ಮಾಲ್ದಾರೆ ಸಮೀಪದ ತಟ್ಟಳ್ಳಿ ಗ್ರಾಮದ ಗೌಡ ಕುಟುಂಬಗಳ 63ನೇ ವರ್ಷದ ಹುತ್ತರಿ ಊರೋರ್ಮೆ ಸಂತೋಷಕೂಟ ತಟ್ಟಳ್ಳಿ ಬಾಣೆಯಲ್ಲಿ ಗುರುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಮಾಲ್ದಾರೆ ಸಮೀಪದ ತಟ್ಟಳ್ಳಿ ಗ್ರಾಮದ ಗೌಡ ಕುಟುಂಬಗಳ 63ನೇ ವರ್ಷದ ಹುತ್ತರಿ ಊರೋರ್ಮೆ ಸಂತೋಷಕೂಟ ತಟ್ಟಳ್ಳಿ ಬಾಣೆಯಲ್ಲಿ ಗುರುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು.52 ಗೌಡ ಕುಟುಂಬಗಳ ಒಟ್ಟುಗೂಡಿ ನಡೆಸಿಕೊಂಡು ಬರುತ್ತಿರುವ ಹುತ್ತರಿ ಊರೋರ್ಮೆ ಕೂಟದ ಸಭೆಯ ಅಧ್ಯಕ್ಷತೆಯನ್ನು ಮೂಡಗದ್ದೆ ಪೂಣಚ್ಚ ವಹಿಸಿದ್ದರು. ಹುತ್ತರಿ ಊರೋರ್ಮೆ ಕೂಟದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ವಾರ್ಷಿಕ ವರದಿಯನ್ನು ಸಂಘದ ಸಹ ಕಾರ್ಯದರ್ಶಿ ಬಳoಜೆಟ್ಟಿ ಗಿರಿಪ್ರಕಾಶ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗರರಾದ ದಂಬೆಕೋಡಿ ಉಮೇಶ್ ಹಾಗೂ ವಕೀಲೆ ಬಳಂಜೇಟ್ಟಿ ವಿಜಯಲಕ್ಶ್ಮಿ, ಕಾರ್ಯದರ್ಶಿ ಕಲ್ಮಂದಿ ಸತೀಶ್, ಸದಸ್ಯರಾದ ಸೂದನ ವಿನೋದ್ ಕೂಡಕಂಡಿ ರೋಹಿತಾಶ್ವ, ಸೂದನ ಯತೀಶ್, ಸತೀಶ್, ಮುಂತಾದವರು ಇದ್ದರು..