ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ

| Published : Feb 14 2024, 02:18 AM IST

ಸಾರಾಂಶ

ಮಕ್ಕಳಿಗೆ ಮನೆಯಲ್ಲಿಯೇ ಶಿಕ್ಷಣದ ಜೊತೆಗೆ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಹಾಗೂ ಬಸವಾದಿ ಶರಣರ ತತ್ವಾದರ್ಶಗಳನ್ನು ರೂಢಿಸಿಕೊಳ್ಳುವಂತೆ ತಿಳಿಹೇಳಬೇಕು. ಅಂದಾಗ ಮಾತ್ರ ದೇಶವನ್ನು ಸುಸಂಸ್ಕೃತ, ಸಮೃದ್ಧ ದೇಶವನ್ನಾಗಿ ಕಾಣಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಶಾಂತಗೌಡ ಎಸ್.ಪಾಟೀಲ(ನಡಹಳ್ಳಿ) ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಕ್ಕಳಿಗೆ ಮನೆಯಲ್ಲಿಯೇ ಶಿಕ್ಷಣದ ಜೊತೆಗೆ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಹಾಗೂ ಬಸವಾದಿ ಶರಣರ ತತ್ವಾದರ್ಶಗಳನ್ನು ರೂಢಿಸಿಕೊಳ್ಳುವಂತೆ ತಿಳಿಹೇಳಬೇಕು. ಅಂದಾಗ ಮಾತ್ರ ದೇಶವನ್ನು ಸುಸಂಸ್ಕೃತ, ಸಮೃದ್ಧ ದೇಶವನ್ನಾಗಿ ಕಾಣಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಶಾಂತಗೌಡ ಎಸ್.ಪಾಟೀಲ(ನಡಹಳ್ಳಿ) ಅಭಿಪ್ರಾಯಪಟ್ಟರು.

ಪಟ್ಟಣದ ವಿದ್ಯಾಜ್ಯೋತಿ ಪಬ್ಲಿಕ್ ಸ್ಕೂಲ್ ನ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆಂಗ್ಲ ಮಾಧ್ಯಮ ಶಿಕ್ಷಣ ತೆರೆಯವ ಮೂಲಕ ಗುಣಮಟ್ಟ ಶಿಕ್ಷಣ ನೀಡಿದ ಕೀರ್ತಿ ವಿದ್ಯಾಜ್ಯೋತಿ ಪಬ್ಲಿಕ್‌ ಸ್ಕೂಲ್‌ಗೆ ಸಲ್ಲುತ್ತದೆ. ಪಾಲಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವಂತೆ ಸಲಹೆ ನೀಡಿದರು.

ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಮಾತನಾಡಿ, ಇಂದು ಫಾಸ್ಟ್‌ಫುಡ್ ಸೇವನೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗುತ್ತಿದ್ದು, ಇದರಿಂದ ಮಕ್ಕಳ ಓದುವ ಹಾಗೂ ಕ್ರೀಡೆಯಲ್ಲಿ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಅಲ್ಲದೇ, ಅನಾರೋಗ್ಯಕ್ಕೊಳಗಾಗುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಪಾಲಕರು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಬಿಲ್ ಕೆರೂರ ಬಿಲ್ವಾಶ್ರಮದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಡಾ.ಲಾಲಲಿಂಗೇಶ್ವರ ಶರಣರು, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ, ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ, ಪರಪ್ಪ ಮಾಸ್ತರ, ಕೃಷಿ ವಿದ್ಯಾಪೀಠದ ಅರವಿಂದ ಕೊಪ್ಪ, ಸರ್ಕಾರಿ ಕಾಲೇಜಿನ ಉಪನ್ಯಾಸಕ ಎಂ.ಎಚ್.ಹಾಲ್ಯಾಳ, ಕಾಂಗ್ರೆಸ್ ಮುಖಂಡ ವೈ.ಎಚ್.ವಿಜಯಕರ, ಸಂಸ್ಥೆ ಕಾರ್ಯಾಧ್ಯಕ್ಷ ವಿರೇಶ ಗುರುಮಠ, ಸಂಚಾಲಕ ಬಸವರಾಜ ಕತ್ತಿ, ಭಾವನಾ ಕತ್ತಿ ಸೇರಿ ಹಲವರು ಇದ್ದರು.ಗ್ರಾಮೀಣ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆಂಗ್ಲ ಮಾಧ್ಯಮ ಶಿಕ್ಷಣ ತೆರೆಯವ ಮೂಲಕ ಗುಣಮಟ್ಟ ಶಿಕ್ಷಣ ನೀಡಿದ ಕೀರ್ತಿ ವಿದ್ಯಾಜ್ಯೋತಿ ಪಬ್ಲಿಕ್‌ ಸ್ಕೂಲ್‌ಗೆ ಸಲ್ಲುತ್ತದೆ. ಪಾಲಕರು ತಮ್ಮ ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು.

-ಶಾಂತಗೌಡ ಎಸ್.ಪಾಟೀಲ(ನಡಹಳ್ಳಿ), ಸಾಮಾಜಿಕ ಕಾರ್ಯಕರ್ತರು.