ಸಾರಾಂಶ
ಸಾರ್ವಜನಿಕ ಆರೋಗ್ಯ, ಸಾಂಕ್ರಾಮಿಕ ರೋಗ ನಿಯಂತ್ರಣ, ತಾಯಿ ಮಕ್ಕಳ ಆರೋಗ್ಯ ಸಮಸ್ಯೆ, ಕ್ಷಯರೋಗ ನಿಯಂತ್ರಣ, ಜೀವನಶೈಲಿ ರೋಗಗಳ ನಿಯಂತ್ರಿಸುವಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಹಾಗೂ ಪೌಷ್ಟಿಕ ಸಮಿತಿಗಳ ಪಾತ್ರ ಮುಖ್ಯವಾಗಿದೆ. ಮಾ.3ರಿಂದ ಆರಂಭವಾಗುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಮಿತಿ ಸದಸ್ಯರು ಸಹಕರಿಸಬೇಕು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಆರೋಗ್ಯ ಸಮಸ್ಯೆ ಪರಿಹರಿಸುವಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಸದಸ್ಯರ ಪಾತ್ರ ಮಹತ್ವವಾದದು ಎಂದು ಯಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಶ್ಮಿತಾ ಹೇಳಿದರು.ಚಿತ್ರದುರ್ಗ ತಾಲೂಕಿನ ಯಳಗೋಡು ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವಾಸ್ ಆಂದೋಲನ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ ಸಾರ್ವಜನಿಕ ಆರೋಗ್ಯ, ಸಾಂಕ್ರಾಮಿಕ ರೋಗ ನಿಯಂತ್ರಣ, ತಾಯಿ ಮಕ್ಕಳ ಆರೋಗ್ಯ ಸಮಸ್ಯೆ, ಕ್ಷಯರೋಗ ನಿಯಂತ್ರಣ, ಜೀವನಶೈಲಿ ರೋಗಗಳ ನಿಯಂತ್ರಿಸುವಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಹಾಗೂ ಪೌಷ್ಟಿಕ ಸಮಿತಿಗಳ ಪಾತ್ರ ಮುಖ್ಯವಾಗಿದೆ. ಮಾ.3ರಿಂದ ಆರಂಭವಾಗುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಮಿತಿ ಸದಸ್ಯರು ಸಹಕರಿಸಬೇಕು. ಯಳಗೋಡಿನ ವ್ಯಾಪ್ತಿಯಲ್ಲಿನ ಒಟ್ಟು 39 ಹಳ್ಳಿಗಳಲ್ಲೂ ಗ್ರಾಮ ಆರೋಗ್ಯ ಸಭೆ ನಡೆಸಿ ಸ್ಥಳೀಯ ಶಾಲೆಗಳಲ್ಲಿ ಪಲ್ಸ್ ಪೋಲಿಯೋ ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ , ವಿಶ್ವಾಸ್ ಆಂದೋಲನ, ವಾರ್ಷಿಕ ಕ್ರಿಯಾ ಯೋಜನೆ ರಚನೆ, ಆರೋಗ್ಯ ಸಮಸ್ಯೆಗಳ ಪಟ್ಟಿ ಬಗ್ಗೆ, ಆರೋಗ್ಯ ಮತ್ತು ಶುಚಿತ್ವ, ಜೀವನ ಶೈಲಿ ಬದಲಾವಣೆ, ಇತರೆ ಸಾಮಾಜಿಕ ಪಿಡುಗುಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣ್ ಎಂ.ಎಸ್, ಕುಚೇಲಾ, ಪ್ರಾಥಮಿಕ ಆರೋಗ್ಯ ಸುರಕ್ಷಿತಾ ಅಧಿಕಾರಿ ರುಕ್ಮಿಣಿ, ಸುನೀತಾ, ಜ್ಯೋತಿ ಸಮುದಾಯ ಆರೋಗ್ಯಾಧಿಕಾರಿ ಶಾಲಿನಿ, ವಿನಯ್, ದಿನೇಶ್, ಗ್ರಾಮ ಆರೋಗ್ಯ ನೈರ್ಮಲ್ಯ ಪೌಷ್ಟಿಕ ಸಮಿತಿ ಸದಸ್ಯರಾದ ನಾಗರಾಜ್, ರತ್ನಮ್ಮ, ಕವಿತಾ, ವೀಣಾ ಇದ್ದರು.