ಸಾರಾಂಶ
ಅಜ್ಜಂಪುರ: ಅಜ್ಜಂಪುರ ಪಟ್ಟಣ ಪಂಚಾಯಿತಿಯನ್ನು ತಮ್ಮ ಆಡಳಿತ ಅವಧಿಯಲ್ಲಿ ತ್ಯಾಜ್ಯ, ವ್ಯಾಜ್ಯ, ವ್ಯಸನ ಮುಕ್ತವಾಗಿ ಮಾಡಬೇಕೆಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ನೂತನ ಅಧ್ಯಕ್ಷರಿಗೆ ಸೂಚಿಸಿದರು.
ಅಜ್ಜಂಪುರದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತರೀಕೆರೆ ಬಿಜೆಪಿ ಮಂಡಲದಿಂದ ಪಪಂನ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರುಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಡಿಯಲ್ಲಿ ಬರುವ ಇತರೆ ಶಕ್ತಿ ಕೇಂದ್ರಗಳ ಅಧ್ಯಕ್ಷರುಗಳು ಮನೆಮನೆಗೆ ಬಿಜೆಪಿಯ ಅಭಿವೃದ್ಧಿ ಕೆಲಸಗಳನ್ನು ತಿಳಿಸಿ, ಮುಂದೆ ಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಅಧಿಕಾರಕ್ಕೆ ಬರುವಂತೆ ಮನವರಿಕೆ ಮಾಡಬೇಕೆಂದು ಕರೆ ನೀಡಿದರು,
ಅಜ್ಜಂಪುರಕ್ಕೆ ಯಶವಂತಪುರ - ವಾಸ್ಕೋಡಿಗಾಮ ರೈಲನ್ನು ಇನ್ನು ಒಂದು ತಿಂಗಳ ಅವಧಿಯಲ್ಲಿ ನಿಲುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ ಅವರು, ತರೀಕೆರೆ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು, ನಮ್ಮ ಗ್ರಾಮ ಸಡಕ್ ಯೋಜನೆಯಲ್ಲಿ ಗುಂಡಿಗಳನ್ನು ಮುಚ್ಚಿಸಲಾಗುವುದು ಎಂದು ಹೇಳಿದರು.ಮಾಜಿ ಶಾಸಕ ಸುರೇಶ್ ಮಾತನಾಡಿ, ಒಂದು ರಾಜ್ಯದಲ್ಲಿ ಆಡಳಿತ ಸರ್ಕಾರ ಇದ್ದಾಗ ಅದೇ ಪಕ್ಷವು ಅಧಿಕಾರಕ್ಕೆ ಬರುವುದು ಸಹಜ. ಆದರೆ ಅಜ್ಜಂಪುರ ಪಪಂ ಬಿಜೆಪಿಯ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮತದಾರರು ತೀರ್ಮಾನಿಸಿದ್ದಾರೆ. ಇದು ಆಡಳಿತ ಪಕ್ಷದವರಿಗೆ ಒಂದು ಪಾಠವಾಗಿರುತ್ತದೆ ಎಂದ ಅವರು, ಕುಟುಂಬ ರಾಜಕಾರಣದಿಂದ ತರೀಕೆರೆ ಜನತೆ ಬೇಸತ್ತು ಮುಂದಿನ ಬಾರಿ ಬಿಜೆಪಿಗೆ ಅಧಿಕಾರ ಬರುವುದು ಖಂಡಿತ ಎಂದು ತಿಳಿಸಿದರು.
ತಾಲೂಕಿನ ಎಲ್ಲಾ ವೈನ್ ಶಾಪ್‌ಳಲ್ಲಿ ತರೀಕೆರೆ ಶಾಸಕರೇ ಪಾಟ್ನರ್ ಆಗಿರುತ್ತಾರೆ. ನಾವು ಶಾಸಕರಾಗಿದ್ದಾಗ ಮಾಡಿದ ಕಾಮಗಾರಿಗಳನ್ನು ಉದ್ಘಾಟಿಸಿ ನಾವೇ ಮಾಡಿದ್ದೇವೆಂದು ಪೋಸ್ ಕೊಡುತ್ತಾರೆ. ಭದ್ರಾ ಮೇಲ್ದಂಡೆ ಯೋಜನೆ ನಮ್ಮ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ ಎಂದು ತಿಳಿಸಿದರು.ಮಾಜಿ ಶಾಸಕ ಎಸ್.ಎಂ.ನಾಗರಾಜ್ ಮಾತನಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಶ್ವರಹಳ್ಳಿ ಮಹೇಶ್, ಮಂಡಲ ಅಧ್ಯಕ್ಷರಾದ ಗರಗದಹಳ್ಳಿ ಪ್ರತಾಪ್. ಕೆ.ಆರ್.ಆನಂದ್ ಧ್ರುವ ಕುಮಾರ್. ಅಜ್ಜಂಪುರ ಪಪಂ ನೂತನ ಅಧ್ಯಕ್ಷ ಎ.ಜೆ.ರೇವಣ್ಣ, ಉಪಾಧ್ಯಕ್ಷೆ ಕವಿತಾ ಕೇಶವಮೂರ್ತಿ, ಎ.ಸಿ.ಚಂದ್ರಪ್ಪ ಮಾತನಾಡಿದರು.ಮಾಜಿ ಜಿಪಂ ಅಧ್ಯಕ್ಷರಾದ ಚೈತ್ರಶ್ರೀ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸವಿತಾ ರಮೇಶ್, ತರೀಕೆರೆ ಮಾಜಿ ಅಧ್ಯಕ್ಷ ಭೋಜರಾಜ್, ಎಂ.ಕೃಷ್ಣಮೂರ್ತಿ, ಶಂಭೈನೂರು ಆನಂದಪ್ಪ, ಬಿ.ರಂಗಸ್ವಾಮಿ ಹತ್ತತ್ತಿ ಮಧುಸೂದನ್, ಬಿಂದು ಯತೀಶ್, ಶೋಭಾ ಸಂತೋಷ್, ಕೆ.ಗಿರೀಶ್ ಚೌಹಾಣ್ ಇವರುಗಳು ಭಾಗವಹಿಸಿದ್ದರು.
ಇದೇ ವೇಳೆ ನೂತನ ಪಪಂ ಅಧ್ಯಕ್ಷರುಗಳು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ವಿಶೇಷವಾಗಿ ಗೌರವಿಸಲಾಯಿತು.ಬಿಜೆಪಿಯ ಡಾ.ನರೇಂದ್ರ ಅವರು ಒಂಬತ್ತು ಮಂಡಲಗಳ ಅಧ್ಯಕ್ಷರುಗಳ ಹೆಸರುಗಳನ್ನು ಘೋಷಣೆ ಮಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))