ಆರೋಗ್ಯ ಭಾರತಿ ಮಂಗಳೂರು ಜಿಲ್ಲೆ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಭಾನುವಾರ ವಿಶ್ವ ಯೋಗ ದಿನದಂದು ಯೋಗ ಶಿಬಿರ ಕಾರ್ಯಕ್ರಮ ಬಿಜೈನ ಸರೋಜಿನಿ ನಿವಾಸದ ಆವರಣದಲ್ಲಿ ನಡೆಯಿತು.

ಮಂಗಳೂರು: ಆರೋಗ್ಯ ಭಾರತಿ ಮಂಗಳೂರು ಜಿಲ್ಲೆ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಭಾನುವಾರ ವಿಶ್ವ ಯೋಗ ದಿನದಂದು ಯೋಗ ಶಿಬಿರ ಕಾರ್ಯಕ್ರಮ ಬಿಜೈನ ಸರೋಜಿನಿ ನಿವಾಸದ ಆವರಣದಲ್ಲಿ ನಡೆಯಿತು. ಯೋಗ ಗುರು ಸುಮಾ ಶೆಟ್ಟಿ ಯೋಗ ತರಬೇತಿ ನೀಡಿದರು. ಸುಮಾರು ೨೦ ಮಂದಿ ಈ ಶಿಬಿರದ ಪ್ರಯೋಜನ ಪಡೆದರು.ಆರೋಗ್ಯ ಭಾರತಿ ಮಂಗಳೂರು ಇದರ ಕಾರ್ಯದರ್ಶಿ ಉಮೇಶ್ ಪ್ರಭು, ಸಹ ಕಾರ್ಯದರ್ಶಿ ದಿನೇಶ್, ಆರೋಗ್ಯ ಭಾರತಿ ವಿಭಾಗ ಸಂಚಾಲಕ ಪುರುಷೋತ್ತಮ, ಮಂಗಳೂರು ಮಹಾನಗರ ಸಂಘ ಚಾಲಕ ಡಾ.ಸತೀಶ್ ರಾವ್, ಆರೋಗ್ಯ ಭಾರತಿ ಜಿಲ್ಲಾಧ್ಯಕ್ಷ ಡಾ.ಈಶ್ವರ ಪಲ್ಲಾದೆ, ಆರೋಗ್ಯ ಭಾರತಿ ಗೌರವ ಅಧ್ಯಕ್ಷ ಡಾ.ಮುರಲೀ ಮೋಹನ್ ಚೂಂತಾರು, ಸರೋಜಿನಿ ಪ್ರತಿಷ್ಟಾನದ ಡಾ.ರಾಜಶ್ರೀ ಮೋಹನ್, ಗ್ರೀನ್ ಎಕರೆ ಬಡಾವಣೆಯ ರವೀಂದ್ರ, ಎ.ಎಸ್‌. ಭಟ್, ವಿಜಯಾ ಭಟ್, ಡಾ. ಆಶಾ, ಮಧುರಾ ಭಟ್, ಅಂಬಿಕಾ ಶೆಟ್ಟಿ, ಡಾ ಸಚಿನ್ ನಡ್ಕ, ಡಾ. ಶಶಾಂಕ್ ಇದ್ದರು.

ಯೋಗ ಗುರುಗಳಾದ ಶ್ರೀಮತಿ ಸುಮಾ ಶೆಟ್ಟಿ ಮತ್ತು ಯೋಗ ಸಾಧಕರಾದ ಶ್ರೀ ಕಾರ್ತಿಕ್ ಶೆಟ್ಟಿ ಇವರನ್ನು ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಲಾಯಿತು.