ಮಲ್ಲಮ್ಮರ ಬದುಕೇ ವಚನ ಸಂಪುಟ

| Published : May 11 2025, 01:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸಮಾಜ ಎದುರಿಸುತ್ತಿದ್ದ ಅನೇಕ ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದ್ದ ಹೇಮರೆಡ್ಡಿ ಮಲ್ಲಮ್ಮ ಅವರ ಬದುಕು ಬೃಹತ್ ವಚನ ಸಂಪುಟವಾಗಿದೆ. ಮಹಾಸಾಧ್ವಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿ ಆಚರಣೆಗೆ ಅರ್ಥಪೂರ್ಣವಾಗುತ್ತದೆ. ಪೂಜ್ಯ ಸ್ಥಾನವನ್ನು ಹೊಂದಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಾಜದ ಮಾರ್ಗದರ್ಶಕಿಯಾಗಿದ್ದು, ಅವಳ ಜೀವನ ಮೌಲ್ಯ ಮನುಕುಲಕ್ಕೆ ಅಮೂಲ್ಯ ಕೊಡುಗೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸಮಾಜ ಎದುರಿಸುತ್ತಿದ್ದ ಅನೇಕ ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದ್ದ ಹೇಮರೆಡ್ಡಿ ಮಲ್ಲಮ್ಮ ಅವರ ಬದುಕು ಬೃಹತ್ ವಚನ ಸಂಪುಟವಾಗಿದೆ. ಮಹಾಸಾಧ್ವಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿ ಆಚರಣೆಗೆ ಅರ್ಥಪೂರ್ಣವಾಗುತ್ತದೆ. ಪೂಜ್ಯ ಸ್ಥಾನವನ್ನು ಹೊಂದಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಾಜದ ಮಾರ್ಗದರ್ಶಕಿಯಾಗಿದ್ದು, ಅವಳ ಜೀವನ ಮೌಲ್ಯ ಮನುಕುಲಕ್ಕೆ ಅಮೂಲ್ಯ ಕೊಡುಗೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.

ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ನಾಡಿನಲ್ಲಿ ಅನೇಕ ಶರಣರು, ಮಾಹಾಸಾದ್ವಿಗಳು, ಸಂತರು ಜನಿಸಿ ಈ ಸಮಾಜದಲ್ಲಿನ ಅಂಕುಡೊಂಕುಗಳನ್ನು ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಡಿದ್ದಾರೆ. ಅಲ್ಲದೇ, ಎಲ್ಲರೂ ಸಮಾನರು ಎಂಬ ಭಾವನೆಯಿಂದ ಬದುಕಬೇಕೆಂದು ಬಯಸಿ ಸಮಾಜದಲ್ಲಿನ ಅಸಮತೋನವನ್ನು ಬುಡ ಸಮೇತ ಕಿತ್ತೆಸುವ ಪಣತೊಟ್ಟಿದ್ದರು. ಆದರೆ, ನಾವಿಂದು ಒಬ್ಬೊಬ್ಬ ಶರಣರನ್ನು, ಸಂತರನ್ನು ಒಂದೊಂದು ಜಾತಿಗೆ ಸಿಮೀತತಿಗೊಳ್ಳುವಂತೆ ಮಾಡುತ್ತಿದ್ದೇವೆ. ಆಧುನಿಕ ಜೀವನ ಕ್ರಮದಲ್ಲಿ ನಾವೆಲ್ಲ ಕುಟುಂಬ, ಮನೆ, ಜಾತಿ ಎಂಬ ಸ್ವಾರ್ಥದ ವ್ಯವಸ್ಥೆಯಲ್ಲಿ ಮುಳುಗುತ್ತಿದ್ದು, ನಾವೀಗ ಅಂತಹ ಸಂಕುಚಿತ ವ್ಯವಸ್ಥೆಯಿಂದ ಸಮಷ್ಟಿ ಪ್ರಜ್ಞೆಯೆಡೆಗೆ ಬರಬೇಕಿದೆ. ಉಪನ್ಯಾಸಗಳನ್ನು ಅಥವಾ ಉಪದೇಶಗಳನ್ನು ನೀಡಿದವರಲ್ಲ ಮತ್ತು ಯಾವುದೇ ಕೃತಿಗಳನ್ನು ರಚಿಸಿದವರಲ್ಲ. ಆದರೆ, ಅವರ ಜೀವನವೇ ಹಲವು ಮೌಲ್ಯಗಳನ್ನು ಕಲಿಸುವ ಮಹಾಕಾವ್ಯವಾಗಿಸಿ, ಮನು ಕುಲವನ್ನು ಬೆಳಗಿದ ಜ್ಯೋತಿಯಾಗಿದ್ದಾರೆ. ಇಂದು ಜಾತಿ, ಮತ, ಪಂಥಗಳೆಂಬ ಸಂಕುಚಿತತೆಯಲ್ಲಿ ನಾವೆಲ್ಲಾ ಮಂಗಗಳಾಗುತ್ತಿರುವುದು ಕಳವಳಕಾರಿಯಾಗಿದೆ. ವಿಶ್ವ ಮಾನವತೆಯ ಸಂದೇಶವನ್ನು ಸಾರಿದ ಸಾಧು, ಇಂತಹ ಮಹಾಶರಣೆ ಹೇಮರಡ್ಡಿ ಮಲ್ಲಮ್ಮ ಸೇರಿದಂತೆ ಹಲವಾರು ಶರಣರು ದಾರ್ಶನಿಕರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗೌರವಿಸಬೇಕು. ಇಲ್ಲದಿದ್ದರೇ ಎಷ್ಟು ಜಯಂತಿಗಳನ್ನು ಆಚರಸಿದರೇನು ಫಲ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.ಹೇಮರಡ್ಡಿ ಮಲ್ಲಮ್ಮನವರ ಜೀವನ ಚರಿತ್ರೆಯನ್ನು ಕೆಲವರು ಅವರವರ ಅಭಿಪ್ರಾಯಕ್ಕೆ ತಕ್ಕಂತೆ ತಿರುಚಿದ್ದಾರೆ. ಆದರೆ ವಾಸ್ತವ ಜೀವನ ಚರಿತ್ರೆಯೇ ಬೇರೆಯ ದ್ದಾಗಿದೆ. ಇತಿಹಾಸ ತಜ್ಞರು ಮತ್ತೊಮ್ಮೆ ಇತಿಹಾಸವನ್ನು ಅಳೆದು ತೂಗಿ ವಾಸ್ತವ ಚರಿತ್ರೆ ನೀಡಿದರೇ ಮಾತ್ರ ಮುಂದಿನ ಯುವ ಪಿಳಿಗೆಗಳಿಗೆ ಮಾದರಿಯಾಗಲಿದೆ ಎಂದರು.

ಈ ವೇಳೆ ತಾಲೂಕು ಅಕ್ಷರ ದಾಸೋಹದ ಅಧಿಕಾರಿ ಎಂ.ಎಂ.ಬೆಳಗಲ್ಲ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್‌ ಬಲರಾಮ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ತಾಲೂಕಾ ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಅಧ್ಯಕ್ಷ ಮೈಹಿಬೂಬ ಗೊಳಸಂಗಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಸಂಗಮ್ಮ ದೇವರಳ್ಳಿ, ಪ್ರತಿಭಾ ಅಂಗಡಗೇರಿ, ಮುಖಂಡರಾದ ಸುರೇಶಗೌಡ ಪಾಟೀಲ, ವೆಂಕನಗೌಡ ಪಾಟೀಲ, ಎಸ್.ಆರ್.ಪಾಟೀಲ, ಸೇರಿದಂತೆ ಹಲವರು ಇದ್ದರು.