ಮಕರ ಸಂಕ್ರಾಂತಿ ಸಾಮರಸ್ಯ ಬೆರೆಸುವ ಹಬ್ಬ: ಗಾಯಕಿ ಸಂವೇದಿತಾ

| Published : Jan 16 2025, 12:47 AM IST

ಮಕರ ಸಂಕ್ರಾಂತಿ ಸಾಮರಸ್ಯ ಬೆರೆಸುವ ಹಬ್ಬ: ಗಾಯಕಿ ಸಂವೇದಿತಾ
Share this Article
  • FB
  • TW
  • Linkdin
  • Email

ಸಾರಾಂಶ

ಸಂಕ್ರಾಂತಿ ಹಬ್ಬವು ಸಮಾಜ ಮತ್ತು ಕುಟುಂಬಗಳ ಶಾಂತಿ ಮತ್ತು ಸಾಮರಸ್ಯ ಬೆರೆಸುವ ಹಬ್ಬವಾಗಿದೆ ಎಂದು ಕುಶಾಲ ನಗರದ ಹಿನ್ನೆಲೆ ಗಾಯಕಿ ಸಂವೇದಿತಾ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ ಸಂಕ್ರಾಂತಿ ಹಬ್ಬವು ಸಮಾಜ ಮತ್ತು ಕುಟುಂಬಗಳ ಶಾಂತಿ ಮತ್ತು ಸಾಮರಸ್ಯ ಬೆರೆಸುವ ಹಬ್ಬವಾಗಿದೆ ಎಂದು ಕುಶಾಲ ನಗರದ ಹಿನ್ನೆಲೆ ಗಾಯಕಿ ಸಂವೇದಿತಾ ಹೇಳಿದರು.

ನಗರದ ದೇವರಾಜ ಅರಸು ಬಡಾವಣೆಯ ಆದರ್ಶ ಯೋಗ ಪ್ರತಿಷ್ಠಾನ ವಿಶ್ವಯೋಗ ಮಂದಿರದಲ್ಲಿ ಮಂಗಳವಾರ ಬೆಳಗ್ಗೆ ಆಯೋಜಿಸಲಾಗಿದ್ದ ಸಂಕ್ರಾಂತಿ ಸುಗ್ಗಿಯ ಹಾಡುಗಳು ಜಾನಪದ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿ ಅವರು ಮಾತನಾಡಿದರು.

ನಮ್ಮ ನಾಡು, ನುಡಿ, ಸಂಸ್ಕೃತಿ, ಸಂಸ್ಕಾರಗಳಿಂದ ಕೂಡಿದೆ. ಸಾಂಸ್ಕೃತಿಕವಾಗಿ ಶ್ರೀಮಂತ ದೇಶ ನಮ್ಮದು. ನಮ್ಮ ಪಾರಂಪರಿಕ ಹಬ್ಬಗಳು ಶ್ರೀಮಂತವಾಗಿದ್ದು, ಆಚರಿಸಲು ಅತ್ಯಂತ ಸಂತೋಷನ್ನುಂಟು ಮಾಡುತ್ತವೆ. ಸುಗ್ಗಿ ಸಂಭ್ರಮದ ಸಂಕ್ರಾಂತಿ ಹಬ್ಬವು ಕೇವಲ ಮನೆಯಲ್ಲಷ್ಟೇ ಮಾಡುವ ಹಬ್ಬವಲ್ಲ. ಇದು ಸಮಾಜದ ನಡುವೆ ಪ್ರೀತಿ, ವಿಶ್ವಾಸ ಬೆರೆಸುವ ಹಬ್ಬವಾಗಿದೆ. ಏಕತೆ, ಸಾಮರಸ್ಯ, ಆಧ್ಯಾತ್ಮಿಕ, ಭಾವಧಾರೆ, ಹಲವು ಸಂಪ್ರದಾಯಗಳ ಆಚರಣೆ ಈ ಹಬ್ಬದ ವಿಶೇಷಗಳು ಎಂದು ಹೇಳಿದರು.

ಅನಂತರ ಸಂವೇದಿತಾ ಅವರು ಗ್ರಾಮೀಣ ಸೊಗಡನ್ನು ಬಿಂಬಿಸುವ ಜಾನಪದ ಹಾಡುಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಯೋಗತಜ್ಞ ಡಾ.ರಾಘವೇಂದ್ರ ಗುರೂಜಿ, ಯೋಗ ಅಧ್ಯಯನ ವಿಭಾಗದ ವಿ.ಕೆ.ರಾಹುಲ್, ಕಾವ್ಯ, ಚೇತನ್, ಜ್ಯೋತಿಲಕ್ಷ್ಮೀ ವಾಸುದೇವ, ಸಂಧ್ಯಾ, ಬೇಬಿ ಗುರುಪ್ರಿಯ, ಡಾ.ರವಿಕುಮಾರ, ವೀಣಾ, ಎಚ್.ಸಂತೋಷ್, ಪತ್ರಕರ್ತ ಎಚ್.ಎನ್. ಪ್ರಕಾಶ್, ನಿತಿನ್, ರಾಘವೇಂದ್ರ ಇತರರು ಇದ್ದರು.

- - - -14ಕೆಡಿವಿಜಿ34.ಜೆಪಿಜಿ:

ದಾವಣಗೆರೆಯ ಆದರ್ಶ ಯೋಗ ಪ್ರತಿಷ್ಠಾನ ವಿಶ್ವಯೋಗ ಮಂದಿರದಲ್ಲಿ ಸಂಕ್ರಾಂತಿ ಸುಗ್ಗಿಯ ಹಾಡುಗಳು ಜಾನಪದ ಸಂಗೀತ ಕಾರ್ಯಕ್ರಮ ನಡೆಯಿತು.