ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕತರಾಗಿ ಸೇವೆ ಸಲ್ಲಿಸುತ್ತ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡುತ್ತ ವಿವಿಧ ಹಂತದ ಜನಸೇವೆ ಮಾಡಿ ಅಪಾರ ರಾಜಕೀಯ ಅನುಭವ ಹೊಂದಿರುವ ಶಿವಾನಂದ ಉದಪುಡಿಯವರನ್ನು ಎಂಎಲ್‌ಸಿ ನಾಮನಿರ್ದೇಶನ ಮಾಡಬೇಕೆಂದು ಲೋಕಾಪುರ, ಮುಧೋಳ, ಬಾಗಲಕೋಟೆ ಭಾಗದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ರೈತರು, ಯವಕರು ಹಾಗೂ ಅಭಿಮಾನಿಗಳ ಏಕಮತದ ಅಭಿಪ್ರಾಯವಾಗಿದೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕತರಾಗಿ ಸೇವೆ ಸಲ್ಲಿಸುತ್ತ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡುತ್ತ ವಿವಿಧ ಹಂತದ ಜನಸೇವೆ ಮಾಡಿ ಅಪಾರ ರಾಜಕೀಯ ಅನುಭವ ಹೊಂದಿರುವ ಶಿವಾನಂದ ಉದಪುಡಿಯವರನ್ನು ಎಂಎಲ್‌ಸಿ ನಾಮನಿರ್ದೇಶನ ಮಾಡಬೇಕೆಂದು ಲೋಕಾಪುರ, ಮುಧೋಳ, ಬಾಗಲಕೋಟೆ ಭಾಗದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ರೈತರು, ಯವಕರು ಹಾಗೂ ಅಭಿಮಾನಿಗಳ ಏಕಮತದ ಅಭಿಪ್ರಾಯವಾಗಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮುಧೋಳ ತಾಲೂಕು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು, ರಾಜ್ಯದ ಹಿರಿಯ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕತ್ವಕ್ಕೆ ನಮ್ಮ ಬಲವಾದ ಮನವಿ ಹಾಗೂ ಶಿಫಾರಸು ಸಲ್ಲಿಸಿದ್ದಾರೆ.
ಶಿವಾನಂದ ಉದುಪುಡಿಯವರು ಮೂರು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಜನಪರ ನಾಯಕರಾಗಿ ಹಾಗೂ ಸಮಾಜ ಸೇವಕರಾಗಿ ನಿರಂತರ ಸೇವೆ ಸಲ್ಲಿಸಕೊಂಡು ಬಂದಿದ್ದಾರೆ. ಪಕ್ಷ ಸಂಘಟನೆ, ರೈತ ಹಿತ, ಸಹಕಾರಿ ಕ್ಷೇತ್ರ, ಆರೋಗ್ಯ ಸೇವೆ, ಉದ್ಯೋಗ ಸೃಷ್ಟಿ ಮತ್ತು ಸಾರ್ವಜನಿಕ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಗ್ರಾಮ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಕಾಂಗ್ರೆಸ್ ಪಕ್ಷದ ಸಂಘಟನೆ ಬಲಪಡಿಸಲು ಅವಿರತವಾದ ಶ್ರಮ ವಹಿಸಿದ್ದಾರೆ. ಲೋಕಸಭೆ, ವಿಧಾನಸಭೆ, ಜಿಪಂ, ತಾಪಂ, ಗ್ರಾಪಂ ಸೇರಿ ಅನೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮಹತ್ವದ ಪಾತ್ರವಹಿಸಿದ್ದಾರೆ ಎಂದು ಕಾರ್ಯಕರ್ತರ ಒಟ್ಟಾರೆ ಅಭಿಪ್ರಾಯವಾಗಿದೆ.
ಕಾಂಗ್ರೇಸ್ ಮುಖಂಡರಾದ ಉದಯಸಿಂಗ್ ಪಡತಾರೆ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಆನಂದ ಹಿರೇಮಠ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಫೀಕ್ ಬೈರಕದಾರ, ವೆಂಕಟೇಶ ಅಂಕಲಗಿ, ಬೀರಪ್ಪ ಮಾಯಣ್ಣವರ, ಹೊಳಬಸು ದಂಡಿನ, ರವಿ ಬೋಳಿಶೆಟ್ಟಿ, ಷಣ್ಮುಖಪ್ಪ ಕೊಲ್ಹಾರ, ನಾರಾಯಣ ಶಿಂಧೆ, ಬಸವರಾಜ ಕಾತರಕಿ, ಲಕ್ಷ್ಮಣ ಮಾಲಗಿ, ಗಣಪತಿ ಗಸ್ತಿ, ಅಬ್ದುಲ್ ರೆಹೆಮಾನ್ ತೊರಗಲ್, ಮುತ್ತಪ್ಪ ಚೌಧರಿ, ಕುಮಾರ ಕಾಳಮ್ಮನವರ, ರವಿ ರೊಡ್ಡಪ್ಪನವರ, ಉಮೇಶ ಗಸ್ತಿ, ಸಂಗಣ್ಣ ಕಟಗೇರಿ, ಸುಲ್ತಾನ ಸೇರಿ ಕಲಾದಗಿ ಅನೇಕ ಕಾಂಗ್ರೆ ಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.ಲೋಕಾಪುರ ಮುಧೋಳ, ಬಾಗಲಕೋಟೆ ಭಾಗದ ಸಮಗ್ರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ದೂರದೃಷ್ಟಿಕೋನ, ಜನಪರ ಬದ್ಧತೆ ಮತ್ತು ಸಂಘಟನಾ ಸಾಮರ್ಥ್ಯ ಹೊಂದಿರುವ ಶಿವಾನಂದ ಉದಪುಡಿಯವರ ನಾಯಕತ್ವ ಈ ಭಾಗಕ್ಕೆ ಅತ್ಯಂತ ಅಗತ್ಯವಾಗಿದೆ. ಅವರ ಕನಸು ಕೇವಲ ರಾಜಕೀಯ ಪ್ರತಿನಿಧಿತ್ವವಲ್ಲ ಸಮಗ್ರ ಅಭಿವೃದ್ಧಿ ಜನಪರ ದೃಷ್ಟಿಕೊನ ಹೊಂದಿದೆ. ಅವರನ್ನು ವಿಧಾನ ಪರಿಷತ್ ನಾಮ ನಿರ್ದೇಶಕ ಸದಸ್ಯರನ್ನಾಗಿ ಮಾಡಲು ನನ್ನ ಸಹಮತವಿದೆ.
- ನಅಶೋಕ ಕಿವಡಿ ಅಧ್ಯಕ್ಷರು ಲೋಕಾಪುರ ಬ್ಲಾಕ್ ಕಾಂಗ್ರೆಸ್ಕಾಂಗ್ರೆಸ್ ಪಕ್ಷದ ಮೇಲಿನ ಅಚಲ ನಿಷ್ಠೆ, ಪಕ್ಷ ಸಂಘಟನೆಯಲ್ಲಿ ದೀರ್ಘ ಸೇವೆ, ಜನಸಂಪರ್ಕ ಅಭಿವೃದ್ಧಿ ಚಿಂತನೆ ಮತ್ತು ಜನರ ವಿಶ್ವಾಸ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಶಿವಾನಂದ ಉದಪುಡಿ ಅವರನ್ನು ಎಂಎಲ್‌ಸಿ ನಾಮನಿರ್ದೇಶನ ಮಾಡುವಂತೆ ಒತ್ತಾಯಿಸುತ್ತಿದ್ದೇವೆ.
- ಲಕ್ಷ್ಮಣ ಮಾಲಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಕೆಎಂಎಫ್ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರು