ಸಾರಾಂಶ
ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೆ, ಉತ್ತಮ ಶಿಕ್ಷಣ ನೀಡುವುದರ ಮೂಲಕ ಮಕ್ಕಳನ್ನೇ ಆಸ್ತಿಯಾಗಿ ಮಾಡಬೇಕು ಎಂದು ಸಮಾಜ ಸೇವಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೆ, ಉತ್ತಮ ಶಿಕ್ಷಣ ನೀಡುವುದರ ಮೂಲಕ ಮಕ್ಕಳನ್ನೇ ಆಸ್ತಿಯಾಗಿ ಮಾಡಬೇಕು ಎಂದು ಸಮಾಜ ಸೇವಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ನಗರದ ಜ್ಯೋತ್ಸ್ನಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಒಳ್ಳೆಯ ಶಿಕ್ಷಣದ ನೀಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ. ಅದಕ್ಕಾಗಿ ಎಂತಹ ಕಷ್ಟಬಂದರೂ ಮಕ್ಕಳಿಗೆ ಶಿಕ್ಷಣದಿಂದ ದೂರ ಮಾಡದೇ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಮಕ್ಕಳು ಪಠ್ಯಕ್ರಮದ ಅನುಸಾರ ಪರಿಪೂರ್ಣ ಶಿಕ್ಷಣ ಪಡೆಯಬೇಕು. ವ್ಯಕ್ತಿಯ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಶಿಕ್ಷಣ ಒಂದೇ ಮಾರ್ಗ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು. ಶಿಕ್ಷಣ ನಮ್ಮೆಲ್ಲರ ಬದುಕನ್ನು ರೂಪಿಸುತ್ತದೆ ಎಂದು ಹೇಳಿದರು.ಪಾಲಿಕೆ ಸದಸ್ಯ ರಾಜಶೇಖರ ಕುರಿಯವರ, ಸಂಸ್ಥೆ ಅಧ್ಯಕ್ಷ ಸದಾಶಿವ ಅಂಗಡಿ, ಪ್ರಾಚಾರ್ಯೆ ಮಂಜುಳಾ ಅಂಗಡಿ, ಶಿಕ್ಷಣಪ್ರೇಮಿ ಅಲಿಸಾಬ ಖಡಕೆ, ಸೌಭಾಗ್ಯಲಕ್ಷ್ಮೀ, ಶಹನಾಜ ಮಮದಾಪೂರ, ರೇಣುಕಾ ಚಿಕ್ಕರೂಗಿ, ಸಾವಿತ್ರಿಬಾಯಿ ಚೌಧರಿ, ಅಶ್ವೀನಿ ಕಂಭಾಗಿ, ಅನಿತಾ ಪೂಜಾರಿ, ಮಂಜುಳಾ ಕುಲಕರ್ಣಿ, ಸ್ನೇಹಾ ಹಡಪದ, ಶಾಯಿನ್ ಆಸಂಗಿ, ಮನೀಷಕುಮಾರ ಪರಂಗಿ, ವಾಸೀಮ ಮುಲ್ಲಾ, ರಿಯಾನಾ ಅಮರಖಾನ, ಮೆಹಕನಾಜ ಹವಾಲ್ದಾರ, ಭೂಮಿಕಾ ಇಲಕಲ್ಲ ಇತರರು ಉಪಸ್ಥಿತರಿದ್ದರು.