ಸಾರಾಂಶ
ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳೂರು ಕಾರು ಮತ್ತು ಆಟೋರಿಕ್ಷಾ ಸಹಕಾರಿ ಸಂಘ (ಮ್ಯಾಕೊ)ದ ಸುವರ್ಣ ಮಹೋತ್ಸವ ಕಾರ್ಯಕ್ರಮ ನೆರವೇರಿತು.
ಮಂಗಳೂರು: ದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ, ಗ್ರಾಮ ಮಟ್ಟದಲ್ಲಿ ಸುಧಾರಣೆ ಆಗಲು ಸಹಕಾರಿ ಸಂಘಗಳ ಪಾತ್ರ ಪ್ರಮುಖವಾದುದು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳೂರು ಕಾರು ಮತ್ತು ಆಟೋರಿಕ್ಷಾ ಸಹಕಾರಿ ಸಂಘ (ಮ್ಯಾಕೊ)ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರಿ ಸಂಘಗಳಿಂದ ಸಿಗುವ ಸೌಲಭ್ಯಗಳಿಂದ ರೈತರ ಮತ್ತು ಸಾಮಾನ್ಯ ವರ್ಗದ ಜನರ ಜೀವನದಲ್ಲಿ ಬದಲಾವಣೆ ಆಗುತ್ತಿದೆ. ಕೃಷಿ, ಕೈಮಗ್ಗ ಮತ್ತು ಇನ್ನಿತರ ಚಟುವಟಿಕೆಗಳನ್ನು ನಡೆಸಲು ಮತ್ತು ದಿನನಿತ್ಯದ ವ್ಯಾಪಾರ ಮಾಡಲು ಸಹಕಾರಿ ಸಂಸ್ಥೆಗಳಿಂದ ದೊರೆಯುವ ಸಹಕಾರವೇ ಪ್ರಮುಖ ಕಾರಣವಾಗಿದೆ. ಈ ಮೂಲಕ ದೇಶದ ಅಭಿವೃದ್ಧಿಗೂ ಸಹಕಾರಿ ಸಂಘಗಳ ಕೊಡುಗೆ ದೊಡ್ಡದಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮ್ಯಾಕೊ ಸಂಸ್ಥೆಯ ಮೂಲಕ ಕಾರ್ಮಿಕರ ಪರವಾಗಿ ಕೆಲಸ ಮಾಮಾತ್ತಿರುವುದು ಶ್ಲಾಘನೀಯ. ಕಾರು ಮತ್ತು ಆಟೋರಿಕ್ಷಾ ಚಾಲಕರಿಗಾಗಿಯೇ ಈ ಸಂಸ್ಥೆ ಆರಂಭಗೊಂಡು 50 ವರ್ಷ ಕಳೆದುದುದು ರಾಜ್ಯದಲ್ಲಿಯೇ ಪ್ರಥಮ ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಶ್ಲಾಘಿಸಿದರು.ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ.ವಂ. ಫಾ.ಡಾ. ಪೀಟರ್ ಪೌಲ್ ಸಲ್ದಾನ ಮಾತನಾಡಿದರು. ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಎಚ್.ಎನ್. ರಮೇಶ್, ಅನಿಲ್ ಲೋಬೊ, ರೋಹನ್ ಮೊಂತೆರೋ, ನವೀನ್ ಎಂ.ಜಿ., ಚಿತ್ತರಂಜನ್ ಬೋಳಾರ್, ಸಿರಿಲ್ ಡಿಸೋಜ, ಪ್ರಮೋದ್ ವಾಸ್ ಸಭೆಯಲ್ಲಿದ್ದರು.
;Resize=(128,128))
;Resize=(128,128))