ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ

| Published : Nov 11 2024, 12:54 AM IST

ಸಾರಾಂಶ

ನಿಷ್ಕಲ್ಮಶ ಮನಸ್ಸಿನ ಮಕ್ಕಳನ್ನು ಪೋಷಕರು ಸಂಸ್ಕಾರವಂತರನ್ನಾಗಿ ಮಾಡಿ ಅವರ ಉತ್ತಮ ಬದುಕಿಗೆ ಭದ್ರ ಬುನಾದಿ ಹಾಕಬೇಕೆಂದು ಅರಕಲಗೂಡು ತಾಲೂಕು ಅರೇಮಾದನಹಳ್ಳಿಯ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಯತಿಶ್ರೇಷ್ಠರಾದ ಅನಂತಶ್ರೀ ವಿಭೂಷಿತ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳು ಹಿತ ನುಡಿದರು. ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಖಾಸಗಿ ಕಾರ್ಯಕ್ರಮದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹಾಸನ: ನಿಷ್ಕಲ್ಮಶ ಮನಸ್ಸಿನ ಮಕ್ಕಳನ್ನು ಪೋಷಕರು ಸಂಸ್ಕಾರವಂತರನ್ನಾಗಿ ಮಾಡಿ ಅವರ ಉತ್ತಮ ಬದುಕಿಗೆ ಭದ್ರ ಬುನಾದಿ ಹಾಕಬೇಕೆಂದು ಅರಕಲಗೂಡು ತಾಲೂಕು ಅರೇಮಾದನಹಳ್ಳಿಯ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಯತಿಶ್ರೇಷ್ಠರಾದ ಅನಂತಶ್ರೀ ವಿಭೂಷಿತ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳು ಹಿತ ನುಡಿದರು.

ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಖಾಸಗಿ ಕಾರ್ಯಕ್ರಮದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಗುರು ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳು ಬೆಳೆದು ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀ ಮಠದ ರೋಹಿಣೇಶ್, ಸಹಾಯಕ ಇಂಜಿನಿಯರ್ ಕೆ. ಸಂದೀಪ್, ಹಲಸುಲಿಗೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಧನಲಕ್ಷ್ಮಿ ಗಿರೀಶ್ ಆಚಾರ್ಯ, ಬೆಸೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ವಿಜಯಲಕ್ಷ್ಮಿ, ಹೆಚ್.ವಿ. ಕುಸುಮಾವತಿ, ಪುಷ್ಪಾವತಿ, ಪ್ರೇಮಲತ, ಎಂ.ಸಿ. ಪವಿತ್ರ, ಲೀಲ್ ಪ್ರದೀಪ್, ಸೌಮ್ಯಶ್ರೀ, ಕೆ.ಟಿ. ಮೋಹನ್ ಮತ್ತು ಸೋಮಶೇಖರ್ ಇತರರು ಹಾಜರಿದ್ದರು.