ಸಾರಾಂಶ
ಸರ್ಕಾರಿ ನೌಕರರ ಮಕ್ಕಳಿಗೆ ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ನೇತೃತ್ವದಲ್ಲಿ ರೈತರು ಗುರುವಾರ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಸರ್ಕಾರಿ ನೌಕರರ ಮಕ್ಕಳಿಗೆ ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ನೇತೃತ್ವದಲ್ಲಿ ರೈತರು ಗುರುವಾರ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.ನಮ್ಮ ಭೂಮಿಯ ಹಕ್ಕನ್ನು ಸರ್ಕಾರ ಕಸಿದುಕೊಳ್ಳುತ್ತಿರುವುದು ಯಾವ ನ್ಯಾಯ? ನಮ್ಮ ಜಮೀನುನು ಸರ್ವೇ ಮಾಡಿ ಖಾತೆ ಮಾಡಿಕೊಡಬೇಕು. ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಯುವಕ-ಯವತಿಯರಿಗೆ ಉದ್ಯೋಗ ಕಲ್ಪಿಸಿಕೊಡಬೇಕು. ವಿದ್ಯುತ್ ಟಿಸಿಗಳ ಅಕ್ರಮ-ಸಕ್ರಮ ಯೋಜನೆ ಮರಳಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಪ್ರತಿ ಒಬ್ಬ ಸರ್ಕಾರಿ ನೌಕರರಿಗೆ ಆಯಾ ಹುದ್ದೆಗೆ ಸಂಬಂಪಟ್ಟಂತೆ ಸಮವಸ್ತ್ರ ಕಾನೂನಡಿಯಲ್ಲಿ ಜಾರಿಗೆ ತರಬೇಕು. ದೇಶದ ಮೊದಲನೇ ಪ್ರಜೆ ಯಾರೇ ಇದ್ದರೂ ರೈತನೇ ಮೊದಲ ಪ್ರಜೆ ಎಂದು ಆದೇಶ ಮಾಡಬೇಕು. ರೈತರು ವಾಸವಾಗಿರುವ ಗ್ರಾಮಗಳಲ್ಲಿನ 30x40 ಅಳತೆಯ ಮನೆಯನ್ನು ಖಾತೆ ಮಾಡಿ ಹಕ್ಕುಪತ್ರ ಕೊಡುವಂತೆ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆನೀಡಬೇಕು ಎಂದು ಆಗ್ರಹಿಸಿದರು.
ರೈತರ ಸಮಸ್ಯೆ ಪರಿಹಾರಕ್ಕೆ 31 ಜಿಲ್ಲೆಯ 224 ಕ್ಷೇತ್ರದಲ್ಲಿ ನೀರಾವರಿ ಯೋಜನೆ ಜಾರಿಗೊಳಿಸಿ ರೈತರಿಗೆ ವರ್ಷಕ್ಕೆ 3 ಬೆಳೆ ಬೆಳೆಯಲು ಆಯಾ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು. ಬಿ.ಟಿ. ಚಂದ್ರಶೇಖರ, ಬಸವರಾಜ ಪಾಟೀಲ, ಭೀಮನಗೌಡಾ ರಾಮಾಪುರಿ, ಸಂಗೀತಾ ಕಾಂಬಳೆ, ಮಹಾದೇವಿ ಕೋಳಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.