ಸಾರಾಂಶ
ಈ ಲೋಕಸಭೆ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಪ್ರಹ್ಲಾದ ಜೋಶಿ ಅವರಿಗೆ ಮಾದಿಗ ಸಮಾಜ ಬೆಂಬಲ ನೀಡಲಿದೆ ಎಂದು ಲೀಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಹೇಳಿದರು.
ಹಾವೇರಿ: ಸದಾಶಿವ ಆಯೋಗದ ವರದಿ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದಲ್ಲಿ ಚರ್ಚಿಸಿ ಪರಿಶಿಷ್ಟರಿಗೆ ಅನ್ಯಾಯವಾಗದ ರೀತಿಯಲ್ಲಿ ಅವರವರ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಮತ್ತು ಜೋಶಿ ಅವರಿಗೆ ಮಾದಿಗ ಸಮಾಜ ಬೆಂಬಲ ನೀಡಲಿದೆ ಎಂದು ಲೀಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನಲ್ಲಿ ೮೧.೨೧ ಎಕರೆ ಸರ್ಕಾರಿ ಜಮೀನು ನೀಡಿದ್ದಾರೆ. ಮಾದಾರ ಸಮಾಜದ ಜನರ ಶೈಕ್ಷಣಿಕ, ಮತ್ತು ಸಾಂಸ್ಕೃತಿಕ, ಚರ್ಮ ಕೈಗಾರಿಕಾ ವಿವಿಧ ತರಬೇತಿ ಕೇಂದ್ರಗಳನ್ನು-ಪ್ರಾರಂಭಿಸಲು ಸಮಾಜದ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅನುಕೂಲ ಮಾಡಿ ಕೊಟ್ಟಿದ್ದಾರೆ ಎಂದರು.ಈ ಹಿನ್ನೆಲೆಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಆದ ಕಾರಣ ಧಾರವಾಡ, ಹಾವೇರಿ-ಗದಗ ಜಿಲ್ಲೆಯ ಮಾದಿಗ ಸಮಾಜದ ಮತದಾರ ಬಂಧುಗಳು ಬೊಮ್ಮಾಯಿ ಹಾಗೂ ಪ್ರಹ್ಲಾದ ಜೋಶಿ ಅವರಿಗೆ ಮತವನ್ನು ನೀಡುವ ಮೂಲಕ ಅವರ ಋಣ ತೀರಿಸಲು ಸಮಾಜದ ಮತದಾರರು ತುದಿಗಾಲ ಮೇಲೆ ನಿಂತಿದ್ದಾರೆ. ಈ ಇಬ್ಬರನ್ನೂ ತಲಾ ೨ ಲಕ್ಷ ಲೀಡ್‌ನಿಂದ ಗೆಲ್ಲಿಸುವ ಹೊಣೆ ನಮ್ಮದು ಎಂದು ಹೇಳಿದರು.
ಸುಭಾಷ ಬೆಂಗಳೂರು, ಭೀಮಣ್ಣ ಯಲ್ಲಾಪುರ, ಮಲ್ಲೇಶಪ್ಪ ಕಡಕೋಳ, ಸುನೀಲ ದಂಡೆಮ್ಮನವರ, ರಘು ಮಾಳಗಿ, ವಿ. ಯಲ್ಲಾಪುರ ಇದ್ದರು.