ಒಳ್ಳೆಯ ನಾಗರೀಕರನ್ನಾಗಿ ರೂಪಿಸಿ

| Published : Jun 04 2024, 12:31 AM IST

ಸಾರಾಂಶ

ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರಕೊಟ್ಟು ಒಳ್ಳೆ ಬೋಧನೆ ಮಾಡಿ ಅವರನ್ನು ಒಳ್ಳೆಯ ನಾಗರೀಕರನ್ನಾಗಿ ರೂಪಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಬಾಗ

ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರಕೊಟ್ಟು ಒಳ್ಳೆ ಬೋಧನೆ ಮಾಡಿ ಅವರನ್ನು ಒಳ್ಳೆಯ ನಾಗರೀಕರನ್ನಾಗಿ ರೂಪಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಭಿರಡಿಗ್ರಾಮದ ಮಹಾದೇವ ಶಿಕ್ಷಣ ಸಂಸ್ಥೆಯ ಭದ್ರಯ್ಯಸ್ವಾಮಿ ಪ್ರೌಢಶಾಲೆ ಉದ್ಘಾಟನೆ ಹಾಗೂ ಪೀಠೋಪಕರಣ ಮತ್ತು ಕ್ರೀಡಾಸಾಮಗ್ರಿಗಳ ಹಸ್ತಾಂತರ ಸಮಾರಂಭಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದಲ್ಲಿರುವ ಶಿಕ್ಷಣ ಸಂಸ್ಥೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಶ್ರಮಿಸಬೇಕು. ಶಾಲೆಗೆ ದೊರಕುವಎಲ್ಲ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.ಹಂಚಿನಾಳದ ಮಹೇಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಿಂದ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ. ದೇಶಕಟ್ಟುವ ವ್ಯಕ್ತಿಗಳು ರೂಪುಗೊಳ್ಳುವುದು ಶಾಲೆಗಳಲ್ಲಿ. ಅಂತಹ ಶಾಲೆಗಳು ಮಕ್ಕಳಿಗೆ ಮುಕ್ತವಾಗಿ ಸಂತೋಷದಿಂದ ಕಲಿಯುವಂತಹ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.ಸಂಸ್ಥೆ ಅಧ್ಯಕ್ಷ ಶಿವಪ್ಪ ಕುಮಟೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಹಾದೇವ ಬೊರಗಾಂವೆ, ಗಣೇಶ ಹೆಗಡೆ, ಶ್ರೀಧರ ಕುಡಚೆ, ಎ.ಬಿ.ನಿಡೋಣಿ, ಸಚಿನ ಪಾಟೀಲ, ಮಂಜು ಕಳಸನ್ನವರ, ಅಣ್ಣಾಸಾಹೇಬ ನಿಶಾನದಾರ, ಮುರಗೇಶ ನಿಶಾನದಾರ, ನಿಂಗಣ್ಣಕೇದಾರಿ, ಶಂಕರ ನಿಡೋಣಿ, ಪಿರಪ್ಪಕುಡಚೆ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.