ಮಂಗಳೂರು ವಿವಿಯು ಯುಐ ಗ್ರೀನ್‌ಮೆಟ್ರಿಕ್ ಶ್ರೇಯಾಂಕದಲ್ಲಿ (2025) ರಾಷ್ಟ್ರ ಮಟ್ಟದಲ್ಲಿ ನಂ.3, ಜಾಗತಿಕವಾಗಿ 127ನೇ ಸ್ಥಾನ ಪಡೆದು ಸಾಧನೆ ಮಾಡಿದೆ. ಆರ್ಥಿಕ ಕೊರತೆಗಳ ನ ಡುವೆಯೂ ಮಂಗಳೂರು ವಿವಿಯ ಈ ವಿಭಿನ್ನ ಸಾಧನೆ
ಮಂಗಳೂರು: ಮಂಗಳೂರು ವಿವಿಯು ಯುಐ ಗ್ರೀನ್‌ಮೆಟ್ರಿಕ್ ಶ್ರೇಯಾಂಕದಲ್ಲಿ (2025) ರಾಷ್ಟ್ರ ಮಟ್ಟದಲ್ಲಿ ನಂ.3, ಜಾಗತಿಕವಾಗಿ 127ನೇ ಸ್ಥಾನ ಪಡೆದು ಸಾಧನೆ ಮಾಡಿದೆ. ಆರ್ಥಿಕ ಕೊರತೆಗಳ ನ ಡುವೆಯೂ ಮಂಗಳೂರು ವಿವಿಯ ಈ ವಿಭಿನ್ನ ಸಾಧನೆ ಇದೀಗ ಗಮನ ಸೆಳೆದಿದೆ.
ಇಂಡೋನೇಷ್ಯಾ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿದ ಯುಐ ಗ್ರೀನ್‌ಮೆಟ್ರಿಕ್ ವಿಶ್ವವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಮಂಗಳೂರು ವಿವಿ ಉತ್ತಮ ಸ್ಥಾನ ಪಡೆದಿದೆ. ಗ್ರೀನ್‌ಮೆಟ್ರಿಕ್ ಶ್ರೇಯಾಂಕವು ಹಸಿರು ಕ್ಯಾಂಪಸ್ ಮತ್ತು ಪರಿಸರ ಸುಸ್ಥಿರತೆಯನ್ನು ಆಧರಿಸಿದ್ದು, ಪರಿಸರಕ್ಕೆ ವಿಶ್ವವಿದ್ಯಾಲಯಗಳ ಬದ್ಧತೆಯ ಆಧಾರದಲ್ಲಿ ಈ ಶ್ರೇಯಾಂಕ ನೀಡಿದೆ. ರಾಜ್ಯದ ಸರ್ಕಾರಿ ವಿಶ್ವ ವಿದ್ಯಾನಿಲಯಗಳ ಪೈಕಿ ಮಂಗಳೂರು ವಿವಿಗೆ ಪ್ರಥಮ ಸ್ಥಾನ ಲಭಿಸಿದೆ.ಇದರಲ್ಲಿ ಭಾರತದ 100 ವಿಶ್ವವಿದ್ಯಾನಿಲಯಗಳು ಭಾಗವಹಿಸಿದ್ದು, ವಿಶ್ವಾದ್ಯಂತ 105 ದೇಶಗಳಲ್ಲಿನ 1745 ಸಂಸ್ಥೆಗಳು ಭಾಗವಹಿಸಿದ್ದವು.
ಮಂಗಳೂರು ವಿಶ್ವವಿದ್ಯಾನಿಲಯವು ವ್ಯವಸ್ಥೆ ಮತ್ತು ಮೂಲಸೌಕರ್ಯದಲ್ಲಿ ದೇಶದಲ್ಲಿ 1ನೇ ಸ್ಥಾನದಲ್ಲಿದೆ. ಇಂಧನ ಮತ್ತು ಹವಾಮಾನ ಬದಲಾವಣೆಯಲ್ಲಿ ದೇಶದಲ್ಲಿ 4 ನೇ ಸ್ಥಾನ, ತ್ಯಾಜ್ಯ ನಿರ್ವಹಣೆ ಮತ್ತು ನೀರಿನ ವಿಚಾರದಲ್ಲಿ ದೇಶದಲ್ಲಿ 6ನೇ ಸ್ಥಾನದಲ್ಲಿದೆ. ಶಿಕ್ಷಣ ಮತ್ತು ಸಂಶೋಧನೆಗಾಗಿ 10ನೇ ಸ್ಥಾನದಲ್ಲಿದೆ. ಸಾರಿಗೆ ವ್ಯವಸ್ಥೆಗಾಗಿ ದೇಶದಲ್ಲಿ 11ನೇ ಸ್ಥಾನದಲ್ಲಿದೆ.ಮಂಗಳೂರು ವಿವಿಗೆ ಸಂದ ಈ ಗೌರವವನ್ನು ನಮ್ಮ ಎಲ್ಲ ಅಧ್ಯಾಪಕರು, ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳಿಗೆ ಅರ್ಪಿಸುತ್ತೇನೆ. ವಿಶ್ವವಿದ್ಯಾನಿಲಯದ ಹತ್ತಿರದ ಹಳ್ಳಿಗಳ ಜನರಿಗೂ ಕೂಡ ಧನ್ಯವಾದಗಳು.- ಪ್ರೊ.ಪಿ.ಎಲ್. ಧರ್ಮ, ಕುಲಪತಿ, ಮಂಗಳೂರು ವಿವಿ
