ಮಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್‌: ಆಳ್ವಾಸ್‌ ಚಾಂಪಿಯನ್

| Published : Dec 01 2024, 01:30 AM IST

ಮಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್‌: ಆಳ್ವಾಸ್‌ ಚಾಂಪಿಯನ್
Share this Article
  • FB
  • TW
  • Linkdin
  • Email

ಸಾರಾಂಶ

ಸಮಗ್ರವಾಗಿ ಆಳ್ವಾಸ್ 569 ಅಂಕಗಳೊಂದಿಗೆ ಭರ್ಜರಿಯಾಗಿ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಉಜಿರೆಯ ಎಸ್‌ಡಿಎಂ 109, ಉಡುಪಿ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು 62 ಅಂಕಗಳೊಂದಿಗೆ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಮಂಗಳೂರು ವಿ.ವಿ. ಅಂತರ ಕಾಲೇಜು ಅಥ್ಲೆಟಿಕ್ಸ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಗಳು ಭರ್ಜರಿಯಾಗಿ ಪ್ರದರ್ಶನ ನೀಡುವ ಮೂಲಕ ಪುರುಷರ, ಮಹಿಳೆಯರ ವಿಭಾಗಗಳಲ್ಲಿ ಮತ್ತು ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಪುರುಷರ ವಿಭಾಗದಲ್ಲಿ ಆಳ್ವಾಸ್‌ ಕಾಲೇಜು 292 ಅಂಕಗಳೊಂದಿಗೆ ಚಾಂಪಿಯನ್‌ ಆದರೇ, ಉಜಿರೆಯ ಎಸ್‌ಡಿಎಂ ಕಾಲೇಜಿ 64, ಉಡುಪಿ ತೆಂಕನಿಡಿಯೂರು ಸ.ಪ್ರ.ದ.ಕಾಲೇಜು 35 ಮತ್ತು ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜು 12 ಅಂಕಗಳೊಂದಿಗೆ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡವು.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ ಕಾಲೇಜು 277 ಅಂಕಗಳೊಂದಿಗೆ ಅಗ್ರಸ್ಥಾನಿಯಾದರೆ, ಉಡುಪಿ ಅಜ್ಜರಕಾಡಿನ ಡಾ.ಜಿ. ಶಂಕರ್ ಸರ್ಕಾರಿ ಪಥಮ ದರ್ಜೆ ಕಾಲೇಜು 48, ಉಜಿರೆಯ ಎಸ್‌ಡಿಎಂ ಕಾಲೇಜು 45 ಮತ್ತು ಉಡುಪಿ ತೆಂಕನಿಡಿಯೂರು ಸ.ಪ್ರ.ದ.ಕಾಲೇಜು 27, ಉಡುಪಿಯ ಎಂಜಿಎಂ ಕಾಲೇಜು 16, ವಾಮಪದವಿನ ಸ.ಪ್ರ.ದ.ಕಾಲೇಜು 10 ಅಂಕಗಳೊಂದಿಗೆ ನಂತರದ ಸ್ಥಾನಗಳನ್ನು ಗಳಿಸಿಕೊಂಡವು.

ಈ ಕ್ರೀಡಾಕೂಟದಲ್ಲಿ ಮಹಿಳೆಯರ ವಿಭಾಗದಲ್ಲಿ 7 ಮತ್ತು ಪುರುಷರ ವಿಬಾಗದಲ್ಲಿ 4 ನೂತನ ಕೂಟ ದಾಖಲೆಗಳು ಸೃಷ್ಟಿಯಾಗಿದ್ದು, ಈ ಎಲ್ಲ ದಾಖಲೆಗಳನ್ನು ಆಳ್ವಾಸ್‌ ಕ್ರೀಡಾಪಟುಗಳು ಮಾಡಿದ್ದಾರೆ.