ಶಾಲೆಯ ಮಕ್ಕಳಿಗೆ ಓಡಾಡಲು ದಾರಿ ಬಿಡಿಸಿ ಕೊಡಿ

| Published : Feb 16 2025, 01:49 AM IST

ಸಾರಾಂಶ

ಗಂಡಸಿ ಹ್ಯಾಂಡ್‌ಪೋಸ್ಟ್‌ನಲ್ಲಿ ನಡೆಯುತ್ತಿರುವ ಮೈತ್ರಿ ಕಾನ್ವೆಂಟ್ ಶಾಲೆಯು ಸರಿ ಸುಮಾರು 30 ವರ್ಷಗಳಿಂದ ಸತತವಾಗಿ ನಡೆಯುತ್ತಿದೆ. ಈಗ ಒಂದು ತಿಂಗಳಿಂದ ವೆಂಕಟೇಶ್ ಎಂಬುವವರು ಶಾಲೆಯ ಮಕ್ಕಳಿಗೆ ಓಡಾಡಲು ದಾರಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದು ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕೆಂದು ಸಂಸ್ಥೆಯ ಕಾರ್ಯದರ್ಶಿ, ಧರ್ಮರಾಜ್ ಕಡಗ ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಗಂಡಸಿ ಹ್ಯಾಂಡ್‌ಪೋಸ್ಟ್‌ನಲ್ಲಿ ನಡೆಯುತ್ತಿರುವ ಮೈತ್ರಿ ಕಾನ್ವೆಂಟ್ ಶಾಲೆಯು ಸರಿ ಸುಮಾರು 30 ವರ್ಷಗಳಿಂದ ಸತತವಾಗಿ ನಡೆಯುತ್ತಿದೆ. ಈಗ ಒಂದು ತಿಂಗಳಿಂದ ವೆಂಕಟೇಶ್ ಎಂಬುವವರು ಶಾಲೆಯ ಮಕ್ಕಳಿಗೆ ಓಡಾಡಲು ದಾರಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದು ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡಬೇಕೆಂದು ಸಂಸ್ಥೆಯ ಕಾರ್ಯದರ್ಶಿ, ಧರ್ಮರಾಜ್ ಕಡಗ ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಸಂಸ್ಥೆಯ ಕಾರ್ಯದರ್ಶಿ, ಧರ್ಮರಾಜ್ ಕಡಗ ಮಾತನಾಡಿ, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಅನುಕೂಲಕರವಾಗುವ ರೀತಿಯಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ತುಂಬಾ ಕಡಿಮೆ ದರದ ಶುಲ್ಕದಲ್ಲಿ ಮಕ್ಕಳಿಗೆ ನೀಡುತ್ತಾ ಬಂದಿದ್ದು, ಗ್ರಾಮೀಣ ಪ್ರದೇಶದಲ್ಲಿ ಇದ್ದಂತಹ ಬಹುಮುಖ ಪ್ರತಿಭೆಗಳಾದ ಮಕ್ಕಳು ಈಗ ಉನ್ನತ ವಿದ್ಯಾಭ್ಯಾಸ ಪಡೆದು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಇಂಥಹ ಒಂದು ಒಳ್ಳೆಯ ಶಿಕ್ಷಣ ಸಂಸ್ಥೆಗೆ, ಸುಮಾರು 30 ವರ್ಷಗಳ ಕಾಲದಿಂದ ಯಾವುದೇ ತಕರಾರಿಲ್ಲದೆ ತುಂಬಾ ಸುಸಜ್ಜಿತವಾಗಿ ನಡೆದಂತಹ ಸಂಸ್ಥೆಗೆ, ಈಗ ಒಂದು ತಿಂಗಳಿಂದ ವೆಂಕಟೇಶ್ ಎಂಬುವವರು ಶಾಲೆಯ ಮಕ್ಕಳಿಗೆ ಓಡಾಡಲು ದಾರಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಹಾಗಾಗಿ ಮಕ್ಕಳು ಸುಮಾರು ಒಂದು ಕಿಲೋಮೀಟರ್ ದೂರದಿಂದ ಬಿಸಿಲಿನಲ್ಲಿ ನಡೆದುಕೊಂಡು ಬಂದು ಹೋಗಬೇಕಾಗಿದೆ. ಈ ಕಾರಣಕ್ಕಾಗಿ ಶಾಲಾ ಶಿಕ್ಷಕ ವೃಂದದವರು ಹಾಗೂ ಪೋಷಕ ವೃಂದದವರು ತಾಲೂಕು ಕಚೇರಿಗೆ ಭೇಟಿ ಮಾಡಿ ತಹಸೀಲ್ದಾರ್ ಅವರ ಸನ್ನಿಧಾನಕ್ಕೆ ದಾರಿ ಬಿಡಿಸಿ ಕೊಡುವಂತೆ ಮನವಿ ಪತ್ರವನ್ನು ಇಂದು ಸಲ್ಲಿಸಿದ್ದು.

ಶಾಲೆಯ ಕಾರ್ಯದರ್ಶಿಗಳಾದ ಧರ್ಮರಾಜ್ ಕಡಗ, ಶಾಲೆಯ ಮುಖ್ಯ ಶಿಕ್ಷಕಿ ಆಶಾ ಹಾಗೂ ಸಹ ಶಿಕ್ಷಕರಾದ ಭಾಗ್ಯ, ಪುಷ್ಪ, ಮತ್ತು ಪೋಷಕರಾದ ಸೌಮ್ಯ, ಶಿವಸ್ವಾಮಿ, ಇನ್ನೂ ಮುಂತಾದವರು ಇದ್ದರು.