ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಿ: ಎಸ್. ಲಿಂಗಮೂರ್ತಿ

| Published : Aug 30 2024, 01:07 AM IST / Updated: Aug 30 2024, 01:08 AM IST

ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಿ: ಎಸ್. ಲಿಂಗಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯ ಸದಸ್ಯತಾ ಅಭಿಯಾನ ಸೆ.2 ರಿಂದ 25ರ ವರಗೆ ನಡೆಯಲಿದ್ದು, ತಾಲೂಕಿನ 242 ಭೂತ್‌ಗಳಲ್ಲಿ ಕಾರ್ಯಕರ್ತರು ಹೆಚ್ಚಿನ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ರಾಜ್ಯ ಖನಿಜ ನಿಗಮ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಬಿಜೆಪಿಯ ಸದಸ್ಯತಾ ಅಭಿಯಾನ ಸೆ.2 ರಿಂದ 25ರ ವರಗೆ ನಡೆಯಲಿದ್ದು, ತಾಲೂಕಿನ 242 ಭೂತ್‌ಗಳಲ್ಲಿ ಕಾರ್ಯಕರ್ತರು ಹೆಚ್ಚಿನ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ರಾಜ್ಯ ಖನಿಜ ನಿಗಮ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಕರೆ ನೀಡಿದರು.

ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಹೊಸದುರ್ಗದ ಮಂಡಲ ವತಿಯಿಂದ ನಡೆದ 2024 ನೇ ಸಾಲಿನ ಸದಸ್ಯತ್ವ ಅಭಿಯಾನ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಈ ಅಭಿಯಾನವನ್ನು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದೀಜಿಯವರು ಉದ್ಗಾಟಿಸಲಿದ್ದಾರೆ. ನಾವೆಲ್ಲರೂ ಒಟ್ಟುಗೂಡಿ ನಮ್ಮ ಹೊಸದುರ್ಗ ಮಂಡಲದಲ್ಲಿ ಕನಿಷ್ಠ ಒಂದು ಲಕ್ಷ ಸದಸ್ಯರನ್ನು ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದರು.

ಇತ್ತೀಚಿಗೆ ನಡೆದ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಾಮಪತ್ರವನ್ನು ಸಲ್ಲಿಸಲು ಬಿಡದೆ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಪಕ್ಷೇತರ, ಪುರಸಭಾ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಭಾರತ ಮತ್ತು ಚೀನಾದ ಮೇಲೆ ಧಾರ್ಮಿಕ ಮತ್ತು ಆರ್ಥಿಕ ಅವಲಂಬನೆಯನ್ನು ಪ್ರಪಂಚದ ಮುಂದುವರಿದ ದೇಶಗಳು ಅವಲಂಬಿಸಿವೆ. ಬಲಿಷ್ಠ ಭಾರತ ನಿರ್ಮಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಮಾತನಾಡಿ, ಭಾರತೀಯ ಜನತಾ ಪಕ್ಷಕ್ಕೆ ಕಾರ್ಯಕರ್ತರೇ ಬುನಾದಿ. ಎಲ್ಲಾ ಕಾರ್ಯಕರ್ತರಿಗಾಗಿ ಒಬ್ಬ ಕಾರ್ಯಕರ್ತ, ಎಲ್ಲಾ ಕಾರ್ಯಕ್ರಮಗಳಿಗಾಗಿ ಒಬ್ಬ ಕಾರ್ಯಕರ್ತ ಮೀಸಲಿರುತ್ತಾನೆ. ಬಿಜೆಪಿಯಲ್ಲಿ ನಾಯಕನಿಗಿಂತ ಕಾರ್ಯಕರ್ತನಿಗೆ ಗೌರವ ಹೆಚ್ಚು. ಕಾರ್ಯಕರ್ತ ನಾಯಕನಾದರೆ ಮುಂದೆ ಆ ಕಾರ್ಯಕರ್ತ ಜನನಾಯಕ ನಾಗಬಲ್ಲನು ಎಂದು ಹೇಳಿದರು.

2024 ರಲ್ಲಿ ಈ ಸದಸ್ಯತ್ವ ಅಭಿಯಾನವನ್ನು ಪ್ರಧಾನಿ ಬರುವ ಸೆಪ್ಟೆಂಬರ್ 2 ರಂದು 8800002024 ಈ ದೂರವಾಣಿ ಸಂಖ್ಯೆಗೆ ಮಿಸ್ ಕಾಲ್ ಕೊಡುವುದರ ಮೂಲಕ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.ನಮ್ಮ ಕಾರ್ಯಕರ್ತರು ಪ್ರತಿ ಬೂತ್‌ನಿಂದ ಕನಿಷ್ಠ 300 ಸಂಖ್ಯೆಯ ಸದಸ್ಯತ್ವವನ್ನು ಮಾಡಿಸಬೇಕು. ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿದ ಎಲ್ಲರೂ ಸದಸ್ಯತ್ವವನ್ನು ಪಡೆಯಬಹುದು. ರಾಜಕೀಯ ಹಿನ್ನೆಲೆ ಇರದ ಕುಟುಂಬದ ಯುವಕರನ್ನು ಗುರುತಿಸಿ ಸದಸ್ಯತ್ವವನ್ನು ನೀಡಿ ಮುಂದೆ ಅವರನ್ನು ನಾಯಕರನ್ನಾಗಿ ಮಾಡಬೇಕೆಂಬುದೇ ಪ್ರಧಾನಿ ಮೋದಿ ಅವರ ಆಶಯ ಎಂದರು. ಪ್ರಾಸ್ತಾವಿಕವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್ ಕಲ್ಮಠ ಮಾತನಾಡಿ, ವಿಶ್ವದಲ್ಲಿ ಅತ್ಯಂತ ಬೃಹತ್ ಸದಸ್ಯರನ್ನು ಹೊಂದಿರುವ ಭಾರತೀಯ ಜನತಾ ಪಾರ್ಟಿ 2024ರಲ್ಲಿ 18 ಕೋಟಿ ಕಾರ್ಯಕರ್ತರನ್ನು ಮಾಡುವ ಗುರಿ ಹೊಂದಿದೆ. ದೇಶದಲ್ಲಿ ಜಾತಿ ಧರ್ಮವನ್ನು ಬಿಟ್ಟು, ರಾಷ್ಟ್ರಾಧಾರದಲ್ಲಿ ಚುನಾವಣೆಗಳು ನಡೆದರೆ ಭಾರತಕ್ಕೆ ಭವಿಷ್ಯವಿದೆ. ಸಮೃದ್ಧ ಭಾರತವನ್ನು ಕಟ್ಟಲು ನರೇಂದ್ರ ಮೋದಿಯವರು ನಿರಂತರ ಶ್ರಮ ವಹಿಸುತ್ತಿದ್ದಾರೆ. 370 ನೇ ವಿಧಿ ಜಾರಿಗೊಳಿಸಿದೆ. ಭಾರತೀಯ ನಾಗರಿಕ ಸಂಹಿತೆ ಕಾಯಿದೆಗಳು ದೇಶದ ಸಾಮಾಜಿಕ ಪರಿವರ್ತನೆಯನ್ನು ಮಾಡುತ್ತಿವೆ ಎಂದರು.ಕಾರ್ಯಕ್ರಮದಲ್ಲಿ ಮಂಡಲ ಪ್ರಭಾರಿ ಮಲ್ಲಿಕಾರ್ಜುನ್, ಬಿಜೆಪಿ ಮಂಡಲ ಅಧ್ಯಕ್ಷ ಗುಳಿಹಟ್ಟಿ ಜಗದೀಶ್, ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷೆ ಗೀತಾ ಗಜೇಂದ್ರ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಅನುಸೂಯ ಜಗನ್ನಾಥ್, ಜಿ ಪಂ ಮಾಜಿ ಸದಸ್ಯರಾದ ಮಾವಿನಕಟ್ಟೆ ಗುರುಸ್ವಾಮಿ, ಬಿಎಸ್ ದ್ಯಾಮಪ್ಪ, ದೊಡ್ಡಘಟ್ಟ ಲಕ್ಷ್ಮಣ್, ಪರಶುರಾಮಪ್ಪ, ಮುಖಂಡರಾದ ಹೆಬ್ಬಳ್ಳಿ ಮಲ್ಲಿಕಾರ್ಜುನ್, ಕೋಡಿಹಳ್ಳಿ ತಮ್ಮಣ್ಣ,ಹೇರೂರು ಮಂಜುನಾಥ್, ಬಾಲರಾಜ್, ಶಶಿ ಶಿವನೇಕಟ್ಟೆ, ಶಿವು ಮಠ,ಶಂಕ್ರಪ್ಪ, ದೊಡ್ಡಯ್ಯ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.