ಮಹಿಳೆಯರಿಗೆ ಮಲ್ಲಮ್ಮ ಆದರ್ಶಪ್ರಾಯವಾಗಿದ್ದಾಳೆ. ೧೪ನೇ ಶತಮಾನದಲ್ಲಿ ಸಮಾಜದ ಒಳತಿಗಾಗಿ ಶಿವನಿಂದ ವರ ಪಡೆದಿದ್ದಾಳೆ

ಕನಕಗಿರಿ: ಲೌಕಿಕ ಜೀವನದಿಂದ ಹೊರ ಬಂದು ಭಕ್ತಿ ಮಾರ್ಗದ ಮೂಲಕ ಬದುಕು ಜಯಿಸಿ ಸಮಾಜವನ್ನು ಸನ್ಮಾರ್ಗದೆಡೆಗೆ ಸಾಗಿಸುವ ಕಾಯಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಾಡಿದ್ದಾಳೆ ಎಂದು ಕೆಎಚ್‌ಪಿಟಿಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಉಮಾ ಪಂಪಾರೆಡ್ಡಿ ಮಾದಿನಾಳ ಹೇಳಿದರು.

ಅವರು ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಮಲ್ಲಮ್ಮ ವೃತ್ತಕ್ಕೆ ಪೂಜೆ ಸಲ್ಲಿಸಿ ಭಾನುವಾರ ಮಾತನಾಡಿದರು. ಸಾಧ್ವಿ ಮಲ್ಲಮ್ಮ ಸಂಸಾರಿಕ ಜೀವನದಲ್ಲಿ ಅತೀವ ಕಷ್ಟ ಅನುಭವಿಸಿ ಲೌಕಿಕ ಬದಕನ್ನೆ ಗೆದ್ದಿದ್ದಾಳೆ. ನಂತರ ಶ್ರೀಶೈಲ ಮಲಿಕಾರ್ಜುನ ಸ್ವಾಮಿಯಿಂದ ವರ ಪಡೆದು ಅಲೌಕಿಕ ಪ್ರಪಂಚ ಕಡೆ ವಾಲಿದರು. ಮುಂದೆ ಭಕ್ತಿಮಾರ್ಗದಿಂದ ಮುಕ್ತಿ ಕಾಣುವುದೇಗೆ? ಆಧ್ಮಾತ್ಮದ ಮೂಲಕ ಸಮಾಜ ಪರಿವರ್ತನೆ ಸೇರಿದಂತೆ ಅನೇಕ ಸುಧಾರಣೆ ಮಲ್ಲಮ್ಮನವರು ಮಾಡಿದ್ದಾರೆ. ಸರ್ವ ಶ್ರೇಷ್ಠ ಸಂತಳಾಗಿರುವ ಮಲ್ಲಮ್ಮ ಕೇವಲ ರೆಡ್ಡಿ ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲ ವರ್ಗದವರು ಶಿವಶರಣೆಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಮುಖಂಡ ಅಯ್ಯನಗೌಡ ಮಾತನಾಡಿ, ಮಹಿಳೆಯರಿಗೆ ಮಲ್ಲಮ್ಮ ಆದರ್ಶಪ್ರಾಯವಾಗಿದ್ದಾಳೆ. ೧೪ನೇ ಶತಮಾನದಲ್ಲಿ ಸಮಾಜದ ಒಳತಿಗಾಗಿ ಶಿವನಿಂದ ವರ ಪಡೆದಿದ್ದಾಳೆ. ಮಲ್ಲಮ್ಮನವರು ಬಸವಾದಿ ಪ್ರಮತರ ತತ್ವ ಅನುಸರಿಸಿದ್ದರಿಂದಲೇ ವಿಶ್ವ ಮಾನ್ಯತೆ ಪಡೆಯಲು ಸಾಧ್ಯವಾಯಿತು ಎಂದು ಸ್ಮರೀಸಿದರು. ಇದಕ್ಕೂ ಮೊದಲು ರೆಡ್ಡಿ ಸಮಾಜದ ಮಹಿಳೆಯರು ಒಂದೇ ಬಗೆಯ ಸೀರೆಯನುಟ್ಟು ಮಲ್ಲಮ್ಮಳಿಗೆ ಪುಷ್ಪ ನಮನ ಸಲ್ಲಿಸಿ, ಜೈಕಾರ ಹಾಕಿ ಸಂಭ್ರಮಿಸಿದರು. ಇನ್ನೂ ಚಿಕ್ಕಮಕ್ಕಳ ಮಲ್ಲಮ್ಮನ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.

ಗ್ರಾಮ ಆಡಳಿತ ಅಧಿಕಾರಿ ಶಿವರಾಜ ಭೋವಿ,ಅಮರ ತೆಗ್ಗಿನಮನಿ,ಹೇಮವೇಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮರೆಡ್ಡಿ, ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕಿ ಸಿಂಧು ಬಲ್ಲಾಳ, ಕನಕರೆಡ್ಡಿ ಕೆರಿ, ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಬೇರಿಗಿ, ಕನಕರೆಡ್ಡಿ ಗಚ್ಚಿನಮನಿ, ಚಂದ್ರಹಾಸರೆಡ್ಡಿ ಅರಳಹಳ್ಳಿ, ನರಸಿಂಹರೆಡ್ಡಿ ಮಾದಿನಾಳ, ಶ್ರೀನಿವಾಸರೆಡ್ಡಿ ಓಣಿಮನಿ, ಮಂಜುನಾಥರೆಡ್ಡಿ ಮಾದಿನಾಳ, ಹನುಮಂತರೆಡ್ಡಿ ಮಹಲಿನಮನಿ, ರಾಮಾಂಜನೇಯರೆಡ್ಡಿ ಓಣಿಮನಿ, ವೆಂಕಟೇಶರೆಡ್ಡಿ ಬೇರಿಗಿ, ದೊಡ್ಡಬಸವರೆಡ್ಡಿ ಸಾನಬಾಳ, ಮಂಜುನಾಥ ಕೊರೆಡ್ಡಿ, ನಾರಾಯಣಮ್ಮ ಚಿತ್ರಿಕಿ, ಶಿವಲಿಂಗಮ್ಮ ಅಳ್ಳಳ್ಳಿ, ಭಾಗ್ಯಮ್ಮ ಹೇರೂರು, ರಂಗಮ್ಮ ಬೊರೆಡ್ಡಿ ಸೇರಿದಂತೆ ಇತರರಿದ್ದರು.