ಸಾರಾಂಶ
ಚಿತ್ತಾಪುರದ ಅಲ್ಲೂರ ಕೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪತ್ರಕರ್ತ ಅನಂತನಾಗ ದೇಶಪಾಂಡೆ ಧ್ವಜಾರೋಹಣ ನೆರವೇರಿಸಿದರು.
ಕನ್ನಡ ಪ್ರಭ ವಾರ್ತೆ ಚಿತ್ತಾಪುರ
ಗ್ರಾಮದಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಇರುವ ಶಾಲೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಮತ್ತು ಶಾಲೆಯ ಅಭಿವೃದ್ಧಿಗಾಗಿ ಸರ್ಕಾರವು ನೀಡುತ್ತಿರುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪತ್ರಕರ್ತ ಅನಂತನಾಗ ದೇಶಪಾಂಡೆ ಹೇಳಿದರು.ತಾಲೂಕಿನ ಅಲ್ಲೂರ ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ವಿವಿಧ ಆಟಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳಾದ ಹಾಲು, ಮೊಟ್ಟೆ, ಪಟ್ಯ ಪುಸ್ತಕ, ಶೂ ಸೇರಿದಂತೆ ತರಗತಿ ಕೋಣೆಗಳ ನಿರ್ಮಾಣ, ಶೌಚಾಲಯ ನಿರ್ಮಾಣದಲ್ಲಿ ಸರ್ಕಾರದಿಂದ ಬಂದ ಅನುದಾನವನ್ನು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ನೀಡಬೇಕು ಎಂದು ತಿಳಿಸಿದರು.ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳು ಭಾಷಣ ಮಾಡಿದ್ದು ವಿಶೇಷವಾಗಿತ್ತು. ಅಶ್ವಿನಿ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು.
ವೇದಿಕೆಯಲ್ಲಿ ಶಾಲೆ ಪ್ರಭಾರಿ ಮುಖ್ಯಗುರುಗಳು ಅಂಬಣ್ಣ ಹಂದ್ರಕಿ, ಎಸ್‌ಡಿಎಂಸಿ ಅಧ್ಯಕ್ಷ ದೇವಪ್ಪ ಶರಣಪ್ಪ ಬೈನರ್, ಶಿಕ್ಷಕರಾದ ಶಿವಾನಂದ ರುದ್ರಗೌಡ, ಶ್ರೇವಂತಿ, ಮಂಜುನಾಥ ಕೆಂಬಾವಿ, ಜಯಶ್ರೀ, ಸುಮಲತಾ, ಅಕ್ಷತಾ, ಮಹೇಶ್ವರಿ, ಗಂಗಮ್ಮ, ಮಹೇಶ್ವರಿ, ಸಿಬ್ಬಂದಿಯರಾದ ಕಾಶಿಂಬಿ, ಸಿದ್ದಮ್ಮ, ಸದಸ್ಯರಾದ ವಿಶ್ವನಾಥ ರೆಡ್ಡಿ, ಶಾಂತಮ್ಮ, ಗಂಗಮ್ಮ, ಲಕ್ಷ್ಮಿ,ರಾಮಲಿಂಗಮ್ಮ, ಗ್ರಾ.ಪಂ ನಾಗರೆಡ್ಡಿ, ಕಲ್ಪನಾ, ಮಲ್ಲಣ್ಣ ನಾಟೇಕರ್, ದೇವಪ್ಪಾ ಗಮಗಾ, ಮುಖಂಡರಾದ ದೇವಪ್ಪ ತಳವಾರ ಸೇರಿದಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಇದ್ದರು.