ತಿಯೊಬ್ಬರಲ್ಲಿ ಅಗಾಧವಾದ ಒಂದು ಶಕ್ತಿ ಇರುತ್ತದೆ. ಶಿಕ್ಷಣದ ಸಾರ್ಥಕತೆ ಪಡೆದುಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು
ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ನಡೆಯಿತು.
ಕಲಬುರ್ಗಿಯ ಕನ್ನಡ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ. ವಿಜಯ ಕುಮಾರ ಎಚ್. ವಿಶ್ವಮಾನವ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲಿ ಅಗಾಧವಾದ ಒಂದು ಶಕ್ತಿ ಇರುತ್ತದೆ. ಶಿಕ್ಷಣದ ಸಾರ್ಥಕತೆ ಪಡೆದುಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದ ಅವರು, ಶಿಕ್ಷಕರ ಮಾರ್ಗದರ್ಶನ ಅಗತ್ಯವೆಂದು ತಿಳಿಸಿದರು.ಧಾರವಾಡದ ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಮಾತನಾಡಿ, ತಂದೆ, ತಾಯಿಗಳು ಪಡುತ್ತಿರುವ ಕಷ್ಟ ಅರ್ಥೈಸಿಕೊಂಡು ಉತ್ತಮ ಕನಸಗಳನ್ನು ಇಟ್ಟುಕೊಂಡು ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳುವಂತೆ ಕರೆ ನೀಡಿದರು.ಹಿರಿಯ ಪ್ರಾಧ್ಯಾಪಕ ಎಂ.ಯು.ಹಿರೇಮಠ್, ಗ್ರಂಥಪಾಲಕ ಪ್ರಕಾಶ್ ಗೌಡ ಎಸ್.ಯು. ಮಾತನಾಡಿದರು.
ಅತಿಥಿಗಳಿಗೆ ಹಾಗೂ ಅಗ್ನಿವೀರ ಸೇನಾ ಪಡೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಸಂಚಾಲಕ ಯಮನೂರಪ್ಪ ಟಿ,ಅತಿಥಿ ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ವೀರಣ್ಣ ಸಜ್ಜನ ಇದ್ದರು.
ಪ್ರಾಧ್ಯಾಪಕಿ ವಿಜಯಲಕ್ಷ್ಮಿ ಸ್ವಾಗತಿಸಿದರು, ಪ್ರಾಧ್ಯಾಪಕಿ ಸಂತೋಷಕುಮಾರಿ ವಂದಿಸಿದರು, ಪ್ರಾಧ್ಯಾಪಕ ಬಸವರಾಜ್ ಡಿ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.