ಸಾರಾಂಶ
ಗಂಗಾವತಿ: ದೇಶದ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೆ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಿರಿ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.ಫಲಾನುಭವಿಗಳ ಸಂಪರ್ಕ ಅಭಿಯಾನದ ಆರಂಭದ ಅಂಗವಾಗಿ ಪ್ರಯುಕ್ತ ನಗರದ ವಾರ್ಡ್ ನಂ.25ರ ತಾಯಮ್ಮ ದೇವಸ್ಥಾನದ ಹತ್ತಿರದಲ್ಲಿ ಕೇಂದ್ರ ಸರ್ಕಾರದ ಉಜ್ವಲಾ ಯೋಜನೆಯ ಫಲಾನುಭವಿಗಳಾದ ರತ್ನಮ್ಮ ಹನುಮಂತಪ್ಪ ಮನೆಗೆ ತೆರಳಿ ಅವರಿಗೆ ಯೋಜನೆಯಿಂದಾದ ಅನುಕೂಲದ ಬಗ್ಗೆ ವಿಚಾರಿಸಿ ಮನವಿ ಮಾಡಿಕೊಂಡರು.ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಂಡು ಮುಂದಿನ ಚುನಾವಣೆಯಲ್ಲಿ ಸಹ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಬಿಜೆಪಿಗೆ ಮತ ನೀಡಬೇಕೆಂದು ವಿನಂತಿಸಿಕೊಂಡರು.ಅಭಿಯಾನದ ಸಂಚಾಲಕ ಚಂದ್ರಶೇಖರ ಅಕ್ಕಿ, ನಗರ ಮಂಡಲ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಬಸವರಾಜ, ಶಿವಪ್ಪ ಮಾದಿಗ, ಶ್ರೀನಿವಾಸ ಧೂಳ, ಸಂಗಯ್ಯ ಸ್ವಾಮಿ ಉಪಸ್ಥಿತರಿದ್ದರು.ನಂತರ ವಾರ್ಡ್ ನಂ.26ರ ಬೂತ್ ನಂ.187ರಲ್ಲಿ ಬೂತ್ ಸಮಿತಿಯವರ ಜೊತೆ ತೆರಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ನೇರ ಪ್ರಸಾರ ವೀಕ್ಷಿಸಿದರು.