ತಾಲೂಕಿನ ಮಂಗಳ ಜಲಾಶಯದಲ್ಲಿ ಉಂಟಾಗಿದ್ದ ನೀರಿನ ಸೋರಿಕೆ ಸ್ಥಳಕ್ಕೆ ಶಾಸಕ ಡಾ.ರಂಗನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಮಂಗಳ ಜಲಾಶಯದಲ್ಲಿ ಉಂಟಾಗಿದ್ದ ನೀರಿನ ಸೋರಿಕೆ ಸ್ಥಳಕ್ಕೆ ಶಾಸಕ ಡಾ.ರಂಗನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಒಂದು ದಿನಗಳಿಂದ ನಿರಂತರವಾಗಿ ಜಲಾಶಯದಿಂದ ಹೊರ ಹೋಗುತ್ತಿದ್ದ ನೀರನ್ನು ಅಧಿಕಾರಿಗಳು ಸಂಪೂರ್ಣ ನಿಲ್ಲಿಸುವಲ್ಲಿ ಯಶಸ್ವಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ತಾಂತ್ರಿಕ ಅಧಿಕಾರಿಗಳ ಸಲಹೆ ಮೇರೆಗೆ ನೀರಿನ ಅರಿವು ಹಾಗೂ ತೂಬಿನ ದುರಸ್ತಿ ಮತ್ತು ಉಂಟಾಗಿರುವ ರಂಧ್ರವನ್ನು ಮುಚ್ಚುವ ಸಂಬಂಧ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಡ್ಯಾಮ್ ಏರಿಯಾ ಅಗಲೀಕರಣ ಕ್ರಶ್ ಗೇಟ್ ಗಳ ದುರಸ್ತಿ ವಿದ್ಯುತ್ತೀಕರಣ ಹಾಗೂ ಸೇತುವೆ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಶಾಶ್ವತ ಕಾಮಗಾರಿಗಳನ್ನು ಮಾಡುವ ಉದ್ದೇಶದಿಂದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಅವರು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತದೆ. ತುರ್ತು ಹಿನ್ನೆಲೆಯಲ್ಲಿ ಕೆರೆಏರಿ ನಿರ್ವಹಣೆ ಮಾಡಲು ಸಂಪೂರ್ಣ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸುತ್ತಿದ್ದೇವೆ ಎಂದರು. ಸಂಪೂರ್ಣ ಅಭಿವೃದ್ಧಿಯ ಜವಾಬ್ದಾರಿಯನ್ನು ನಾನೇ ಹೊತ್ತುಕೊಂಡು ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹೇಮಾವತಿ ಇಲಾಖೆಯ ಚೀಫ್ ಇಂಜಿನಿಯರ್ ಫಣಿರಾಜು ಸೂಪರ್ ಡೆಂಟ್ ಕೆ ಎಂಬಿಂದಿ, ಎಇಇ ರುದ್ರೇಶ್ ಇಂಜಿನಿಯರ್ ವೀಣಾ ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.