ಮಲ್ಪೆ: ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಮೀನು ಕಾರ್ಮಿಕನನ್ನು ಇನ್ನೊಬ್ಬ ಕಾರ್ಮಿಕ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಕೊಲೆಯಾದ ಕಾರ್ಮಿಕ ಅಭಿಷೇಕ್. ಕೊಲೆ ಮಾಡಿದವ ಗೋವಿಂದರಾಜ ಎಂದು ಗುರುತಿಸಲಾಗಿದೆ.
ಮಲ್ಪೆ: ಇಲ್ಲಿನ ಮೀನುಗಾರಿಕಾ ಬಂದರಿನಲ್ಲಿ ಮೀನು ಕಾರ್ಮಿಕನನ್ನು ಇನ್ನೊಬ್ಬ ಕಾರ್ಮಿಕ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಕೊಲೆಯಾದ ಕಾರ್ಮಿಕ ಅಭಿಷೇಕ್. ಕೊಲೆ ಮಾಡಿದವ ಗೋವಿಂದರಾಜ ಎಂದು ಗುರುತಿಸಲಾಗಿದೆ.ಬೋಟಿನಲ್ಲೇ ಮಲಗಿದ್ದ ಈ ಕಾರ್ಮಿಕರು ಮದ್ಯಪಾನ ಮಾಡಿದ್ದು, ಬೆಳಗ್ಗೆ 4.30ಕ್ಕೆ ಯಾವುದೋ ಕಾರಣಕ್ಕೆ ಜಗಳವಾಡಿದ್ದು, ಜಗಳ ವಿಕೋಪಕ್ಕೆ ತಿರುಗಿ ಗೋವಿಂದರಾಜ ಚೂರಿಯಿಂದ ಅಭಿಷೇಕರ ಎದೆಗೆ ಇರಿದಿದ್ದಾನೆ. ಕುಸಿದು ಬಿದ್ದ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸತ್ತ ವಿಷಯ ತಿಳಿಯುತಿದ್ದಂತೆ ಗೋವಿಂದರಾಜು ಬೋಟಿನಿಂದ ಇಳಿದು ಪರಾರಿಯಾಗಿದ್ದಾನೆ.
ತಕ್ಷಣ ಮಲ್ಪೆ ಎಸ್‌ಐ ಅನಿಲ್ ಕುಮಾರ್ ಡಿ. ಮತ್ತು ಸಿಬ್ಬಂದಿ ಕಾರ್ಯಾಚರಣೆಗಿಳಿದರು. ಆರೋಪಿ ಮಲ್ಪೆಯಿಂದ ಬಸ್ ಹತ್ತಿ ಉಡುಪಿಗೆ ತೆರಳಿರುವ ಮಾಹಿತಿ ಪಡೆದು, ಉಡುಪಿಯಿಂದ ರೈಲು ನಿಲ್ದಾಣಕ್ಕೆ ತೆರಳುತಿದ್ದ ಆತನನ್ನು ಬಂಧಿಸಿದ್ದಾರೆ. ಆರೋಪಿ ಗೋವಿಂದ ಮೂಲತಃ ರಾಯಚೂರಿನ ಅರಕೆರೆಯ ನಿವಾಸಿ, ಸುಮಾರು 15 ವರ್ಷಗಳಿಂದ ಮನೆ ಬಿಟ್ಟಿದ್ದು, ಈ ಹಿಂದೆ ಮುಂಬೈ, ಹೈದರಾಬಾದ್ ಹಾಗೂ ಇತರ ಕಡೆಗಳಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಮಲ್ಪೆಗೆ ಮೀನುಗಾರಿಕಾ ಬೋಟಿಗೆ ಸೇರಿಕೊಂಡಿದ್ದ. ಕೊಲೆಯಾದ ವ್ಯಕ್ತಿಯ ವಿಳಾಸ ಪತ್ತೆಯಾಗಿಲ್ಲ. ತನಿಖೆ ಮುಂದುವರಿದಿದೆ.