ಸಾರಾಂಶ
(ವಿಶೇಷ ವರದಿ)
ಕನ್ನಡಪ್ರಭ ವಾರ್ತೆ ಮಂಡ್ಯರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಲ್ಲಿ ಸೆ.೨೨ರಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಯ ಪ್ರಗತಿಯಲ್ಲಿ ಮಂಡ್ಯ ಜಿಲ್ಲೆ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದೆ.
ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ೪೬೫೧ ಬ್ಲಾಕ್‌ಗಳನ್ನು ಆಯ್ಕೆ ಮಾಡಿಕೊಂಡು ಆರಂಭದಲ್ಲಿ ೫,೦೪,೦೧೬ ಮನೆಗಳನ್ನು ತಲುಪುವುದರಲ್ಲಿ ಯಶಸ್ವಿಯಾಗಿದೆ. ಒಟ್ಟು ೧೮,೬೬,೩೫೦ ಜನಸಂಖ್ಯೆಯಲ್ಲಿ ೧೮,೧೬,೬೯೩ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ೧೦೩೯೪ ಗಣತಿದಾರರನ್ನು ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಿದ್ದು ಶೇ.೯೭.೩೪ರಷ್ಟು ಸಾಧನೆ ಮಾಡಲಾಗಿದೆ.ಸಮೀಕ್ಷೆಯಲ್ಲಿ ಅ.೧೭ರಂದು ಮೂರನೇ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆ ಎರಡೇ ದಿನದಲ್ಲಿ ಮೊದಲನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾಡಳಿತದ ಚುರುಕಿನ ಕಾರ್ಯಾಚರಣೆಯಿಂದ ಗಣತಿದಾರರು ಸಮೀಕ್ಷೆ ಕಾರ್ಯಕ್ಕೆ ವೇಗ ನೀಡಿದ ಪರಿಣಾಮ ಈ ಸಾಧನೆ ತ್ವರಿತಗತಿಯಲ್ಲಿ ಸಾಧ್ಯವಾಗಿದೆ. ಗಣತಿದಾರರು ಕೂಡ ಗೊಂದಲ, ಸಮಸ್ಯೆಗಳಿಗೆ ಅವಕಾಶವಾಗದಂತೆ, ನಿರ್ದಿಷ್ಟ ಅವಧಿಯಲ್ಲಿ ಜಿಲ್ಲೆಯ ಪ್ರತಿಯೊಂದು ಮನೆಗಳಿಗೆ ತೆರಳಿ ಮಾಹಿತಿ ಪಡೆದುಕೊಂಡ ನೈಜ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸುವಲ್ಲಿ ಸಾಕಷ್ಟು ಶ್ರಮವಹಿಸಿರುವುದು ಕಂಡುಬಂದಿದೆ.
ಜಿಲ್ಲಾಡಳಿತದಿಂದ ಪೂರ್ವ ಸಿದ್ಧತೆ:ರಾಜ್ಯಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗಳ ಸಮೀಕ್ಷೆ ಘೋಷಣೆ ಮಾಡುತ್ತಿದ್ದಂತೆಯೇ ಜಿಲ್ಲಾಡಳಿತ ಪೂರ್ವ ಸಿದ್ಧತೆ ಮಾಡಿಕೊಂಡಿತು. ಜಿಲ್ಲೆಯಲ್ಲಿರುವ ಒಟ್ಟು ಕುಟುಂಬಗಳೆಷ್ಟು, ಗಣತಿದಾರರು ಅವಶ್ಯಕತೆ ಎಷ್ಟು, ಬ್ಲಾಕ್ ಹಂಚಿಕೆ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಂಡಿತು.
ಆನಂತರದಲ್ಲಿ ಜಿಲ್ಲೆಯಲ್ಲಿ ೫,೨೯,೦೩೨ ಕುಟುಂಬಗಳಿರುವ ಮಾಹಿತಿಯೊಂದಿಗೆ ಒಬ್ಬ ಗಣತಿದಾರರಿಗೆ ೧೨೦ ಕುಟುಂಬಗಳಂತೆ ಬ್ಲಾಕ್ ಹಂಚಿಕೆ ಮಾಡಿತು. ೨೦ ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಿತು. ಗಣತಿದಾರರಿಗೆ ಯಾವುದೇ ಸಮಸ್ಯೆಗಳಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತು. ಸಮೀಕ್ಷೆ ಸಮಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಒಟ್ಟು ೬೦ ಪ್ರಶ್ನೆಗಳನ್ನು ಕೇಳಲಾಗಿತ್ತು. ಒಂದೊಂದು ಮನೆಯ ಸಮೀಕ್ಷೆಗೆ ೩೦ ರಿಂದ ೪೦ ನಿಮಿಷ ಹಿಡಿಯುತ್ತಿದ್ದರೂ ತಾಳ್ಮೆಯಿಂದ ಪ್ರಶ್ನೆಗಳಿಗೆ ಜನರಿಂದ ಬರುವ ಉತ್ತರವನ್ನು ಅಪ್‌ಲೋಡ್ ಮಾಡುವ ಮೂಲಕ ಸಮೀಕ್ಷೆ ಸುಗಮವಾಗಿ ನಡೆಯಲು ನೆರವಾದರು, ಇದರ ಜೊತೆಗೆ ಜಿಲ್ಲೆಯ ಜನರಿಂದ ಸಮೀಕ್ಷೆಗೆ ಉತ್ತಮ ಸಹಕಾರ ವ್ಯಕ್ತವಾಯಿತು.ಸಮೀಕ್ಷೆಗೆ ಚುರುಕು ನೀಡಿದ ಜಿಲ್ಲಾಧಿಕಾರಿ:
ಶ್ರೀರಂಗಪಟ್ಟಣ ದಸರಾ, ಕಾವೇರಿ ಆರತಿ ನಡುವೆಯೂ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಚುರುಕು ನೀಡಿದರು. ಅಧಿಕಾರಿಗಳ ಮೂಲಕ ಕಾಲ ಕಾಲಕ್ಕೆ ಪ್ರಗತಿಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಕಂಟ್ರೋಲ್ ರೂಂಗಳ ಪರಿಶೀಲನೆ, ಗಣತಿದಾರರು ಕಡ್ಡಾಯವಾಗಿ ನಿಗದಿಪಡಿಸಿದಷ್ಟು ಮನೆಗಳನ್ನು ತಲುಪುತ್ತಿರುವ ಮಾಹಿತಿಯನ್ನು ಸೂಪರ್‌ವೈಸರ್‌ಗಳ ಮೂಲಕ ಪಡೆದುಕೊಳ್ಳುತ್ತಿದ್ದರು. ಸಮೀಕ್ಷೆಗೆ ಯಾವುದೇ ಕಾರಣಕ್ಕೂ ಹಿನ್ನಡೆಯಾಗದಂತೆ ತೀವ್ರ ಕಟ್ಟೆಚ್ಚರ ವಹಿಸಿದ್ದರು.ಪ್ರತಿ ತಾಲೂಕಿನ ಸಮೀಕ್ಷೆಯ ಪ್ರಗತಿಯನ್ನು ಪ್ರತಿದಿನ ಮಾಹಿತಿ ಪಡೆಯುತ್ತಿದ್ದರು. ತಾಲೂಕುಗಳಲ್ಲಿ ಹಿನ್ನಡೆ ಉಂಟಾಗಿದ್ದರೆ ಅದಕ್ಕೆ ಕಾರಣವಾಗಿರುವ ಅಂಶಗಳ ಕುರಿತಾಗಿ ಸೂಪರ್‌ವೈಸರ್‌ಗಳೊಂದಿಗೆ ಚರ್ಚಿಸಿ ಎಲ್ಲಿಯೂ ಸಮೀಕ್ಷೆ ಕುಂಠಿತಗೊಳ್ಳದಂತೆ ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಸಮೀಕ್ಷೆಯಲ್ಲಿ ತೊಡಗಿರುವ ಗಣತಿದಾರರು ಹತ್ತಕ್ಕಿಂತ ಹೆಚ್ಚು ಮನೆಗಳ ಸಮೀಕ್ಷೆ ನಡೆಸುವಂತೆ ಪ್ರೇರೇಪಿಸುತ್ತಿದ್ದರು. ರಜಾ ದಿನಗಳಲ್ಲೂ ಗಣತಿದಾರರನ್ನು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸುವ ಕೆಲಸ ಮಾಡಿದ್ದರಿಂದ ಎಲ್ಲೆಡೆ ಗಣತಿ ವೇಗಗತಿಯನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಸಮೀಕ್ಷಾ ಕಾರ್ಯದಲ್ಲಿ ಉತ್ತಮ ಸಾಧನೆ ಮಾಡಿ ನೀಡಿರುವ ಗುರಿಯನ್ನು ಶೇ.೧೦೦ರಷ್ಟು ಪೂರ್ಣಗೊಳಿಸಿರುವ ೯ ಗಣತಿದಾರರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಭಿನಂದನಾ ಪತ್ರವನ್ನೂ ನೀಡಿ ಅಭಿನಂದಿಸಿದ್ದರು.
ರಾಜ್ಯಾದ್ಯಂತ ನಾಗರಿಕರ ಸ್ಥಿತಿ- ಗತಿ, ಅಗತ್ಯತೆ, ಬೇಡಿಕೆ ತಿಳಿಯಲು ಹಾಗೂ ಅವರ ಪರವಾಗಿ ಯೋಜನೆಗಳನ್ನು ರೂಪಿಸಲು ಅಂಕಿ-ಅಂಶ ಸಂಗ್ರಹಿಸುವ ಸಲುವಾಗಿ ಜಿಲ್ಲೆಯಲ್ಲಿ ಸಮೀಕ್ಷೆ ಕೈಗೊಂಡಿದ್ದು, ಸಾಧ್ಯವಾದಷ್ಟು ಸಮೀಕ್ಷೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಸಮುದಾಯದ ಮುಖಂಡರ ಸಭೆ ಕರೆದು ಮನವಿ ಮಾಡಿದ್ದರು. ಜಿಂಗಲ್ಸ್, ಬ್ಯಾನರ್‌ಗಳನ್ನು ಅಳವಡಿಸುವ ಮೂಲಕ ಸಮೀಕ್ಷೆ ಕುರಿತು ಪ್ರಚಾರ ಕೈಗೊಂಡು ಅರಿವು ಮತ್ತು ಜಾಗೃತಿ ಮೂಡಿಸಿದ್ದರು.‘ಜಿಲ್ಲೆಯಲ್ಲಿ ಒಟ್ಟು ಜಿಲ್ಲೆಯಲ್ಲಿ ೫,೦೪,೦೧೬ ಮನೆಗಳನ್ನು ತಲುಪಿ ೧೮,೧೬,೬೯೩ ಜನರ ಸಮೀಕ್ಷೆಗೆ ಒಳಪಡಿಸಿ ಪೂರ್ಣಗೊಳಿಸಲಾಗಿದೆ. ಬೃಹತ್ ಪ್ರಮಾಣದ ಸಮೀಕ್ಷಾ ಕಾರ್ಯವನ್ನು ನಡೆಸಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನವನ್ನು ಪ್ರತಿನಿಧಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಸಮೀಕ್ಷಾ ಕಾರ್ಯದ ಯಶಸ್ಸಿಗೆ ಸಾಕಷ್ಟು ಜನರು ಹಗಲಿರುಳು ಶ್ರಮಿಸಿದ್ದಾರೆ. ಜಿಲ್ಲಾ, ತಾಲೂಕು ಹಂತದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಸ್ತ ಶಿಕ್ಷಕ ಸಮುದಾಯದ ಸಕ್ರಿಯ ಭಾಗವಹಿಸುವಿಕೆಯಿಂದ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.’
- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ--------------------
ಜಿಲ್ಲೆಯಲ್ಲಿ ನಡೆದ ಸಮೀಕ್ಷೆಯ ವಿವರತಾಲೂಕು, ಒಟ್ಟು ಕುಟುಂಬಗಳು, ಒಟ್ಟು ಜನಸಂಖ್ಯೆ, ಸಮೀಕ್ಷೆಯಲ್ಲಿ ಪಾಲ್ಗೊಂಡ ಸಂಖ್ಯೆ, ಶೇಕಡವಾರುಕೆ.ಆರ್.ಪೇಟೆ, 67,078, 2,69,218, 2,65,519, 98.63ಮದ್ದೂರು, 83,127, 3,05,343, 3,04,900, 99.85ಮಳವಳ್ಳಿ, 77,049, 2,92,768, 2,86,885, 97.99ಮಂಡ್ಯ, 1,21,478, 4,29,081, 4,04,408, 94.25ನಾಗಮಂಗಲ, 54,870, 1,94,201, 1,95,163, 100.5ಪಾಂಡವಪುರ, 47,532, 1,89,503, 1,85,249, 97.76ಶ್ರೀರಂಗಪಟ್ಟಣ ,52,882, 1,86,236, 1,73,704, 93.27------------------------------------------------------- ಒಟ್ಟು, 5,04,016, 18,66,350, 18,16,693, 97.34