹಿರಿಯ ಅರ್ಚಕರಾದ ಅಚ್ಚಣ್ಣ ಮತ್ತು ವೇಣುಗೋಪಾಲ್ ಉಪಸ್ಥಿತರಿದ್ದರು.