ಮಂಗಳೂರು: ಭಾರತದ ಪ್ರಮುಖ ಇಂಜಿನಿಯರಿಂಗ್ ಸಂಸ್ಥೆಗಳಾದ ಐಐಟಿ, ಎನ್‌ಐಟಿ, ಐಐಐಟಿ ಗಳಿಗೆ ಪ್ರವೇಶ ಪಡೆಯಲು ಅಗತ್ಯವಾದ ಸ್ಪರ್ಧಾತ್ಮಕ ತರಬೇತಿ ನೀಡುವ ಮಂಗಳೂರಿನ ಸಿಎಫ್‌ಎಎಲ್‌ ಸಂಸ್ಥೆಯ 25 ವಿದ್ಯಾರ್ಥಿಗಳು ಜೆಇಇ ಮೈನ್‌ 2026ರಲ್ಲಿ 99 ಪರ್ಸೆಂಟೈಲ್‌ ಮೀರಿದ್ದಾರೆ. 4 ಮಂದಿ ಶೇ. 99.9 ಮೇಲ್ಪಟ್ಟು, 13 ಮಂದಿ ಶೇ.99.ಮೇಲ್ಪಟ್ಟು, 25 ಮಂದಿ 99% ಮೇಲ್ಪಟ್ಟು, 52 ಮಂದಿ ಶೇ.97 ಮೇಲ್ಪಟ್ಟು ರಾಷ್ಟ್ರೀಯ ಸರಾಸರಿಗಿಂತ ಸುಮಾರು 10 ಪಟ್ಟು ಹೆಚ್ಚು ಸಾಧನೆ ಮಾಡಿದ್ದಾರೆ.2026ರ ಜೆಇಇ ಮೈನ್‌ ಪರೀಕ್ಷೆಯಲ್ಲಿ ಸಿಎಫ್‌ಎಎಲ್‌ನ 25 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ ಮೀರಿದ್ದು, ದೇಶದ ಸುಮಾರು 13 ಲಕ್ಷ ವಿದ್ಯಾರ್ಥಿಗಳಲ್ಲಿ ಟಾಪ್ 13,000ರಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ 4 ಮಂದಿ 99.9 ಪರ್ಸೆಂಟೈಲ್‌ ಮೀರಿಸಿ ಟಾಪ್ 1,300ರಲ್ಲಿ ಸ್ಥಾನ ಗಳಿಸಿದ್ದಾರೆ. ಈ ಸಾಧನೆ ಸಂಸ್ಥೆಯನ್ನು ಇನ್ನಷ್ಟು ಉನ್ನತ ಶಿಖರಕ್ಕೆ ಏರಿಸಿದೆ. ಉತ್ತಮ ಕೋಚಿಂಗ್ ಪಡೆಯಲು ಕೋಟಾ, ಹೈದರಾಬಾದ್ ಅಥವಾ ಬೆಂಗಳೂರು ಹೋಗಬೇಕೆಂಬ ಕಲ್ಪನೆ ಈಗ ಅಗತ್ಯವಿಲ್ಲ. ಅದೇ ಮಟ್ಟದ ತರಬೇತಿ ನಮ್ಮ ಮಂಗಳೂರಿನಲ್ಲೇ ಸಿಎಫ್‌ಎಎಲ್‌ ಮೂಲಕ ಲಭ್ಯವಾಗಿದೆ. ಈ ವಿದ್ಯಾರ್ಥಿಗಳು ತಮ್ಮ ಮನೆಯಲ್ಲೇ ಉಳಿದುಕೊಂಡು ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿರುವುದು ವಿಶೇಷ.

ಅಭ್ಹಿ ಸನ್ನಯ್ಯ (99.96), ಆದಿತ್ಯ ರಾವ್ (99.95), ರಿಶೋನ್ ಫರ್ನಾಂಡಿಸ್ (99.93), ಮೃಣಾಲ್ ಡಿ.ಭಟ್ (99.90), ಲಾರೆನ್ ಮೇರಿಯನ್ ಪಟ್ರಾವ್ (99.89) ಅಂಕಗಳನ್ನು ಪಡೆದಿದ್ದಾರೆ. ಭುವನ್ ಶೆಟ್ಟಿ, ರಿಶಿತ್ ಪಿ, ಮೀನಾಕ್ಷಿ ಉನ್ನಿಥನ್, ರಿಶಾಭ್ ನಾಯಕ್, ಮೊಹಕ್ ಎಸ್ ರಾಜ್, ಅಕ್ಷಿತ್ ರಾಮ್ ಕೆ, ಸನತ್ ಸಂಜಯ್ ಶೆಟ್, ಇರಾ ಜೈನ್, ನಿರೀಕ್ಷಾ ಎನ್, ಸ್ವಾಗತ್ ಶೆಟ್ಟಿ ಮೊದಲಾದವರು ಉತ್ತಮ ಸಾಧನೆ ಮಾಡಿದ್ದಾರೆ. 40 ಮಂದಿ ಶೇ.98 ಮೇಲ್ಪಟ್ಟು, 52 ಮಂದಿ ಶೇ.97 ಮೇಲ್ಪಟ್ಟು ಫಲಿತಾಂಶದೊಂದಿಗೆ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.