21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ

ಕನ್ನಡಪ್ರಭ ವಾರ್ತೆ, ಕಡೂರು

ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗುವ ನಿರ್ಣಯಗಳನ್ನು ಸಾರ್ವಜನಿಕರು ಮತ್ತು ಸರ್ಕಾರದ ಗಮನಕ್ಕೆ ತಂದು ಜಾರಿಗೆ ಪ್ರಯತ್ನಿಸಿದರೆ ನಿರ್ಣಯಗಳು ಅರ್ಥಪೂರ್ಣವಾಗಲು ಸಾಧ್ಯ ಎಂದು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಹೇಳಿದರು. ಸೋಮವಾರ ಕಡೂರು ಪ್ರವಾಸಿ ಮಂದಿರದಲ್ಲಿ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಈ ಸಮ್ಮೇಳನ ಯಶಸ್ವಿ ಆಗುವಂತೆ ಭಗವಂತನ ಆಶೀರ್ವಾದ ಕೋರುತ್ತಾ ಯಶಸ್ಸಿಗೆ ಎಲ್ಲರೂ ಕೈ ಜೋಡಿಸೋಣ. ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದರೂ ಕಾರ್ಯಕ್ರಮಕ್ಕೆ ಬರುವುದಿಲ್ಲ. ಹಾಗಾಗಿ ಸಮ್ಮೇಳನದ ಅತಿಥಿಗಳನ್ನು ಮಾತನಾಡಿಸಿ ಕಡ್ಡಾಯವಾಗಿ ಆಗಮಿಸುವಂತೆ ನೋಡಿಕೊಳ್ಳಬೇಕು ಎಂದರು.

ಈ ಸಮ್ಮೇಳನಗಳ ಚರ್ಚಿತ ವಿಷಯಗಳು ಕೇವಲ ಚರ್ಚೆ ಆಗದೆ ವಿಷಯಗಳನ್ನು ದಾಖಲಿಸಿ ಚರ್ಚೆಯ ವಿಷಯ ಪ್ರಿಂಟ್ ಮಾಡಿಸಿ ಲೆಕ್ಕ ಪತ್ರ ಮಂಡನೆ ದಿನ ಅದರ ಪ್ರತಿ ನೀಡಬೇಕು. ಅಲ್ಲದೆ ಸಮ್ಮೇಳನದ ನಿರ್ಣಯಗಳನ್ನು ಸರ್ಕಾರ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದು ಆ ಮೂಲಕ ಸರ್ಕಾರದ ಮಟ್ಟದಲ್ಲಿ ಒತ್ತಾಯಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಲೆಕ್ಕಪತ್ರ ಮಂಡನೆ ವಿಷಯ ಸಾರ್ವಜನಿಕರಿಗೆ ನೀಡಿದರೆ ಮತ್ತೆ ಸಹಕಾರ ನೀಡಲು ಅಭಿಮಾನಿಗಳಿಗೆ ಮನಸ್ಸು ಬರುತ್ತದೆ ಎಂದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಮೂರು ದಿನಗಳ ಸಮ್ಮೇಳನದಲ್ಲಿ ಚಿಂತಕರು, ಸಾಹಿತಿಗಳು ಮತ್ತು ಕನ್ನಡದ ಮನಸ್ಸುಗಳನ್ನು ಒಂದು ಗೂಡಿಸುವ ನಿಟ್ಟಿನಲ್ಲಿ ಬೀರೂರಿನಲ್ಲಿ ಸಮ್ಮೇಳನ ನಡೆದ 15 ವರ್ಷಗಳ ಬಳಿಕ ಕಡೂರು ಪಟ್ಟಣದಲ್ಲಿ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಅದರ ಯಶಸ್ಸಿಗೆ ಎಲ್ಲರೂ ಸೇರಿ ಕೈ ಜೋಡಿಸುತ್ತಿದ್ದೇವೆ. ಮಾಜಿ ಶಾಸಕ ಕೆ.ಬಿ, ಮಲ್ಲಿಕಾರ್ಜುನ್‌ ಅವರ ಸಲಹೆ ಸಹಕಾರದ ಮೂಲಕ ಸಮ್ಮೇಳನದ ಯಶಸ್ಸಿಗೆ ದುಡಿಯುತ್ತೇವೆ ಎಂದ ಅವರು, ಹಿರಿಯ ರಾಜಕಾರಣಿಗಳು, ಕನ್ನಡದ ಮನಸ್ಸುಗಳು ಸೇರಿ ಸಾಹಿತ್ಯ ರಥ ಎಳೆಯಲು ಕೈಜೋಡಿಸೋಣ ಎಂದು ಮನವಿ ಮಾಡಿದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಚಿಂತಕರು ಮತ್ತು ಮಾಜಿ ಶಾಸಕ ಕೆ ಬಿ ಮಲ್ಲಿಕಾರ್ಜುನ ಅವರ ಸಲಹೆಗಳನ್ನು ಪರಿಷತ್ತು ಪರಿಗಣಿಸಲಿದೆ ಎಂದರು. ಸಮ್ಮೇಳನದ ವಿವಿಧ ವಿಭಾಗಗಳ ಪದಾಧಿಕಾರಿಗಳಾದ ಲತಾ ರಾಜಶೇಖರ್. ಎಚ್.ಎಂ. ಲೋಕೇಶ್, ಆಸಂದಿ ಕಲ್ಲೇಶ್, ಟಿ.ಡಿ.ಸತ್ಯನ್, ಪಿ.ಎ. ರಾಜಪ್ಪ, ಸೀಗೇಹಡ್ಲು ಹರೀಶ್, ಮರುಗುದ್ದಿ ಮನು, ಕೆ.ಬಿ.ಶಿವಕುಮಾರ್, ಯಾಸೀನ್,ಜಗದೀಶ್, ಆರ್.ಜಿ.ಕೃಷ್ಣಸ್ವಾಮಿ, ಮಂಜುನಾಥ್, ಸವಿತಾ ರಮೇಶ್, ನಂಜುಂಡಸ್ವಾಮಿ, ರೇಣುಕಯ್ಯ,ವೈ ಎಸ್ ವಿ ಗಿರೀಶ್ ಸೇರಿದಂತೆ ಮತ್ತಿತರರು ಇದ್ದರು. -- ಬಾಕ್ಸ್ ಸುದ್ದಿಗೆ--


ಚುನಾವಣೆ ಪ್ರಚಾರ ಕನ್ನಡದಲ್ಲಿ ನಡೆಯಲಿಕನ್ನಡ ಭಾಷೆಯಲ್ಲಿ ಚುನಾವಣೆ ಪ್ರಚಾರಗಳು ನಡೆಯಬೇಕು. ಆದರೆ ಕರ್ನಾಟಕದಲ್ಲಿ ಬೇರೆ ಭಾಷೆಗಳಲ್ಲಿ ಪ್ರಚಾರ ನಡೆಯುತ್ತಿರುವುದು ಕನ್ನಡಕ್ಕೆ ಆಗುವ ಅವಮಾನ. ಕನ್ನಡ ಪರ ಸಂಘಟನೆಗಳು ಇದ್ದು ಕೂಡ ಇಂತಹ ಬೆಳವಣಿಗೆ ಬೇಸರದ ಸಂಗತಿ.

-- ಕೆ.ಬಿ.ಮಲ್ಲಿಕಾರ್ಜುನ್, ಮಾಜಿ ಶಾಸಕರು. 6ಕೆಕೆಡಿಯು 1

ಕಡೂರು ಪಟ್ಟಣದಲ್ಲಿ ನಡೆಯಲಿರುವ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಬಿಡುಗಡೆ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮತ್ತಿತರರು ಇದ್ದರು.