ಮಕ್ಕಳಿಗೆ ಶ್ರೀಕೃಷ್ಣ ರಾಧೆಯರ ವೇಷಭೂಷಣ ತೋಡಿಸಿ ತಂದೆ-ತಾಯಿಯರು ನೋಡಿ ಸಂಭ್ರಮ ಪಡುತ್ತಿರುವುದನ್ನು ನೋಡಿದರೆ ಸಂತಸವಾಗುತ್ತದೆ. ಸಾಮಾನ್ಯರು ಕೂಡ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸಿನ ಹಾದಿಯಲ್ಲಿ ನಡೆಯಬಹುದು. ಒಬ್ಬೊಬ್ಬರಲ್ಲೂ ಒಂದೊಂದು ಪ್ರತಿಭೆ ಇದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಬಾಲ ಭವನದಲ್ಲಿ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ಮತ್ತು ಜಿಲ್ಲಾ ಮಹಿಳಾ ಒಕ್ಕಲಿಗರ ವೇದಿಕೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ-2026 ಕಾರ್ಯಕ್ರಮವನ್ನು ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್ ಉದ್ಘಾಟಿಸಿದರು.ನಂತರ ಮಾತನಾಡಿ ಮಕ್ಕಳಿಗೆ ಶ್ರೀಕೃಷ್ಣ ರಾಧೆಯರ ವೇಷಭೂಷಣ ತೋಡಿಸಿ ತಂದೆ-ತಾಯಿಯರು ನೋಡಿ ಸಂಭ್ರಮ ಪಡುತ್ತಿರುವುದನ್ನು ನೋಡಿದರೆ ಸಂತಸವಾಗುತ್ತದೆ. ಸಾಮಾನ್ಯರು ಕೂಡ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸಿನ ಹಾದಿಯಲ್ಲಿ ನಡೆಯಬಹುದು. ಒಬ್ಬೊಬ್ಬರಲ್ಲೂ ಒಂದೊಂದು ಪ್ರತಿಭೆ ಇದೆ. ಅದನ್ನು ಚಿಕ್ಕವಯಸ್ಸಿನಲ್ಲಿ ಗುರುತಿಸಿ ಹೊರ ತೆಗೆಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು,
ಕಲ್ಪನಾ ರಾಮಚಂದ್ರ ಮಾತನಾಡಿ, ಮಕ್ಕಳನ್ನು ಕೃಷ್ಣ-ರಾಧೆಯರ ವೇಷ ಭೂಷಣ ನೋಡುವುದೇ ಒಂದು ಸಂಭ್ರಮವಾಗಿದೆ. ಒಂದು ವಯಸ್ಸಿನವರೆಗೆ ಮಕ್ಕಳನ್ನು ಈ ವೇಷ ಭೂಷಣ ನೋಡಬಹುದು ಎಂದರು.ಕಾರ್ಯಕ್ರಮದಲ್ಲಿ ಕೃಷ್ಣ-ರಾಧೆ ವೇಷ ಧರಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು .
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಶಿವಪ್ರಕಾಶ್ ಬಾಬು, ಚುಂಚಶ್ರೀ ಮಹಿಳಾ ಒಕ್ಕಲಿಗರ ವೇದಿಕೆಯ ಶಕುಂತಳ, ಸಂಘದ ಮಂಜುಳಾ, ಅಶ್ವಿನಿ, ಲತಾ, ಸರಸ್ವತಿ, ಲಲಿತಮ್ಮ, ಸವಿತಾ, ಯಶೋಧ, ಶಿಲ್ಪ ಭಾಗವಹಿಸಿದ್ದರು.ಶ್ರೀ ಕೃಷ್ಣ, ರಾಧೆ ವೇಷ ಧರಿಸಿ ಗಮನ ಸೆಳೆದ ಮಕ್ಕಳುಶ್ರೀರಂಗಪಟ್ಟಣ: ಪಟ್ಟಣದ ಇಂಗ್ಲಿಷ್ ಮಾಧ್ಯಮ ಲೆನ್ನಿನ್ ಪ್ರೌಢಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಶ್ರೀಕೃಷ್ಣ, ರಾಧೆ ವೇಷಗಳ ಧರಿಸಿ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ ಹಾಗೂ ರಾಧೆ, ರುಕ್ಮಿಣಿಯರ ಅಲಂಕಾರ ಮಾಡಿ ವೇದಿಕೆಯಲ್ಲಿ ಪ್ರದರ್ಶನ ಮಾಡಿಸಿ. ಶಿಕ್ಷಕರು ಮಕ್ಕಳನ್ನು ಸರದಿ ಸಾಲಿನಲ್ಲಿ ಪ್ರದರ್ಶಿಸಿ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದರು. ವಿವಿಧ ರೀತಿಯಲ್ಲಿ ಶೃಂಗಾರಗೊಂಡಿದ್ದ ಮಕ್ಕಳಿಗೆ ಶಿಕ್ಷಕ ತೀರ್ಪುಗಾರರು ಉತ್ತಮ ತೀರ್ಪುಗಳ ನೀಡಿದರು. ವಿಜೇತ ಮಕ್ಕಳಿಗೆ ಶಾಲೆ ಮುಖ್ಯಸ್ಥ ಕಾರ್ಯದರ್ಶಿ ಬಿ.ಪಿ. ಅಮಿತ್ ದೇವ್ ಬಹುಮಾನ ವಿತರಿಸಿದರು.