ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ -ಡೈಮಂಡ್ಸ್ ನೀಡುವ ಮಲಬಾರ್ ವಿಶ್ವ ಪುರಸ್ಕಾರ-2026ಕ್ಕೆ ‘ಕನ್ನಡಪ್ರಭ’ದ ಕಾರ್ಕ‍ಳ ತಾಲೂಕು ವರದಿಗಾರ ರಾಮ್ ಅಜೆಕಾರ್ ಮತ್ತು ‘ಸುವರ್ಣ ನ್ಯೂಸ್’ನ ಉಡುಪಿ ಜಿಲ್ಲಾ ವರದಿಗಾರ ಶಶಿಧರ್ ಮಾಸ್ತಿಬೈಲು ಸೇರಿದಂತೆ ಒಟ್ಟು 8 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ -ಡೈಮಂಡ್ಸ್ ನೀಡುವ ಮಲಬಾರ್ ವಿಶ್ವ ಪುರಸ್ಕಾರ-2026ಕ್ಕೆ ‘ಕನ್ನಡಪ್ರಭ’ದ ಕಾರ್ಕ‍ಳ ತಾಲೂಕು ವರದಿಗಾರ ರಾಮ್ ಅಜೆಕಾರ್ ಮತ್ತು ‘ಸುವರ್ಣ ನ್ಯೂಸ್’ನ ಉಡುಪಿ ಜಿಲ್ಲಾ ವರದಿಗಾರ ಶಶಿಧರ್ ಮಾಸ್ತಿಬೈಲು ಸೇರಿದಂತೆ ಒಟ್ಟು 8 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಉಡುಪಿ ತಾಲೂಕು ಕಸಾಪ ಸಹಯೋಗದಲ್ಲಿ ಜು.1ರಂದು ವಿಶ್ವ ವೈದ್ಯರ, ಲೆಕ್ಕ ಪರಿಶೋಧಕರ ಮತ್ತು ಪತ್ರಿಕಾ ದಿನಾಚರಣೆ ಅಂಗವಾಗಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಈ ಪುರಸ್ಕಾರಗಳನ್ನು ಪ್ರದಾನ ಮಾಡಲಾಗುವುದು.

ಪ್ರಶಸ್ತಿ ಪುರಸ್ಕೃತರು: ‘ಮಲಬಾರ್ ವಿಶ್ವ ವೈದ್ಯ ಪುರಸ್ಕಾರ’ : ಡಾ. ಎ. ರಾಮಚಂದ್ರ ಬಾಯಾರಿ, ಡಾ. ಕೆ. ಸತೀಶ್ ಕಾಮತ್, ಡಾ. ಇಂದಿರಾ ಶಾನಭಾಗ್. ‘ಮಲಬಾರ್ ವಿಶ್ವ ಲೆಕ್ಕಪರಿಶೋಧಕ ಪುರಸ್ಕಾರ’: ಸಿಎ ದೇವ್ ಆನಂದ್, ಸಿಎ ಗಣೇಶ್ ಎರ್ಮಾಳ್. ‘ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರ’: ಶಶಿಧರ್ ಮಾಸ್ತಿಬೈಲು, ಬಾಲಕೃಷ್ಣ ಪೂಜಾರಿ, ರಾಮ್ ಅಜೆಕಾರ್ ಅವರಿಗೆ ನೀಡಿ ಗೌರವಿಸಲಾಗುತ್ತದೆ.