ಕನ್ನಡಪ್ರಭ ವಾರ್ತೆ ತಾಳಿಕೋಟೆ ಶ್ರೀಶೈಲ ಮಲ್ಲಿಕಾರ್ಜುನನ ಪರಮಭಕ್ತೆಯಾಗಿದ್ದ ಹೇಮರಡ್ಡಿ ಮಲ್ಲಮ್ಮ ಜೀವನದಲ್ಲಿ ಹೇಳಿಕೊಳ್ಳಲು ಆಗದಷ್ಟು ಕಷ್ಟಗಳನ್ನು ಅನುಭವಿಸಿದರೂ ಅವುಗಳನ್ನು ಸಂತೋಷದಿಂದ ಸ್ವೀಕರಿಸಿ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಿದವರು ಮಹಾನ್ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರು ಆಗಿದ್ದಾರೆ ಎಂದು ವಿನಾಯಕ ಇಂಟರ್ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಸಂಗಮೇಶ ದೇಸಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಶ್ರೀಶೈಲ ಮಲ್ಲಿಕಾರ್ಜುನನ ಪರಮಭಕ್ತೆಯಾಗಿದ್ದ ಹೇಮರಡ್ಡಿ ಮಲ್ಲಮ್ಮ ಜೀವನದಲ್ಲಿ ಹೇಳಿಕೊಳ್ಳಲು ಆಗದಷ್ಟು ಕಷ್ಟಗಳನ್ನು ಅನುಭವಿಸಿದರೂ ಅವುಗಳನ್ನು ಸಂತೋಷದಿಂದ ಸ್ವೀಕರಿಸಿ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಿದವರು ಮಹಾನ್ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರು ಆಗಿದ್ದಾರೆ ಎಂದು ವಿನಾಯಕ ಇಂಟರ್ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಸಂಗಮೇಶ ದೇಸಾಯಿ ಹೇಳಿದರು.ತಾಲೂಕಾಡಳಿತದಿಂದ ಭಾನುವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡು ಆ ಪರಂಪರೆಯಲ್ಲಿ ನಡೆದು ಬಂದ ಮಲ್ಲಮ್ಮ ಅವರು ಮೊದಲು ಸಂಸಾರವನ್ನು ತಿದ್ದಿ ಇಡೀ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಸಂಪತ್ತು ಬಂದಾಗ ಅಹಂಕಾರ ಪಡದೆ ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕೆಂಬ ಸಂದೇಶ ಅವರದ್ದು, ಅವರ ಪಾವನ ಜೀವನ ನಮಗೆ ದಾರಿದೀಪವಾಗಿದೆ. ಅವರ ಆದರ್ಶ ಎಲ್ಲರಿಗೂ ಅನುಕರಣೀಯ ಎಂದರು.ಪಿಎಸ್‌ಐ ಜ್ಯೋತಿ ಖೋತ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ ದಮ್ಮೂರಮಠ, ಸಿ.ಆರ್.ಸಿ.ರಾಜು ವಿಜಾಪುರ, ರೆಡ್ಡಿ ಸಮಾಜದ ಮುಖಂಡರಾದ ಜಿ.ಜಿ. ಮದರಕಲ್ಲ, ಬಿ.ಎನ್.ಹಿಪ್ಪರಗಿ, ಸಿದ್ದನಗೌಡ ಪಾಟೀಲ, ಪ್ರಭುಗೌಡ ಮದರಕಲ್ಲ, ಸಿದ್ದನಗೌಡ ಮಂಗಳೂರ, ರವಿ ಪಾಟೀಲ, ಶರಣಗೌಡ ಇಬ್ರಾಹಿಂಪೂರ, ಎಚ್.ಬಿ.ಗೂಗಲ್, ಸಂಗನಗೌಡ ಅಸ್ಕಿ, ಬಿ.ಆರ್.ಪೋಲಿಸ್‌ಪಾಟೀಲ, ಶಾಂತಗೌಡ ಕೇಸರಭಾವಿ, ಸುಭಾಸ ಗುರಡ್ಡಿ, ಚಿದಾನಂದ ಕವಡಿಮಟ್ಟಿ, ಎಂ.ಎಲ್.ಹಂದ್ರಾಳ, ಹಣಮಂತ್ರಾಯಗೌಡ ದೇಟಿಮನಿ, ಪ್ರವೀಣ ರೆಡ್ಡಿ, ವಿವಿಧ ಇಲಾಖೆಗಳ ಸಿಬ್ಬಂದಿಗಳಾದ ಬಸನಗೌಡ ಚೌಧರಿ, ಮಹಾಂತಗೌಡ ದೊರೆಗೋಳ, ಮುನ್ನಾ ಅತ್ತಾರ, ಸಿದ್ದಲಿಂಗಯ್ಯ ಚೊಂಡಿಪಾಟೀಲ, ಶ್ರೀಪಾದ ಜೋಶಿ, ಹಣಮಂತಪ್ಪ ಬಾದವಾಡಗಿ, ರಾಜು ಮೂಕಿಹಾಳ ಇತರರು ಇದ್ದರು.