ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸುವ (ನಿರ್ಮಾಣ/ ಉನ್ನತೀಕರಣ) ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪರಿಸರ ಪರಿಹಾರ ನಿಧಿಯಲ್ಲಿ 40 ಕೋಟಿ ರು. ಅನುದಾನ ಮಂಜೂರಾಗಿದ್ದು, ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪಚ್ಚನಾಡಿ ಎಸ್‌ಟಿಪಿಯಲ್ಲಿ ಚಾಲನೆ ನೀಡಿದರು.
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸುವ (ನಿರ್ಮಾಣ/ ಉನ್ನತೀಕರಣ) ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪರಿಸರ ಪರಿಹಾರ ನಿಧಿಯಲ್ಲಿ 40 ಕೋಟಿ ರು. ಅನುದಾನ ಮಂಜೂರಾಗಿದ್ದು, ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪಚ್ಚನಾಡಿ ಎಸ್‌ಟಿಪಿಯಲ್ಲಿ ಚಾಲನೆ ನೀಡಿದರು.ಈ ಯೋಜನೆಯಡಿ ವಿವಿ ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಪಚ್ಚನಾಡಿ ಪ್ರದೇಶದಲ್ಲಿರುವ ಎಎಸ್‌ಪಿ ತಂತ್ರಜ್ಞಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಟಿ.ಪಿ.ಯನ್ನು ಎಸ್‌ಬಿಆರ್ ತಂತ್ರಜ್ಞಾನಕ್ಕೆ ಮೇಲ್ದರ್ಜೇಗೇರಿಸುವ ಕಾಮಗಾರಿ (6.87 ಕೋಟಿ ರು.), ಬಜಾಲ್ ಎಸ್.ಟಿ.ಪಿ.ಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಬಬಲ್ ಡಿಫ್ಯೂಸರ್, ಏರ್ ಬ್ಲೋಯರ್ ಮತ್ತು ಕಂಟ್ರೋಲ್ ಪ್ಯಾನೆಲ್‍ಗಳನ್ನು ಅಳವಡಿಸುವ ಕಾಮಗಾರಿ (3.22 ಕೋಟಿ ರು.), ಅತ್ತಾವರ ಪ್ರದೇಶದಲ್ಲಿ ಹೊಸ ವೆಟ್‌ವೆಲ್ ನಿರ್ಮಾಣ ಕಾಮಗಾರಿ (3.33 ಕೋಟಿ ರು.), ಮಂಗಳೂರು ನಗರದಲ್ಲಿ ಆಯ್ದ ಭಾಗಗಳಲ್ಲಿ 8.20 ಕಿ.ಮೀ. ಉದ್ದದ ಮುಖ್ಯ ಒಳಚರಂಡಿ ಕೊಳವೆಯ ಉನ್ನತೀಕರಣ ಕಾಮಗಾರಿ (16.13 ಕೋಟಿ ರು.) ಕೈಗೊಳ್ಳಲಾಗುತ್ತದೆ.ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಜನಪ್ರತಿನಿಧಿಗಳು ಇದ್ದರು.