ಮಲ್ಪೆಯ ಬೋಟು ಮಹಾರಾಷ್ಟ್ರದಲ್ಲಿ ಮುಳುಗಡೆ: 7 ಮೀನುಗಾರರ ರಕ್ಷಣೆ

| Published : Feb 19 2024, 01:32 AM IST

ಮಲ್ಪೆಯ ಬೋಟು ಮಹಾರಾಷ್ಟ್ರದಲ್ಲಿ ಮುಳುಗಡೆ: 7 ಮೀನುಗಾರರ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಸುಮಾರು 6 ಲಕ್ಷ ರು. ಮೌಲ್ಯದ ಮೀನು ಇತ್ತು, ಜೊತೆಗೆ ಬಲೆ, ಡಿಸೇಲ್‌ ಸೇರಿದಂತೆ ಮಾಲಕರಿಗೆ ಸುಮಾರು 60 ಲಕ್ಷ ರು. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಲ್ಪೆಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟೊಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಮುಳುಗಡೆಗೊಂಡಿದ್ದು, ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.ಪ್ರಕಾಶ್‌ ದೇವಾಡಿಗ ಎಂಬವರಿಗೆ ಸೇರಿದ ಅನಂತಕೃಷ್ಣ ಎಂಬ ಹೆಸರಿನ ಈ ಬೋಟು ರಾತ್ರಿ 9.30ರ ವೇಳೆಗೆ ರತ್ನಗಿರಿ ಸಮೀಪ ಮೀನುಗಾರಿಕೆ ನಡೆಸುತ್ತಿರುವಾಗ, ಹಠಾತ್ತನೇ ಬೋಟಿನಲ್ಲಿ ತುತಾಗಿ ಒಳಗೆ ನೀರು ನುಗ್ಗಲಾರಂಭಿಸಿತು.ತಕ್ಷಣ ಮೀನುಗಾರರು ಸಮೀಪದಲ್ಲಿದ್ದ ಮೀನಾಕ್ಷಿ ಮತ್ತು ಗಾಯತ್ರಿರಕ್ಷಾ ಎಂಬ ಬೋಟಿನವರಿಗೆ ಮಾಹಿತಿ ನೀಡಿದ್ದು, ಆ ಬೋಟಗಳು ಧಾವಿಸಿ ಬಂದು ಅನಂತಕೃಷ್ಣ ಬೋಟಿನಲ್ಲಿದ್ದ 7 ಮಂದಿ ಮೀನುಗಾರನ್ನು ರಕ್ಷಿಸಿದರು. ಆದರೆ ಬೋಟಿನೊಳಗೆ ನೀರು ತುಂಬಿ ಅದು ಮುಳುಗಿದ್ದರಿಂದ ಅದನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ.ಈ ಸುಮಾರು 6 ಲಕ್ಷ ರು. ಮೌಲ್ಯದ ಮೀನು ಇತ್ತು, ಜೊತೆಗೆ ಬಲೆ, ಡಿಸೇಲ್‌ ಸೇರಿದಂತೆ ಮಾಲಕರಿಗೆ ಸುಮಾರು 60 ಲಕ್ಷ ರು. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

* ಡೆಲ್ಟಾ ಬೀಚಿನಲ್ಲಿ ಇಬ್ಬರ ರಕ್ಷಣೆಮಲ್ಪೆಯ ಕೋಡಿಬೆಂಗ್ರೆಯ ಡೆಲ್ಟಾ ಬೀಚಿನಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರನ್ನು ಸ್ಥಳೀಯರು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.

ಬೆಂಗಳೂರಿನಿಂದ ಇಬ್ಬರು ಯುವಕರು, ಮೂರು ಯುವತಿಯರು ಮಧ್ಯಾಹ್ನ ಬೀಚ್‌ಗೆ ಬಂದಿದ್ದರು. ಅವರಲ್ಲಿ ಯುವಕರು ನೀರಿಗಿಳಿದು ಈಜಲು ಮುಂದಾಗಿದ್ದರು. ಆಗ ಭಾರಿ ಅಲೆಯೊಂದು ಬಂದು ಇಬ್ಬರನ್ನೂ ಸೆಳೆಯಿತು. ತಕ್ಷಣ ಯುವತಿಯರು ಬೊಬ್ಬೆ ಹಾಕಿದ್ದು, ಸ್ಥಳೀಯ ವಾಟರ್‌ ಸ್ಪೋರ್ಟ್ಸ್ ಬೋಟಿನ ವಿವೇಕ್‌ ಪುತ್ರನ್‌, ರಮೇಶ್‌ ಬಂಗೇರ, ಕೃಷ್ಣ ಅವರು ಬೋಟಿನಲ್ಲಿ ಧಾವಿಸಿ ಮುಳುಗುತ್ತಿದ್ದ ಯುವಕರನ್ನು ರಕ್ಷಿಸಿದ್ದಾರೆ.