ಗೋಕುಲ ರಸ್ತೆಯಲ್ಲಿ ಮಾಂಗಳ್ಯ ಶಾಪಿಂಗ್ ಮಾಲ್ ಉದ್ಘಾಟನೆ

| Published : Sep 12 2025, 01:00 AM IST

ಗೋಕುಲ ರಸ್ತೆಯಲ್ಲಿ ಮಾಂಗಳ್ಯ ಶಾಪಿಂಗ್ ಮಾಲ್ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಭಾರತದಲ್ಲಿ ೨೬ನೇ ಹಾಗೂ ಕರ್ನಾಟಕದಲ್ಲಿ ೪ನೇ ಶಾಪಿಂಗ್ ಮಾಲ್ ಇದಾಗಿದ್ದು, ಮುಂಬರುವ ದಿನಗಳಲ್ಲಿ ವಿಸ್ತರಣೆ ಆಗಲಿದೆ. ನಮ್ಮ ಮಾಲ್ ನಲ್ಲಿ ಸ್ಥಳೀಯ ೨೫೦ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ಒಟ್ಟಾರೆಯಾಗಿ ೧೦ ಸಾವಿರ ಉದ್ಯೋಗ ಸೃಷ್ಟಿಸಲಾಗಿದೆ.

ಹುಬ್ಬಳ್ಳಿ: ತೆಲಂಗಾಣದ ವಾರಂಗಲ್‌ನಲ್ಲಿ ೨೦೧೨ರಲ್ಲಿ ಆರಂಭವಾದ ಮಾಂಗಳ್ಯ ಶಾಪಿಂಗ್ ಮಾಲ್ ವಸ್ತ್ರ ಲೋಕದಲ್ಲಿ ಹೊಸ ಅಧ್ಯಾಯವನ್ನೇ ಬರೆದಿದೆ.

ಕರ್ನಾಟಕದ ರಾಯಚೂರು, ಕಲಬುರಗಿ, ಬೀದರ್‌ನಲ್ಲಿ ಶಾಖೆ ಆರಂಭಿಸಿ ಗುರುವಾರ ಹುಬ್ಬಳ್ಳಿಯಲ್ಲಿ ನೂತನ ಮಳಿಗೆಯನ್ನು ಆರಂಭಿಸಿದೆ. ಶೀಘ್ರದಲ್ಲೇ ಬೆಳಗಾವಿಯಲ್ಲಿಯೂ ನೂತನ ಶಾಖೆ ಆರಂಭಗೊಳ್ಳಲಿದೆ ಎಂದು ಮಾಂಗಳ್ಯ ಶಾಪಿಂಗ್ ಮಾಲ್ ನಿರ್ದೇಶಕ ಕಾಸಂ ನಮಃ ಶಿವಾಯ ಹೇಳಿದರು.

ನಗರದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ನೂತನವಾಗಿ ನಿರ್ಮಾಣಗೊಂಡ ಮಾಂಗಳ್ಯ ಶಾಪಿಂಗ್ ಮಾಲ್ ಉದ್ಘಾಟನೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಾಂಗಲ್ಯ ಶಾಪಿಂಗ್ ಮಾಲ್‌ನಲ್ಲಿ ಮಹಿಳೆಯರು, ಪುರುಷರು, ಯುವತಿ-ಯುವಕರು ಹಾಗೂ ಮಕ್ಕಳ ಅಭಿರುಚಿಗೆ ತಕ್ಕಂತೆ ಆಧುನಿಕ ಫ್ಯಾಷನ್ ಕಲೆಕ್ಷನ್, ಮದುವೆ ಮತ್ತು ಶುಭಕಾರ್ಯಗಳಿಗೆ ವಿಶೇಷ ವಸ್ತ್ರ ಸಂಗ್ರಹವಿದೆ. ದಕ್ಷಿಣ ಭಾರತದಲ್ಲಿ ೨೬ನೇ ಹಾಗೂ ಕರ್ನಾಟಕದಲ್ಲಿ ೪ನೇ ಶಾಪಿಂಗ್ ಮಾಲ್ ಇದಾಗಿದ್ದು, ಮುಂಬರುವ ದಿನಗಳಲ್ಲಿ ವಿಸ್ತರಣೆ ಆಗಲಿದೆ. ನಮ್ಮ ಮಾಲ್ ನಲ್ಲಿ ಸ್ಥಳೀಯ ೨೫೦ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ಒಟ್ಟಾರೆಯಾಗಿ ೧೦ ಸಾವಿರ ಉದ್ಯೋಗ ಸೃಷ್ಟಿಸಲಾಗಿದೆ ಎಂದರು.

ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ನಾಯಕ ನಟಿ ರುಕ್ಮಿಣಿ ವಸಂತ, ಶಾಂಪಿಗ್ ಪ್ರಿಯರಿಗೆ "ಮಾಂಗಳ್ಯ'''''''' ಹೇಳಿ ಮಾಡಿಸಿದಂತಿದೆ. ಮಕ್ಕಳಿಂದ ವೃದ್ಧರ ವರೆಗೂ ಎಲ್ಲ ತರಹದ ಉಡುಗೆಗಳು ಇಲ್ಲ ಲಭ್ಯ ಇವೆ. ದರದಲ್ಲೂ ರಾಜಿ ಮಾಡಿಕೊಂಡಿರುವ ಸಂಸ್ಥೆ ಅತ್ಯಾಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ಮಹಿಳೆಯರ ಮನಸೂರೆಗೊಳ್ಳುವ ಸಾಂಪ್ರದಾಯಿಕ, ಅತ್ಯಾಧುನಿಕ ಶೈಲಿಯ, ಡಿಜೈನ್ಸ್ ಬಟ್ಟೆಗಳು ಲಭ್ಯವಿವೆ ಎಂದರು.

ಕೈಮಗ್ಗದಿಂದ ತಯಾರಿಸಿದ ವಸ್ತುಗಳನ್ನು ಮಾರುಕಟ್ಟೆ ಟ್ರೆಂಡ್‌ಗೆ ಅನುಗುಣವಾಗಿ ರೂಪಿಸಿರುವುದರಿಂದ ಪ್ರತಿಸ್ಫರ್ಧಿ ಸಂಸ್ಥೆಗಳಿಗಿಂತ ವಿಭಿನ್ನವಾಗಿದೆ ಎಂದರು. ಬಳಿಕ, ವಿವಿಧ ಬಟ್ಟೆ ವಿಭಾಗಗಳನ್ನು ವೀಕ್ಷಿಸಿ, ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು. ನಟಿಯನ್ನು ನೋಡಲು ಬೆಳಗ್ಗೆಯಿಂದಲೇ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಕಾದು ಕುಳಿತಿದ್ದರು.

ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪಾಲಿಕೆ ಮೇಯರ್‌ ಜ್ಯೋತಿ ಪಾಟೀಲ, ಡಿಸಿಪಿ ಮಹಾನಿಂಗ ನಂದಗಾವಿ, ಉದ್ಯಮಿ ವಸಂತ ಲದ್ವಾ, ಕಾಂಗ್ರೆಸ್ ಮುಖಂಡ ರಾಜಶೇಖರ ಮೆಣಸಿನಕಾಯಿ, ಬಾಬಾಜಾನ್ ಮುಧೋಳ, ಮಾಂಗಲ್ಯ ಶಾಪಿಂಗ್ ಮಾಲ್‌ನ ನಿರ್ದೇಶಕರಾದ ಪುಲ್ಲೂರು ನರಸಿಂಹಮೂರ್ತಿ, ಕಾಸಂ ಮಲ್ಲಿಕಾರ್ಜುನ, ಕಾಸಂ ಕೇದಾರನಾಥ್, ಕಾಸಂ ಶಿವ ಪ್ರಸಾದ್, ಪುಲ್ಲೂರು ಅರುಣ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹುಬ್ಬಳ್ಳಿಯ ಜನ ಎಲ್ಲರನ್ನೂ ಬರಮಾಡಿಕೊಳ್ಳುತ್ತಾರೆ. ವಿಶೇಷವಾಗಿ ಬಟ್ಟೆ-ಆಭರಣ ಖರೀದಿಗೆ ಯಾವುದೇ ವಿಶೇಷ ಸಂದರ್ಭ ಬೇಕಾಗಿಲ್ಲ. ಹೀಗಾಗಿ ಜನರು ಮಾಂಗಳ್ಯ ಶಾಪಿಂಗ್ ಮಳಿಗೆಗೆ ಬಂದು ವೀಕ್ಷಿಸಬೇಕು. ಉದ್ಘಾಟನೆಯ ಕೊಡುಗೆಯಾಗಿ ಬಟ್ಟೆಗಳ ಮೇಲೆ ವಿಶೇಷ ರಿಯಾಯಿತಿಯನ್ನೂ ನೀಡುತ್ತಿದ್ದಾರೆ ಎಂದು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.