ಮಂಗಳೂರು: ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅನುಮೋದನೆಯ ನಂತರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರನ್‌ವೇಗಾಗಿ ನಿಖರ ಸಂಪರ್ಕ ಬೆಳಕಿನ (ಪಿಎಎಲ್) ವರ್ಗ 1 ವ್ಯವಸ್ಥೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯ ಸುರಕ್ಷತೆ ಮತ್ತು ಲ್ಯಾಂಡಿಂಗ್ ನಿಖರತೆ ಹೆಚ್ಚಿಸುವಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.ಪಿಎಎಲ್ ವರ್ಗ I ವ್ಯವಸ್ಥೆಯನ್ನು ಲ್ಯಾಂಡಿಂಗ್ ನ ನಿರ್ಣಾಯಕ ಅಂತಿಮ ಹಂತಗಳಲ್ಲಿ ಪೈಲಟ್‌ಗಳಿಗೆ ಖಚಿತ ದೃಶ್ಯ ಮಾರ್ಗದರ್ಶನವನ್ನು ಒದಗಿಸಲು, ವಿಶೇಷವಾಗಿ ಟೇಬಲ್ ಟಾಪ್ ಸೌಲಭ್ಯದಲ್ಲಿ ಕಡಿಮೆ ಗೋಚರತೆಯ ಪರಿಸ್ಥಿತಿಗಳಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಈ ಯೋಜನೆ ಭಾರತದ ಅತ್ಯಂತ ವಿಶಿಷ್ಟ ಮತ್ತು ಮೊದಲ ರೀತಿಯ ಏರ್ ಫೀಲ್ಡ್ ಲೈಟಿಂಗ್ ಅಳವಡಿಕೆಗಳಲ್ಲಿ ಒಂದಾಗಿದೆ. ಅಪ್ರೋಚ್ ಲೈಟಿಂಗ್ ಸಿಸ್ಟಮ್ ವಿಶೇಷವಾಗಿ ಎಂಜಿನಿಯರಿಂಗ್ ಮಾಡಿದ ಗೋಪುರಗಳ ಮೇಲೆ ಅಳವಡಿಸಲಾದ ಏರ್ ಫೀಲ್ಡ್ ಲೈಟಿಂಗ್ ಇಂಟೆಲಿಜೆಂಟ್ ಮೆನೇಜ್‌ಮೆಂಟ್ ಸಿಸ್ಟಮ್ಸ್ (ಎಎಲ್ ಐಎಂಎಸ್) ಹೊಂದಿದೆ. ಇದು ರನ್ ವೇ ಹೊಸ್ತಿಲಿನಿಂದ 900 ಮೀ ಹೊರಕ್ಕೆ ವಿಸ್ತರಿಸಿರುತ್ತದೆ. ಈ ಗೋಪುರಗಳಲ್ಲಿ ಹೆಚ್ಚಿನವು ಕುತುಬ್ ಮಿನಾರ್ ಗಿಂತ ಎತ್ತರದಲ್ಲಿರುತ್ತವೆ. ಈ ಸೌಲಭ್ಯ ಏಷ್ಯಾದಲ್ಲಿ ಎರಡನೇಯದಾಗಿದೆ. ಇದರೊದಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಂತಹ ಸುಧಾರಿತ ಮೂಲಸೌಕರ್ಯಗಳನ್ನು ಹೊಂದಿರುವ ವಿಶ್ವದ ಆಯ್ದ ವಿಮಾನ ನಿಲ್ದಾಣಗಳ ಗುಂಪಿನಲ್ಲಿ ಸ್ಥಾನ ಪಡೆದಿದೆ.ಮಂಗಳೂರು ಏರ್ಪೋರ್ಟ್ನಲ್ಲಿ ಕ್ಯಾಟ್-I ಲ್ಯಾಂಡಿಂಗ್ ಲೈಟ್ ವ್ಯವಸ್ಥೆ ಪ್ರಾರಂಭ
ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅನುಮೋದನೆಯ ನಂತರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರನ್‌ವೇಗಾಗಿ ನಿಖರ ಸಂಪರ್ಕ ಬೆಳಕಿನ (ಪಿಎಎಲ್) ವರ್ಗ 1 ವ್ಯವಸ್ಥೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯ ಸುರಕ್ಷತೆ ಮತ್ತು ಲ್ಯಾಂಡಿಂಗ್ ನಿಖರತೆ ಹೆಚ್ಚಿಸುವಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.