ರಾಜ್ಯ ಸರ್ಕಾರ 2017 ರ ನೋಟಿಫಿಕೇಟಿನ್‌ಗೆ ತಿದ್ದುಪಡಿ ಮಾಡಿ ಡಿಪ್ಲೋಮಾ ಎಂಜಿನಿಯರ್‌ನಲ್ಲಿ 10 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವರಿಗೆ ಈ ಹಿಂದೆ ಇದ್ದಂತಹ ಎಲ್ಲ ರೀತಿಯ ಕಾರ್ಯಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ.

ಮಂಗಳೂರು: ರಾಜ್ಯ ಸರ್ಕಾರ 2017 ರ ನೋಟಿಫಿಕೇಟಿನ್‌ಗೆ ತಿದ್ದುಪಡಿ ಮಾಡಿ ಡಿಪ್ಲೋಮಾ ಎಂಜಿನಿಯರ್‌ನಲ್ಲಿ 10 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವರಿಗೆ ಈ ಹಿಂದೆ ಇದ್ದಂತಹ ಎಲ್ಲ ರೀತಿಯ ಕಾರ್ಯಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ.

ರಾಜ್ಯ ಸರ್ಕಾರ ಎಂಬಿಬಿಎಲ್ (ಮಾಡೆಲ್ ಬಿಲ್ಡಿಂಗ್ ಬೈಲಾ) ಜಾರಿಗೆ ತರುವಾಗ ಅರ್ಹತೆ ಮತ್ತು ಸಾಮರ್ಥ್ಯದ ನಿಯಮದಲ್ಲಿ 2017 ರ ನೋಟಿಫಿಕೇಷನ್ ಅನ್ನು ಅಳವಡಿಸಿ, ಡಿಪ್ಲೋಮಾ ಇನ್ ಸಿವಿಲ್ ಎಂಜಿನಿಯರ್‌ ಪದವಿ ಪಡೆದವರನ್ನು ಸೂಪರ್‌ವೈಸ‌ರ್ ಎಂದು ಉಲ್ಲೇಖಿಸಿದ್ದರಿಂದ ಅವರನ್ನು ಕೇವಲ 100 ಚದರ ಮೀಟರ್ ನಿವೇಶನ ಹಾಗೂ 7.5 ಮೀಟರ್ ಎತ್ತರಕ್ಕೆ ಮಾತ್ರ ಅನ್ವಯವಾಗುವಂತೆ ಸೀಮಿತಗೊಳಿಸಲಾಗಿತ್ತು.

ಇದನ್ನು ಮಂಗಳೂರು ಮಹಾನಗರ ಪಾಲಿಕೆಯ ನೂತನ ಕಟ್ಟಡ ನಿರ್ಮಾಣ ಬೈಲಾದಲ್ಲಿಯೂ ಕೂಡಾ ಅಳವಡಿಸಿದ್ದರಿಂದ ಅನುಭವಿ ವೃತ್ತಿಪರ ಎಂಜಿನಿಯರ್‌ಗಳ ಸಹಿತ ಸಾರ್ವಜನಿಕರಿಗೂ ತೀವ್ರ ತೊಂದರೆಯಾಗುತ್ತಿತ್ತು. ಹೀಗಾಗಿ ಈಗಾಗಲೇ 20 ರಿಂದ 35 ವರ್ಷಗಳವರೆಗೆ ಪರವಾನಿಗೆ ಹೊಂದಿದ್ದ ಡಿಪ್ಲೋಮಾ ಎಂಜಿನಿಯರ್‌ಗಳು ಸರ್ಕಾರಕ್ಕೆ ತಮ್ಮ ಆಕ್ಷೇಪಣೆಯನ್ನು ಸಲ್ಲಿಸಿ, ಶಾಸಕ ವೇದವ್ಯಾಸ ಕಾಮತ್ ಹಾಗೂ ಸ್ಪೀಕರ್ ಯು.ಟಿ. ಖಾದರ್ ರವರನ್ನು ಭೇಟಿ ಮಾಡಿ ಮನವಿಯೂ ಮಾಡಿದ್ದರು. ಅದರಂತೆ ಈ ಇಬ್ಬರೂ ಜನಪ್ರತಿನಿಧಿಗಳು ಸರ್ಕಾರದ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿದ್ದರು.ಶಾಸಕ ವೇದವ್ಯಾಸ್‌ ಕಾಮತ್ ರವರು ಅಧಿವೇಶನದಲ್ಲಿಯೂ ಪ್ರಸ್ತಾಪಿಸಿ ಸಚಿವ ಭೈರತಿ ಸುರೇಶ್ ರವರ ಗಮನಕ್ಕೆ ತಂದು, ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ರವರನ್ನು ನಿರಂತರವಾಗಿ ಸಂಪರ್ಕಿಸಿ, ಹಲವು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಇತ್ಯರ್ಥಕ್ಕೆ ವಿಶೇಷ ಶ್ರಮ ವಹಿಸಿದ್ದರು. ಇದೀಗ ಅಂತಿಮವಾಗಿ ರಾಜ್ಯ ಸರ್ಕಾರವು 2017ರ ನೋಟಿಫಿಕೇಶನ್‌ಗೆ ತಿದ್ದುಪಡಿ ಮಾಡಿ ಡಿಪ್ಲೋಮಾ ಎಂಜನೀಯರ್‌ಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವವರಿಗೆ ಈ ಹಿಂದೆ ಇದ್ದಂತಹ ಎಲ್ಲಾ ರೀತಿಯ ಕಾರ್ಯಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಡಿಪ್ಲೋಮಾ ಎಂಜಿನಿಯರ್ ಗಳ ಎಸೋಸಿಯೇಷನ್‌ಗಳು ನಡೆಸಿದ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ.

-------------