ಸಾರಾಂಶ
ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಅಕ್ರಮ ನಾಡಬಂದೂಕು ಸಮೇತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಕೊಳ್ಳೇಗಾಲ: ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಅಕ್ರಮ ನಾಡಬಂದೂಕು ಸಮೇತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಕುಣಗಳ್ಳಿ ಗ್ರಾಮದ ಲೇಟ್ ಸಿದ್ದಯ್ಯನ ಮಗನಾದ ಕೆಂಪಶೆಟ್ಟಿ(50) ಬಂಧಿತ ಆರೋಪಿ. ಈತನಿಂದ ಒಂದು ಬಂದೂಕನ್ನು ಜಪ್ತಿ ಮಾಡಲಾಗಿದೆ.ಆರೋಪಿಯು ಕುಣಗಳ್ಳಿ ಗ್ರಾಮದ ಲಕ್ಕಯ್ಯನ ಕೆರೆಯ ಏರಿಯ ಮೇಲೆ ಕಾಡು ಪ್ರಾಣಿಗಳನ್ನು ಭೇಟೆಯಾಡುವ ಸಲುವಾಗಿ ಅಕ್ರಮವಾಗಿ ಬಂದೂಕನ್ನು ಸಾಗಾಣಿಕೆ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡ ಅಗರ ಮಾಂಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯಲ್ಲಿ ಯಳಂದೂರು ಸಿಪಿಐ ಶ್ರೀಕಾಂತ್, ಪ್ರಭಾರ ಕ್ರೈಂ ಪಿಎಸ್ಐ ಉಮಾವತಿ, ಸಿಬ್ಬಂದಿ ಶಿವಕುಮಾರ್, ಸಕ್ರುನಾಯ್ಕ್, ಉಸ್ಮಾನ್, ಬಸವರಾಜು, ಶಿವಕುಮಾರ್, ಚಾಲಕ ಮಲ್ಲೇಶ್ ಇದ್ದರು.