ಮಂಗಳೂರು ವಿವಿ ಮಟ್ಟದ ಗುಡ್ಡಗಾಡು ಓಟ: ಆಳ್ವಾಸ್ ಚಾಂಪಿಯನ್

| Published : Oct 31 2024, 01:01 AM IST / Updated: Oct 31 2024, 01:02 AM IST

ಮಂಗಳೂರು ವಿವಿ ಮಟ್ಟದ ಗುಡ್ಡಗಾಡು ಓಟ: ಆಳ್ವಾಸ್ ಚಾಂಪಿಯನ್
Share this Article
  • FB
  • TW
  • Linkdin
  • Email

ಸಾರಾಂಶ

ಪುರುಷರ ತಂಡ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಪ್ರಥಮ, ಉಜಿರೆ ಎಸ್.ಡಿ.ಎಂ. ಕಾಲೇಜಿ ತಂಡ ದ್ವಿತೀಯ, ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜು ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಮಹಿಳಾ ತಂಡ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಪ್ರಥಮ, ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜು ತಂಡ ದ್ವಿತೀಯ, ಉಜಿರೆ ಎಸ್.ಡಿ.ಎಂ. ಕಾಲೇಜು ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಆಶ್ರಯದಲ್ಲಿ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆ (ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್) ಬುಧವಾರ ಸುಬ್ರಹ್ಮಣ್ಯದಲ್ಲಿ ನಡೆಯಿತು.

ಬೆಳಗ್ಗೆ ಬಳ್ಪ ಎಂಬಲ್ಲಿ ಗುಡ್ಡಗಾಡು ಓಟಕ್ಕೆ ಚಾಲನೆ ನೀಡಲಾಯಿತು. ಪುರುಷರ ವಿಭಾಗದ ಸ್ಪರ್ಧೆಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ, ರೈಲ್ವೇ ಇಲಾಖೆ ಉದ್ಯೋಗಿ ಬಾಲಭಾಸ್ಕರ ಚಾಲನೆ ನೀಡಿದರು. ಮಹಿಳಾ ವಿಭಾಗದ ಸ್ಪರ್ಧೆಗೆ ರಾಷ್ಟ್ರೀಯ ಕ್ರೀಡಾಪಟು ಗೀತಾಂಜಲಿ ಚಾಲನೆ ನೀಡಿದರು.

ಕಾಲೇಜಿನ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ. ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಪ್ರಸನ್ನ ಕುಮಾರ್, ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಎಂ., ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸಾಯಿಗೀತಾ, ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕರಾಮ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್, ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಲತಾ ಬಿ.ಟಿ., ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ದಿನೇಶ್ ಕೆ. ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜಿನ ಉಪನ್ಯಾಸಕ ಡಾ. ವಿನ್ಯಾಸ್ ಎಚ್. ಸ್ವಾಗತಿಸಿದರು. ಉಪನ್ಯಾಸಕಿ ಪುಷ್ಪಾ ಡಿ. ವಂದಿಸಿದರು. ಉಪನ್ಯಾಸಕಿ ಸುಮಿತ್ರಾ ಕಾರ್ಯಕ್ರಮ ನಿರೂಪಿಸಿದರ. ಮೂಡುಬಿದಿರೆ ಆಳ್ವಾಸ್ ತಂಡ ಎರಡೂ ವಿಭಾಗದಲ್ಲಿ ಚಾಂಪಿಯನ್‌ ಪುರುಷರ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಚಂದನ್ ಯಾದವ್ ಮೊದಲ ಸ್ಥಾನ, ಆಳ್ವಾಸ್ ಕಾಲೇಜಿನ ಗಗನ್ ಎರಡನೇ ಸ್ಥಾನ, ಆಳ್ವಾಸ್ ಕಾಲೇಜಿನ ರೋಹಿಜ್ ಜೋ ಮೂರನೇ ಸ್ಥಾನ, ಆಳ್ವಾಸ್ ಕಾಲೇಜಿನ ನವರತನ್ ನಾಲ್ಕನೇ ಸ್ಥಾನ, ಆಳ್ವಾಸ್ ಕಾಲೇಜಿನ ಅಮನ್ ಕುಮಾರ್ ಐದನೇ ಸ್ಥಾನ ಪಡೆದುಕೊಂಡರು. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಬಸಂತಿ ಕುಮಾರಿ ಮೊದಲ ಸ್ಥಾನ, ಜ್ಯೋತಿ ಎರಡನೇ ಸ್ಥಾನ, ಕುಸ್ಬೂ ಪಾಟೆಲ್ ಮೂರನೇ ಸ್ಥಾನ, ಅನೆಹಲ್ ಜೈಸ್ವಾಲ್ ನಾಲ್ಕನೇ ಸ್ಥಾನ, ದಿಶಾ ಬೊರ್ಸೆ ಐದನೇ ಸ್ಥಾನ ಪಡೆದುಕೊಂಡರು.

ಪುರುಷರ ತಂಡ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಪ್ರಥಮ, ಉಜಿರೆ ಎಸ್.ಡಿ.ಎಂ. ಕಾಲೇಜಿ ತಂಡ ದ್ವಿತೀಯ, ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜು ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಮಹಿಳಾ ತಂಡ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಪ್ರಥಮ, ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜು ತಂಡ ದ್ವಿತೀಯ, ಉಜಿರೆ ಎಸ್.ಡಿ.ಎಂ. ಕಾಲೇಜು ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

ಸಮಾರೋಪ ಸಮಾರಂಭವದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ ಬಹುಮಾನ ಪಟ್ಟಿ ವಾಚಿಸಿದರು.