ಜಿಎಂ ವಿವಿಯ ಮಲ್ಲಿಕಾ-24.0 ಸಾಂಸ್ಕೃತಿಕ ಹಬ್ಬ

| Published : May 23 2024, 01:04 AM IST

ಸಾರಾಂಶ

ದಾವಣಗೆರೆಯಲ್ಲಿ ಜಿಎಂ ವಿಶ್ವ ವಿದ್ಯಾನಿಲಯದಲ್ಲಿ ಮಲ್ಲಿಕಾ- 24.0 ಸಾಂಸ್ಕೃತಿಕ ಹಬ್ಬದ ಸಂಯೋಜಕ ಡಾ.ಕಿರಣಕುಮಾರ ಸುದ್ದಿಗೋಷ್ಚಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಎಂ ವಿಶ್ವ ವಿದ್ಯಾನಿಲಯದಲ್ಲಿ ಮಲ್ಲಿಕಾ- 24.0 ಸಾಂಸ್ಕೃತಿಕ ಹಬ್ಬವನ್ನು ಮೇ 24ರಿಂದ ಎರಡು ದಿನಗಳ ಕಾಲ ಸಂಜೆ 5.30ಕ್ಕೆ ಆಚರಿಸಲಾಗುವುದು ಎಂದು ಕಾರ್ಯಕ್ರಮ ಸಂಯೋಜಕ ಡಾ.ಕಿರಣಕುಮಾರ ತಿಳಿಸಿದರು.

ನಗರದಲ್ಲಿ ಬುಧ‍ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲ್ಲಿಕಾ-24.0ದಲ್ಲಿ ದಾವಣಗೆರೆ ನಗರದ ಪ್ರತಿಷ್ಟಿತ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಶ್ರೀಮತಿ ಜಿ.ಎಂ.ಹಾಲಮ್ಮ ಮತ್ತು ಶ್ರೀ ಜಿ.ಮಲ್ಲಿಕಾರ್ಜುನಪ್ಪ ಚಾರಿಟಬಲ್ ಟ್ರಸ್ಟ್‌ನಿಂದ ಕಾಲೇಜು ಮಟ್ಟದಲ್ಲಿ ರ್‍ಯಾಂಕ್ ಪಡೆದ ಹಾಗೂ ಶೇ.95ಕ್ಕಿಂತ ಹೆಚ್ಚಿನ ಸಿಜಿಪಿಎ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 10 ಗ್ರಾಂ ಚಿನ್ನದ ನಾಣ್ಯವನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಪ್ರದಾನ ಮಾಡಿ, ಸನ್ಮಾನಿಸುವರು. ನಂತರ ಅನೇಕ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಮೊದಲ ದಿನದ ಕಾರ್ಯಕ್ರಮದಲ್ಲಿ ವಾಗ್ಮಿ ಸುಧಾ ಬರಗೂರು ಭಾಗವಹಿಸುವರು. ಶ್ರೀಶೈಲ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಜಿ.ಎಂ.ಪ್ರಸನ್ನಕುಮಾರ, ವಿವಿ ಆಡಳಿತಾಧಿಕಾರಿ ವೈ.ಯು.ಸುಭಾಶ್ಚಂದ್ರ, ಕುಲಪತಿ ಡಾ.ಎಸ್.ಆರ್.ಶಂಕಪಾಲ, ಉಪ ಕುಲಪತಿ ಡಾ.ಮಹೇಶಪ್ಪ, ರಿಜಿಸ್ಟ್ರಾರ್ ಡಾ.ಬಿ.ಎಸ್.ಸುನಿಲಕುಮಾರ ಸೇರಿ ವಿವಿಧ ವಿಭಾಗಗಳ ನಿರ್ದೇಶಕರು ಭಾಗವಹಿಸುವರು.

ಮೇ.25ರ ಸಂಜೆ ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಹಾಗೂ ತಂಡದಿಂದ ಹಾಗೂ ಹಿನ್ನೆಲೆ ಗಾಯಕಿಯರಾದ ಡಾ.ಶಮಿತಾ ಮಲ್ನಾಡ್‌ರಿಂದ ಮನರಂಜನೆ ಕಾರ್ಯಕ್ರಮವಿದೆ. ಸಂಸದ ಜಿ.ಎಂ.ಸಿದ್ದೇಶ್ವರ, ವಿವಿ ಕುಲಾಧಿಪತಿ ಡಿ.ಎಂ.ಲಿಂಗರಾಜು, ವಿವಿಧ ಗಣ್ಯರು ಭಾಗವಹಿಸುವರು. ಎರಡು ದಿನಗಳ ಕಾರ್ಯಕ್ರಮವನ್ನು ಕಾಲೇಜಿನ ಜಿ.ಮಲ್ಲಿಕಾರ್ಜುನಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಕಾಲೇಜಿನ ಡಾ.ವೀರಗಂಗಾಧರ ಸ್ವಾಮಿ, ಪ್ರೊ.ಬಸವರಾಜ, ತೇಜಸ್ವಿ ಕಟ್ಟಿಮನಿ, ಡಾ.ಓಂಕಾರಪ್ಪ, ಪ್ರೊ.ಸಂತೋಷ ಇತರರು ಇದ್ದರು.