ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ನಗರದ ತಾಲೂಕು ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರವೂ ಮುಂದುವರಿದೆ.ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ, ಅಲ್ಮೇರಾ, ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್ ಮತ್ತು ಡೇಟಾ, ಗೂಗಲ್ ಕ್ರೋಮ್ ಬುಕ್, ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ಒದಗಿಸುವಂತೆ ಒತ್ತಾಯಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನಶ್ರೇಣಿ ನಿಗಪಡಿಸಿ ಆದೇಶ ನೀಡುವುದು. ಸೇವಾ ವಿಷಯಗಳಿಗೆ ಸಂಬಂಸಿದಂತೆ ಸೌಲಭ್ಯಗಳನ್ನು ಕಲ್ಪಿಸುವುದು. ಅಂತರ ಜಿಲ್ಲಾ ವರ್ಗಾವಣೆಯ ಕೆಸಿಎಸ್‌ಆರ್ ನಿಯಮ ೧೬ಎರ ಉಪಖಂಡ (೨)ನ್ನು ಮರುಸ್ಥಾಪಿಸುವಂತೆ ಆಗ್ರಹಿಸಿದರು.ಮುಖಂಡರಾದ ಯೋಗೇಶ್ ನಾಯ್ಕ್, ಕುಮಾರ, ಗುಣಶೇಖರ್, ಮಾನಸ, ತೇಜಸ್‌ಗೌಡ, ಚರಣ್, ಸಿದ್ದಪ್ಪ, ಮಧುರಾಣಿ, ಇಂದ್ರಾಣಿ, ಮನುಜ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮನೀಷ್ ವಜಾ ಆದೇಶ ತೆರವಿಗೆ ದಸಂಸ ಆಗ್ರಹಕನ್ನಡಪ್ರಭ ವಾರ್ತೆ ಮಂಡ್ಯ
ಮದ್ದೂರು ಪುರಸಭೆ ಹೊರಗುತ್ತಿಗೆ ನೌಕರ ಸಿ.ಎಂ.ಮನಿಷ್ ಅರಿಯದೇ ಮಾಡಿರುವ ತಪ್ಪನ್ನು ಕ್ಷಮಿಸಿ ಶಾಸಕರು ಮತ್ತು ಮದ್ದೂರು ಪುರಸಭೆ ಆಡಳಿತ ಮಂಡಳಿ ಆತನ ವಜಾ ಆದೇಶವನ್ನು ತೆರವುಗೊಳಿಸಬೇಕು ಎಂದು ದಸಂಸ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ ಒತ್ತಾಯಿಸಿದರು.ಶಾಸಕರ ಕಚೇರಿಯನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿರುವ ಸಂಬಂಧ ದೂರು ದಾಖಲಿಸಿರುವುದಕ್ಕೆ ಪುರಸಭೆ ಆಡಳಿತ ಮಂಡಳಿ ಗುತ್ತಿಗೆದಾರ ಸಂಸ್ಥೆಗೆ ಪತ್ರ ಬರೆದು ಸೇವೆಯಿಂದ ವಜಾ ಮಾಡಿದೆ. ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಮದ್ದೂರು ಶಾಸಕರು ಹಾಗೂ ಪುರಸಭೆಯ ಆಡಳಿತ ಮಂಡಳಿಗೆ ಮನವಿ ಮಾಡಿ ಮನಿಷ್‌ನಿಗೆ ಮತ್ತೆ ನೌಕರಿ ನೀಡುವಂತೆ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದಕ್ಕಾಗಿ ಫೆ.3ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಹೋರಾಟ ಮುಂದುವರೆಸಲಾಗಿದೆ ಎಂದರು.ಇತ್ತೀಚೆಗೆ ಮದ್ದೂರು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕರು ಹೋರಾಟಗಾರರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದು, ಅವರು ತಮ್ಮ ಹೇಳಿಕೆಯನ್ನು ಸಾಬೀತು ಮಾಡಿದರೆ ಹೋರಾಟ ಜೀವನದಿಂದ ಹೊರಗುಳಿಯುವುದಾಗಿ ಹೇಳಿದರು.
ನಾವು ಯಾರ ಬಳಿಯೂ ಚಿಲ್ಲರೆಗಾಗಿ ಕೈಯೊಡ್ಡಿಲ್ಲ. ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಹೋರಾಟಗಾರರನ್ನು ಶಾಸಕರು ಲಘುವಾಗಿ ಪರಿಗಣಿಸುವುದು ಬೇಡ. ನೀವು ಸಾಮಾಜಿಕ ನ್ಯಾಯ ದೊರಕಿಸುವಿರೆಂಬ ಭರವಸೆ ನಮಗಿದೆ ಎಂದರು.ಲಕ್ಷ್ಮಣ್ ಚೀರನಹಳ್ಳಿ ಮಾತನಾಡಿ, ಪುರಸಭೆಯ ಅಧ್ಯಕ್ಷ ಪುರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಗಮನ ಹರಿಸದೇ ಸಣ್ಣ ತಪ್ಪು ಮಾಡಿರುವ ನೌಕರರ ವಿರುದ್ಧ ಈ ರೀತಿಯ ಕ್ರಮ ವಹಿಸುವುದು ಸರಿಯಲ್ಲ. ಶಾಸಕರು ನೌಕರನಿಗೆ ಮತ್ತೆ ಕೆಲಸ ದೊರಕಿಸಿಕೊಟ್ಟು ಪುರಸಭೆಯ ಸಮಸ್ಯೆಗಳತ್ತ ಗಮನ ಹರಿಸುವಂತೆ ಮನವಿ ಮಾಡಿದರು.
ಗೋಷ್ಠಿಯಲ್ಲಿ ಎಂ.ವಿ.ಕೃಷ್ಣ, ಮೂರ್ತಿ ಚಿಕ್ಕರಸಿನಕೆರೆ, ಉಮೇಶ್, ಶಿವು ಇದ್ದರು.