ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವು ಭಾನುವಾರ ಉಳ್ಳಾಲ ತಾಲೂಕು ಮುಡಿಪು ಶ್ರೀ ಭಾರತಿ ಅನುದಾನಿತ ಶಾಲೆಯಲ್ಲಿ ನಡೆಯಿತು.
ಮಂಗಳೂರು: ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವು ಭಾನುವಾರ ಉಳ್ಳಾಲ ತಾಲೂಕು ಮುಡಿಪು ಶ್ರೀ ಭಾರತಿ ಅನುದಾನಿತ ಶಾಲೆಯಲ್ಲಿ ನಡೆಯಿತು.
ಕಸಾಪ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಹಿರಿಯ ಸಾಹಿತಿ ಕೆ. ವಿ. ಲಕ್ಷ್ಮಣ ಮೂರ್ತಿ ಉದ್ಘಾಟಿಸಿದರು. ಅತಿಥಿಗಳಾಗಿ ಡಾ. ವಾಮನರಾವ್ ಬೇಕಲ್, ಸುನೀತಾ ಪ್ರದೀಪ್ ಕುಮಾರ್ ಮತ್ತು ಸುಬ್ರಹ್ಮಣ್ಯ ಭಟ್ ಕೊಡಕ್ಕಲು ಆಗಮಿಸಿದ್ದರು. ಈ ಸಂದರ್ಭ 15ಕ್ಕೂ ಹೆಚ್ಚು ಕೃತಿಗಳು ಲೋಕಾರ್ಪಣೆಗೊಂಡಿತು. ದಿವಾಕರ ಬಲ್ಲಾಳ್ ಅವರ ಒಳಮನದ ಸುಳಿಗಳು ಹಾಗೂ ಪಂಚರಂಗಿ, ದಿನೇಶ್ ಡಿ.ಎಸ್. ಅವರ ಕಾವ್ಯ ಕೊಳಲು, ರೇಖಾ ಶ್ರೀನಿವಾಸ್ ಅವರ ಕಾಡು ಕುದುರೆ ಬೆನ್ನೇರಿ ಪಂಕಜಾ ರಾವ್ ಭಟ್ ಅವರ ದಾರಿ ದೀಪ ಸುಮನ್ ರಾವ್ ಅವರ ಭಾವದಲೆ ರುದ್ರಮ್ಮ ಸಂ. ಗಿಡ್ಡಪ್ಪಗೋಳ (ರುತಿ) ಅವರ ಚಿಣ್ಣರ ಕವಿತೆಗಳು, ಮಕರ ಅವರ ವಿರತಾಶ್ವೇ, ಪ್ರಕಾಶ್ ಸುವರ್ಣ ಕಟಪಾಡಿ ಅವರ ಗುರುಪರಂಪರೆ ರೇಖಾ ಸುದೇಶ್ ರಾವ್ ಅವರ ಸಪ್ತ ಯಾನ, ಹಾಗೂ ಬಿಪಿನ್‌ಚಂದ್ರ ಅವರ ಹೃದಯದ ಹಾಡು ಮತ್ತು ಅಶ್ವಿನಿ ಅವರ ಇಂತಿರು ಸೇರಿದಂತೆ ಹಲವು ವೈವಿಧ್ಯಮಯ ಪುಸ್ತಕಗಳು ಲೋಕಾರ್ಪಣೆಗೊಂಡಿತು.ರಾಜ್ಯ ಪ್ರಶಸ್ತಿ ಪ್ರದಾನ: ಸಾಹಿತ್ಯ, ಶಿಕ್ಷಣ, ಸಮಾಜ ಸೇವೆ, ರಂಗಭೂಮಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಶಿಕ್ಷಕರತ್ನ, ಸೌರಭ ರತ್ನ, ಸಾಹಿತ್ಯ ರತ್ನ, ಕನ್ನಡ ಶ್ರೀ, ಹಾಗೂ ಚೈತನ್ಯ ಶ್ರೀ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಟಕ: ‘ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ, ಸರ್ಕಾರಿ ಶಾಲೆ ಉಳಿಸಿ, ಕನ್ನಡ ಕಲಿಸಿ’ ಎಂಬ ಸಂದೇಶದೊಂದಿಗೆ ವಿಶೇಷ ನಾಟಕ ಪ್ರದರ್ಶನಗೊಂಡಿತು.