ನಬಾರ್ಡ್‌ ಬ್ಯಾಂಕ್‌ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಬ್ಯಾಂಕ್‌ನ ಸಿಜಿಎಂ ಟಿ. ರಮೇಶ್

| Published : Feb 19 2024, 01:33 AM IST

ನಬಾರ್ಡ್‌ ಬ್ಯಾಂಕ್‌ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಬ್ಯಾಂಕ್‌ನ ಸಿಜಿಎಂ ಟಿ. ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ರೈತ ವರ್ಗದ ಏಳಿಗೆಯ ಸಲುವಾಗಿ ನಬಾರ್ಡ್ ಬ್ಯಾಂಕ್ ಸಾಕಷ್ಟು ಉತ್ತಮ ಯೋಜನೆಗಳನ್ನು ರೂಪಿಸಿದ್ದು ಸದ್ಬಳಕೆ ಮಾಡಿಕೊಳ್ಳಿ ಎಂದು ನಬಾರ್ಡ್ ಬ್ಯಾಂಕ್‌ನ ಸಿಜಿಎಂ ಟಿ. ರಮೇಶ್ ಹೇಳಿದರು. ದಿಡಗ ಗ್ರಾಮದ ಬಾಹುಬಲಿ ಕೃಷಿ ರೈತ ಉತ್ಪಾದಕರ ಕಂಪನಿಯಿಂದ ಏರ್ಪಡಿಸಿದ್ದ ಬ್ರ್ಯಾಂಡಿಂಗ್ ಬಿಡುಗಡೆ ಹಾಗೂ ಸಿರಿಧಾನ್ಯಗಳ ಆಹಾರ ಮೇಳವನ್ನು ಉದ್ಘಾಟಿಸಿದರು.

ದಿಡಿಗದಲ್ಲಿ ಸಿರಿಧಾನ್ಯಗಳ ಆಹಾರ ಮೇಳಚನ್ನರಾಯಪಟ್ಟಣ: ರೈತ ವರ್ಗದ ಏಳಿಗೆಯ ಸಲುವಾಗಿ ನಬಾರ್ಡ್ ಬ್ಯಾಂಕ್ ಸಾಕಷ್ಟು ಉತ್ತಮ ಯೋಜನೆಗಳನ್ನು ರೂಪಿಸಿದ್ದು ಸದ್ಬಳಕೆ ಮಾಡಿಕೊಳ್ಳಿ ಎಂದು ನಬಾರ್ಡ್ ಬ್ಯಾಂಕ್‌ನ ಸಿಜಿಎಂ ಟಿ. ರಮೇಶ್ ಹೇಳಿದರು.

ತಾಲೂಕಿನ ಹಿರೀಸಾವೆ ಹೋಬಳಿಯ ದಿಡಗ ಗ್ರಾಮದ ಬಾಹುಬಲಿ ಕೃಷಿ ರೈತ ಉತ್ಪಾದಕರ ಕಂಪನಿ ವತಿಯಿಂದ ಏರ್ಪಡಿಸಿದ್ದ ಬ್ರ್ಯಾಂಡಿಂಗ್ ಬಿಡುಗಡೆ ಹಾಗೂ ಸಿರಿಧಾನ್ಯಗಳ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ನಬಾರ್ಡ್ ಒಂದು ರೈತಪರ ಅಭಿವೃದ್ಧಿಯ ವೇದಿಕೆಯಾಗಿದ್ದು ಆರ್ಥಿಕ ನೆರವು ನೀಡುವ ಮೂಲಕ ರೈತರಿಗೆ ಹೆಗಲು ಕೊಟ್ಟು ನಿಲ್ಲುತ್ತಿದೆ. ಸದ್ಬಳಕೆ ಮಾಡಿಕೊಂಡು ರೈತರು ಸದೃಢ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ. ಸದಾ ಬೆವರು ಸುರಿಸಿ ದೇಶಕ್ಕೆ ಅನ್ನ ನೀಡುವ ರೈತರ ಬದುಕು ಹಸನಾಗಬೇಕು ಎಂಬುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಬಾಹುಬಲಿ ಸಂಸ್ಥೆಯ ಅಧ್ಯಕ್ಷ ಬಿ.ಎನ್. ರಂಗಪ್ಪ ಮಾತನಾಡಿ, ಪ್ರತಿ ದಿನ ಪ್ರತಿ ಕ್ಷಣ ಹೊಸ ಹೊಸ ಪ್ರಯೋಗದೊಂದಿಗೆ ಅಗತ್ಯಕ್ಕೂ ಮೀರಿದಂತೆ ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ತೊಡಗುವ ರೈತ ಒಬ್ಬ ವಿಜ್ಞಾನಿ ಇದ್ದಂತೆ. ಆದರೆ ಅಗತ್ಯ ಸೌಲಭ್ಯಗಳ ಕೊರತೆ ಹಾಗೂ ಆರ್ಥಿಕ ಸಹಕಾರವಿಲ್ಲದ ಕಾರಣ ಕೈಚೆಲ್ಲಿ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇದೀಗ ನಬಾರ್ಡ್ ರೈತರ ನೆರವಿಗೆ ನಿಂತಿರುವುದು ಒಂದು ಉತ್ತಮ ಬೆಳವಣಿಗೆ ಎಂದರು.

ಸ್ನೇಹ ಸೇವಾ ಸಂಸ್ಥೆಯು ಮಹಿಳೆಯರ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಗಣ್ಯರು ಸಂಸ್ಥೆಯ ಬ್ರ್ಯಾಂಡಿಂಗ್ ಬಿಡುಗಡೆ ಮಾಡಿದರು. ಸಿರಿಧಾನ್ಯಗಳಿಂದ ತಯಾರಿಸಿದ್ದ ಆಹಾರಗಳನ್ನು ಗ್ರಾಹಕರು ವೀಕ್ಷಿಸಿ ಖರೀದಿಸಿದರು. ಹಾಸನ ಜಿಲ್ಲಾ ಡಿಡಿಎಂ ಮಾಲಿನಿ ಎಂ.ಸುವರ್ಣ, ಸ್ನೇಹ ಸೇವಾ ಸಂಸ್ಥೆಯ ಅಧ್ಯಕ್ಷ ಎಸ್.ಜಿ.ಚಕ್ರವರ್ತಿ, ಸಂಸ್ಥೆಯ ಅಧ್ಯಕ್ಷ ಬಿಳಿಕೆರೆ ರಂಗಪ್ಪ, ಉಪಾಧ್ಯಕ್ಷ ಕೆಂಪೇಗೌಡ ಇದ್ದರು.ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿ ದಿಡಗ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬ್ರ್ಯಾಂಡಿಂಗ್ ಬಿಡುಗಡೆ ಹಾಗೂ ಸಿರಿಧಾನ್ಯಗಳ ಆಹಾರ ಮೇಳ ಕಾರ್ಯಕ್ರಮದಲ್ಲಿ ನಬಾರ್ಡ್ ಬ್ಯಾಂಕ್‌ನ ಸಿಜಿಎಂ ಟಿ.ರಮೇಶ್ ಬಾಹುಬಲಿ ಸಂಸ್ಥೆಯ ಬ್ರ್ಯಾಂಡಿಂಗ್ ಬಿಡುಗಡೆ ಮಾಡಿದರು.