ಅಕ್ಷರ ಸಂತ, ‘ಕನ್ನಡಪ್ರಭ ವರ್ಷದ ವ್ಯಕ್ತಿ’ ಪದ್ಮಶ್ರೀ ಹರೇಕಳ ಹಾಜಬ್ಬ, ದೈವ ನರ್ತಕ ರವೀಶ್‌ ಪಡುಮಲೆ ಅವರಿಗೆ ಶನಿವಾರ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು.

ಮಂಗಳೂರು: ಅಕ್ಷರ ಸಂತ, ‘ಕನ್ನಡಪ್ರಭ ವರ್ಷದ ವ್ಯಕ್ತಿ’ ಪದ್ಮಶ್ರೀ ಹರೇಕಳ ಹಾಜಬ್ಬ, ದೈವ ನರ್ತಕ ರವೀಶ್‌ ಪಡುಮಲೆ ಅವರಿಗೆ ಶನಿವಾರ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು.

ಇತ್ತೀಚೆಗೆ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್‌ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್‌ ಪ್ರಕಟಿಸಲಾಗಿದ್ದು, ಏ.13ರಂದು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲು ದಿನಾಂಕ ನಿಗದಿ ಮಾಡಲಾಗಿದೆ.ವಿಕಸಿತ್‌ ಭಾರತ್‌ಗೆ ಕೈಜೋಡಿಸಿ- ರಾಜ್ಯಪಾಲ: ಪದವಿ ಪ್ರದಾನ ನೆರವೇರಿಸಿ ಮಾತನಾಡಿದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್, ಇಡೀ ಜಗತ್ತು ಪ್ರಸ್ತುತ ಪರಿವರ್ತನೆಯ ಹಾದಿಯಲ್ಲಿದೆ. ಕೃತಕ ಬುದ್ಧಿಮತ್ತೆ, ಡಿಜಿಟಲ್‌ ಕ್ರಾಂತಿ ನಡೆಯುತ್ತಿರುವ ಜತೆಗೇ ಸೈಬರ್‌ ಅಪರಾಧಗಳೂ ಹೆಚ್ಚುತ್ತಿವೆ. ಇದನ್ನು ಕೌಶಲ್ಯದಿಂದ ನಿಭಾಯಿಸಬೇಕಾಗಿದೆ. ಯುವ ಶಕ್ತಿ ಈ ನಿಟ್ಟಿನಲ್ಲಿ ಸಫಲತೆ ಸಾಧಿಸುವುದರೊಂದಿಗೆ ದೇಶದ ಸಫಲತೆಯಲ್ಲಿ ಪಾಲುದಾರರಾಗಬೇಕು. ವಿಕಸಿತ್‌ ಭಾರತ್‌ ಸಂಕಲ್ಪವನ್ನು ಪೂರೈಸಲು ಯುವಕರು ಕೈಜೋಡಿಸಬೇಕು ಎಂದರು. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಘಟಿಕೋತ್ಸವ ಭಾಷಣ ಮಾಡಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್‌. ಧರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.ಕುಲಸಚಿವ (ಪ್ರಭಾರ) ಪ್ರೊ.ಗಣೇಶ್‌ ಸಂಜೀವ್‌, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ವಿವಿಧ ನಿಕಾಯಗಳ ಡೀನ್‌ಗಳು, ಸಿಂಡಿಕೇಟ್‌ ಸದಸ್ಯರು ಇದ್ದರು.