ಕಾಡಾನೆ ತುಳಿತಕ್ಕೆ ಸಿಲುಕಿ ವ್ಯಕ್ತಿ ಸಾವು

| Published : Mar 26 2024, 01:18 AM IST

ಸಾರಾಂಶ

ತಣಿಗೆಬೈಲು ಗ್ರಾಮದ ಬಳಿ ಸೋಮವಾರ ಪ್ರತ್ಯಕ್ಷವಾದ ಕಾಡಾನೆಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಅರಣ್ಯಾಧಿಕಾರಿಗಳೊಂದಿಗೆ ಗ್ರಾಮಸ್ಥರು ಭದ್ರಾ ಅಭಯಾರಣ್ಯಕ್ಕೆಆನೆ ಓಡಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಕಾಡಾನೆಯಿಂದ ತುಳಿತಕ್ಕೆ ಒಳಗಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ತಣಿಗೆಬೈಲು ಗ್ರಾಮದ ಬಳಿ ಸೋಮವಾರ ಪ್ರತ್ಯಕ್ಷವಾದ ಕಾಡಾನೆಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಅರಣ್ಯಾಧಿಕಾರಿಗಳೊಂದಿಗೆ ಗ್ರಾಮಸ್ಥರು ಭದ್ರಾ ಅಭಯಾರಣ್ಯಕ್ಕೆಆನೆ ಓಡಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಕಾಡಾನೆಯಿಂದ ತುಳಿತಕ್ಕೆ ಒಳಗಾಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ವರ್ತೆಗುಂಡಿ ಗ್ರಾಮದ ೩೮ ವರ್ಷ ಅಕ್ಬರ್ ಎಂಬ ವ್ಯಕ್ತಿಯನ್ನು ಆನೆ ತುಳಿದು ಪ್ರಾಣ ತೆಗೆದಿದೆ. ಸೋಮವಾರ ೧೧ ಗಂಟೆ ಸುಮಾರಿಗೆ ತಣಿಗೆ ಬೈಲು ಗ್ರಾಮದ ಬಳಿ ಆನೆ ಕಾಣಿಸಿ ಕೊಂಡಿತ್ತು. ವಿಷಯ ತಿಳಿದ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಓಡಿಸಲು ಕಾರ್ಯಪ್ರವೃತ್ತರಾಗಿದ್ದಾಗ ಈ ಘಟನೆ ನಡೆದಿದೆ.ಕಾಡಾನ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ವರ್ತೆಗುಂಡಿ ಗ್ರಾಮಸ್ಥ ಅಕ್ಬರ್ ವಿಷಯ ತಿಳಿದು ಅಘಾತವಾಗಿದ್ದು ಮೃತ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್, ಡಿವೈಎಸ್ಪಿ ಹಾಲಮೂರ್ತಿರಾವ್, ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್, ಎಸ್.ಐ ಶಶಿಕುಮಾರ್, ಡಿಎಫ್‌ಓ ಯಶಪಾಲ್, ಎಸಿಎಫ್ ವಿರೇಶ್ ಗೌಡ, ಪೊಲೀಸ್ ಪಾಟೀಲ್, ಆರ್‌ಎಫ್ಓ ಸಂಗೀತ, ತಿಗಡ ಗ್ರಾಪಂ ಸದಸ್ಯ ತಣಿಗೆಬೈಲು ರಮೇಶ್ ಗೋವಿಂದೇಗೌಡ, ಬಗರ್ ಹುಕುಂ ಸಮಿತಿ ಸದಸ್ಯ ಮಹಮ್ಮದ್ ಅಕ್ಬರ್, ಮುಂತಾದವರು ಹಾಜರಿದ್ದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ತಣಿಗೆಬೈಲು ಭದ್ರ ಅಭಯಾರಣ್ಯದ ವ್ಯಾಪ್ತಿಯ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರಿನ ಮತ್ತು ಆಹಾರ ತೊಂದರೆ ಹೆಚ್ಚಾಗಿರುವ ಕಾರಣ ಇಲ್ಲಿನ ವನ್ಯಜೀವಿಗಳು ನೀರು ಮತ್ತು ಮೇವು ಆರಿಸಿ ಅಭಯಾರಣ್ಯದ ಸುತ್ತಮುತ್ತಲಿ ನಲ್ಲಿರುವ ಗ್ರಾಮಗಳಿಗೆ ದಾಳಿ ಇಟ್ಟು ರೈತರು ಅಳವಡಿಸಿಕೊಂಡಿರುವ ಕೊಳವ ಬಾವಿಗಳ ಪಂಪ್‌ಸೆಟ್‌ಗಳು, ತೋಟದ ಬೆಳೆಗಳಾದ ಬಾಳೆ ಅಡಿಕೆ ತೆಂಗು, ಕಾಳು ಮೆಣಸು, ಕಾಫಿ, ಸೇರಿದಂತೆ ವಿವಿಧ ಬೆಳೆಗಳನ್ನು ತಿಂದು ತುಳಿದು ಹಾಳುಗೆಡತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿ ೨೬ ರ ಮಂಗಳವಾರ ತಣಿಗೆಬೈಲು ಭದ್ರ ಅಭಯಾರಣ್ಯದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲೆ ಈ ಘಟನೆ ನಡೆದಿದ್ದು, ಸ್ಥಳಿಯರಲ್ಲಿ ಆತಂಕ ಮಡುಗಟ್ಟಿದೆ.

ಫೋಟೋ ಇದೆಃ

24ಕೆಟಿಆರ್.ಕೆ.12ಃ ಸಮೀಪದ ತಣಿಗೆಬೈಲು ಬಳಿ ನಡೆದ ಆನೆ ತುಳಿತದಿಂದ ಸಾವನ್ನಪ್ಪಿದ ಅಕ್ಬರ್