ಹಿಂದುಳಿದ ವರ್ಗದ ಪ್ರಥಮ ಹ್ಯಾಟ್ರಿಕ್ ಪ್ರಧಾನಿ ಮಾಡಿ

| Published : Apr 23 2024, 12:50 AM IST

ಹಿಂದುಳಿದ ವರ್ಗದ ಪ್ರಥಮ ಹ್ಯಾಟ್ರಿಕ್ ಪ್ರಧಾನಿ ಮಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಹಿಂದುಳಿದ ವರ್ಗಗಳ ಪ್ರಧಾನ ಮಂತ್ರಿಗಳಾಗಿ ನರೇಂದ್ರ ಮೋದಿಯವರು ಇಡೀ ಪ್ರಪಂಚವೇ ತಿರುಗುವಂತೆ ಅಭಿವೃದ್ಧಿ ಕೆಲಸ ಮಾಡಿದ್ದು ಹ್ಯಾಟ್ರಿಕ್ ಪ್ರಧಾನಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡಿ ಎಂದು ಬೆಂಗಳೂರು ಗ್ರಾಮಾಂತರ ಎನ್‌ಡಿಎ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಮನವಿ ಮಾಡಿದರು.

ಮಾಗಡಿ: ಹಿಂದುಳಿದ ವರ್ಗಗಳ ಪ್ರಧಾನ ಮಂತ್ರಿಗಳಾಗಿ ನರೇಂದ್ರ ಮೋದಿಯವರು ಇಡೀ ಪ್ರಪಂಚವೇ ತಿರುಗುವಂತೆ ಅಭಿವೃದ್ಧಿ ಕೆಲಸ ಮಾಡಿದ್ದು ಹ್ಯಾಟ್ರಿಕ್ ಪ್ರಧಾನಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡಿ ಎಂದು ಬೆಂಗಳೂರು ಗ್ರಾಮಾಂತರ ಎನ್‌ಡಿಎ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಮನವಿ ಮಾಡಿದರು.

ಪಟ್ಟಣದ ಸಿದ್ಧಾರೂಢ ಭವನದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ನಾಯಕರಾಗಿ ದೇಶ ಕಂಡ ಅಪರೂಪದ ವ್ಯಕ್ತಿಯನ್ನು ಪ್ರಧಾನಿಗಳನ್ನಾಗಿ ಮಾಡಿದ್ದು ಅದೇ ರೀತಿ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ ಕೀರ್ತಿ ಪ್ರಧಾನ ಮಂತ್ರಿಗಳಿಗೆ ಸಲ್ಲುತ್ತದೆ. ಅದೇ ರೀತಿ ನಾನು ಕೂಡ ದೀನ ದಲಿತರು, ಬಡವರ ಪರವಾಗಿ ವೈದ್ಯಕೀಯ ವೃತ್ತಿಯಲ್ಲಿ ಸೇವೆ ಮಾಡಿದ್ದು 75 ಲಕ್ಷ ಹೊರ ರೋಗಿಗಳಿಗೆ ಆಪರೇಷನ್ ಮಾಡಿದ್ದು 8 ಲಕ್ಷ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ. ಪ್ರಧಾನ ಮಂತ್ರಿಗಳ ಕೈ ಬಲಪಡಿಸಲು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ 3ನೇ ಬಾರಿಗೆ ಮೋದಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಹೇಳಿದರು.

ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್.ಬಸವರಾಜು ಮಾತನಾಡಿ, ಹಿಂದುಳಿದ ವರ್ಗಗಳಿಗೆ ಬಿಜೆಪಿ ಸಾಕಷ್ಟು ಯೋಜನೆಗಳನ್ನು ನೀಡಿ ಆರ್ಥಿಕವಾಗಿ ಮುಂದೆ ಬರಲು ಸಹಕಾರಿಯಾಗಿದೆ. ನೇಕಾರರಿಗೆ ಪ್ರತಿ ತಿಂಗಳು 5 ಸಾವಿರ ಬರುವ ಯೋಜನೆಯನ್ನು ಯಡಿಯೂರಪ್ಪನವರ ಸರ್ಕಾರ ನೀಡಿದೆ. ವಿಶ್ವಕರ್ಮ ಯೋಜನೆ ಮೂಲಕ ಹಿಂದುಳಿದ ವರ್ಗದ ಕಲ್ಯಾಣಕ್ಕೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಸೇರಿದಂತೆ 8 ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚು ಮತ ಬೀಳುವ ಮೂಲಕ ಎನ್‌ಡಿಎ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ಗೆಲುವು ಸಾಧಿಸುವಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ, ಮಾಧ್ಯಮ ವಕ್ತಾರ ಕೋಟ್ರೇಶ್, ರಾಜಶೇಖರ್, ಎಂಎಲ್ಸಿ ಅ.ದೇವೇಗೌಡ ಮಾತನಾಡಿದರು. ಪುರಸಭಾ ಸದಸ್ಯರಾದ ಎಂ.ಎನ್.ಮಂಜು, ಅಶ್ವಥ್, ಭಾಗ್ಯಮ್ಮ, ರೇಖಾ, ಮಾಜಿ ಸದಸ್ಯರಾದ ಶಿವಕುಮಾರ್, ಮಾಹದೇವ್, ಮುಖಂಡರಾದ ರಾಘವೇಂದ್ರ, ಕುದೂರು ಶೇಷಪ್ಪ, ನಾರಾಯಣಸ್ವಾಮಿ, ಹೊಂಬಾಳಮ್ಮನಪೇಟೆ ರಾಮಣ್ಣ, ಬಾಲಕೃಷ್ಣ, ಅಶ್ವಿನಿ ಶಂಕರ್, ನಾಗರಾಜು, ಭಾಸ್ಕರ್, ಅಂಜನ್ ಕುಮಾರ್ 22ಮಾಗಡಿ2 :

ಮಾಗಡಿಯ ಸಿದ್ಧಾರೂಢ ಭವನದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಮಾತನಾಡಿದರು. ಎಂಎಲ್ಸಿ ಅ.ದೇವೇಗೌಡ, ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ, ಮಾಧ್ಯಮ ವಕ್ತಾರ ಕೋಟ್ರೇಶ್, ರಾಜಶೇಖರ್ ಇತರರಿದ್ದರು.