ಕಾರ್ಬನ್‌ ನೆಗೆಟಿವ್ ಹಂತ ಸಾಧಿಸಿದ ಮಂಗಳಾ ರಿಸೋರ್ಸ್‌ ಮೆನೇಜ್‌ಮೆಂಟ್‌

| Published : Apr 09 2025, 12:34 AM IST

ಕಾರ್ಬನ್‌ ನೆಗೆಟಿವ್ ಹಂತ ಸಾಧಿಸಿದ ಮಂಗಳಾ ರಿಸೋರ್ಸ್‌ ಮೆನೇಜ್‌ಮೆಂಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳಾ ರಿಸೋರ್ಸ್ ಮೆನೇಜ್‌ಮೆಂಟ್‌ ಸಂಸ್ಥೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ, ಮಂಗಳೂರು ತಾಲೂಕಿನ ಎರಡಪಡವಿನಲ್ಲಿ, ಬಂಟ್ವಾಳ ತಾಲೂಕಿನ ನರಿಕೊಂಬು ಮತ್ತು ಪುತ್ತೂರು ತಾಲೂಕಿನ ಕೆದಂಬಾಡಿ ಪರಿಸರದಲ್ಲಿ ರಾಜ್ಯದ ಪ್ರಮುಖ ಘನ ತ್ಯಾಜ್ಯ ನಿರ್ವಹಣಾ ಘಟಕ (ಮಟೀರಿಯಲ್ ರಿಕವರಿ ಫೆಸಿಲಿಟೀಸ್) (MRF`s) ನಿರ್ವಹಿಸುವ ಮೂಲಕ ಗ್ರಾಮೀಣ ಭಾಗದ ತ್ಯಾಜ್ಯದ ಸಮಸ್ಯೆಗೆ ಪರಿಹಾರ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನದಿಂದ ಪ್ರೇರಿತವಾದ ಮಂಗಳಾ ರಿಸೋರ್ಸ್ ಮೆನೇಜ್‌ಮೆಂಟ್‌ ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆಯಲ್ಲಿ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿದೆ.

ಕರಾವಳಿ ಕರ್ನಾಟಕದ ತ್ಯಾಜ್ಯ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾದ ಮಂಗಳೂರಿನ ಮಂಗಳಾ ರಿಸೋರ್ಸ್ ಮೆನೇಜ್‌ಮೆಂಟ್‌ ಪ್ರೈವೇಟ್ ಲಿಮಿಟೆಡ್ ಸ್ಥಿರತೆಯ ಹೊಸ ಮಾದರಿಯನ್ನು ಸ್ಥಾಪಿಸಿದೆ. ಕರಾವಳಿ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ, ಪರಿಸರ ಸಂರಕ್ಷಣೆ ಹಾಗೂ ಕಾರ್ಬನ್ ಕಡಿತ ಸಾಧನೆಗಾಗಿ ಅನನ್ಯ ಕೊಡುಗೆ ನೀಡಿದೆ.ಮಂಗಳಾ ರಿಸೋರ್ಸ್ ಮೆನೇಜ್‌ಮೆಂಟ್‌ ಸಂಸ್ಥೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ, ಮಂಗಳೂರು ತಾಲೂಕಿನ ಎರಡಪಡವಿನಲ್ಲಿ, ಬಂಟ್ವಾಳ ತಾಲೂಕಿನ ನರಿಕೊಂಬು ಮತ್ತು ಪುತ್ತೂರು ತಾಲೂಕಿನ ಕೆದಂಬಾಡಿ ಪರಿಸರದಲ್ಲಿ

ರಾಜ್ಯದ ಪ್ರಮುಖ ಘನ ತ್ಯಾಜ್ಯ ನಿರ್ವಹಣಾ ಘಟಕ (ಮಟೀರಿಯಲ್ ರಿಕವರಿ ಫೆಸಿಲಿಟೀಸ್) (MRF`s) ನಿರ್ವಹಿಸುವ ಮೂಲಕ ಗ್ರಾಮೀಣ ಭಾಗದ ತ್ಯಾಜ್ಯದ ಸಮಸ್ಯೆಗೆ ಪರಿಹಾರ ನೀಡುತ್ತಿದೆ.ಸಂಸ್ಥೆಯು Zero Waste Campus Program ಹಮ್ಮಿಕೊಂಡಿದೆ. ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ, ನಿಟ್ಟೆ ಯುನಿವರ್ಸಿಟಿ ಕ್ಯಾಂಪಸ್ ದೇರಳಕಟ್ಟೆ ಹಾಗೂ ಇನ್ಫೋಸಿಸ್ ಮುಡಿಪು ಇವುಗಳ ಸಹಯೋಗದಲ್ಲಿ ಕಾರ್ಬನ್‌ ನೆಗೆಟಿವ್‌ ಹಂತವನ್ನು ಕಾರ್ಯಗತಗೊಳಿಸುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದಿಲ್‌ರಾಜ್‌ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.