ಸಾರಾಂಶ
ನಾಲ್ವಡಿ ಕೃಷ್ಣರಾಜ ಓಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರು ಕಲ್ಪಿಸಿದ ನೀರಾವರಿ ಸೌಲಭ್ಯದಿಂದ ನಮ್ಮ ಭಾಗದ ರೈತರು ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡದಿದ್ದರೆ ಮಂಡ್ಯ ಜಿಲ್ಲೆ ನೀರಿಗೆ ಅಭಾವ ಉಂಟಾಗುತ್ತಿತ್ತು. ಸರ್‌ಎಂವಿ ಅವರನ್ನು ಎಂದೆಂದಿಗೂ ಸ್ಮರಿಸಿಕೊಳ್ಳಬೇಕಿದೆ.
ಕನ್ನಡಪ್ರಭ ವಾವಾರ್ತೆ ಮಳವಳ್ಳಿ
ಬರಡು ಭೂಮಿಯಂತಿದ್ದ ಮಂಡ್ಯ ಜಿಲ್ಲೆಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ ವಿಶ್ವೇಶ್ವರಯ್ಯ ಅವರ ಶ್ರಮದ ಫಲದಿಂದ ನೀರಾವರಿ ಪ್ರದೇಶವಾನ್ನಾಗಿ ಮಾರ್ಪಾಡಿಸಲಾಯಿತು ಎಂದು ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ತಿಳಿಸಿದರು.ಪಟ್ಟಣದ ಟೋಲ್ ಗೇಟ್ ಬಳಿ ಸರ್ ಎಂ.ವಿಶ್ವೇಶ್ವರಯ್ಯ ಯುವಕರ ಸಂಘ ಮಂಗಳವಾರ ಆಯೋಜಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆಯಲ್ಲಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಓಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರು ಕಲ್ಪಿಸಿದ ನೀರಾವರಿ ಸೌಲಭ್ಯದಿಂದ ನಮ್ಮ ಭಾಗದ ರೈತರು ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.ಪುರಸಭೆ ಉಪಾಧ್ಯಕ್ಷ ಎನ್.ಬಸವರಾಜು (ಜಯಸಿಂಹ) ಮಾತನಾಡಿ, ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡದಿದ್ದರೆ ಮಂಡ್ಯ ಜಿಲ್ಲೆ ನೀರಿಗೆ ಅಭಾವ ಉಂಟಾಗುತ್ತಿತ್ತು. ಸರ್‌ಎಂವಿ ಅವರನ್ನು ಎಂದೆಂದಿಗೂ ಸ್ಮರಿಸಿಕೊಳ್ಳಬೇಕಿದೆ ಎಂದರು.
ಪುರಸಭೆ ಸದಸ್ಯ ಟಿ.ನಂದಕುಮಾರ್ ಹಾಗೂ ಮಾಜಿ ಅಧ್ಯಕ್ಷರಾದ ಎಂ.ಎನ್.ಚಿಕ್ಕರಾಜು ಮತ್ತು ಎಂ.ಎಚ್.ಕೆಂಪಯ್ಯ ಮಾತನಾಡಿದರು. ಇದೇ ವೇಳೆ ಸಂಘದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ತಟ್ಟೆ, ಲೋಟ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.ಈ ವೇಳೆ ಸಂಘ ಅಧ್ಯಕ್ಷ ಚಿಕ್ಕಮರಿ, ಮುಖಂಡರಾದ ನಾಗರಾಜು, ಅಂಕರಾಜು, ಮಹದೇವು, ಕುಮಾರ್, ಅಕ್ಕಿ ಶಿವಣ್ಣ, ಶಿಕ್ಷಕರು ಹಾಗೂ ಪದಾಧಿಕಾರಿಗಳು ಇದ್ದರು.
ಇಂದು ವಿದ್ಯುತ್ ವ್ಯತ್ಯಯಮಳವಳ್ಳಿ: ಪಟ್ಟಣದ ಉಪವಿಭಾಗದ ಓ ಎಂ-2 ಶಾಖಾ ವ್ಯಾಪ್ತಿಯಲ್ಲಿ ಬರುವ ಎಫ್-11 ನಿಡಘಟ್ಟ 11ಕೆವಿ ನಿರ್ವಹಣೆ ಕಾರ್ಯವಿರುವುದರಿಂದ ಸೆ.18ರಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎಸ್.ಪ್ರೇಮ್ ಕುಮಾರ್ ತಿಳಿಸಿದ್ದಾರೆ.ತಾಲೂಕಿನ ನಿಡಘಟ್ಟ, ಕಂದೇಗಾಲ, ಚೋಳನಹಳ್ಳಿ, ಗಾಜನೂರು, ಗೌಡಗೆರೆ, ಸುಣ್ಣದದೊಡ್ಡಿ, ಕ್ಯಾತೇಗೌಡನದೊಡ್ಡಿ, ಅಂಕನಹಳ್ಳಿ, ಅಂಚೇದೊಡ್ಡಿ, ಅಮೃತೇಶ್ವರನಹಳ್ಳಿ, ಮೊಳೆದೊಡ್ಡಿ, ಅಣ್ಣಹಳ್ಳಿ, ಕಲ್ಲುವೀರನಹಳ್ಳಿ, ಕೆಂಬೂತಗೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.